ಸಕಾಲಕ್ಕೆ ನ್ಯಾಯ ಒದಗಿಸಿಕೊಡಿ: ಸಂತೋಷ ಹೆಗ್ಡೆ

| Published : Aug 19 2025, 01:00 AM IST

ಸಾರಾಂಶ

ನ್ಯಾಯಕ್ಕಾಗಿ ಕೋರ್ಟ್‌ಗೆ ಬರುವ ಕಕ್ಷಿದಾರರಿಗೆ ವಕೀಲರು ಸಕಾಲಕ್ಕೆ ನ್ಯಾಯ ಒದಗಿಸಿಕೊಡಬೇಕು. ವೃತ್ತಿಯ ಕ್ರಿಯಾಶೀಲತೆ ಹೆಚ್ವಿಸಿಕೊಳ್ಳಬೇಕು. ಅಲ್ಲದೆ ನಿರಂತರ ಅಧ್ಯಯನಶೀಲರಾಗಬೇಕು. ಸಣ್ಣ ಸಣ್ಣ ವಿಷಯಗಳಿಗೆ ಕಕ್ಷಿದಾರರನ್ನು ಅಲೆದಾಡಿಸದೆ ತ್ವರಿತಗತಿಯಲ್ಲಿ ನ್ಯಾಯದಾನ ಒದಗಿಸಬೇಕು.

ಯಲಬುರ್ಗಾ:

ವಕೀಲರು ಹೊಸ ವಿಷಯಗಳ ಕುರಿತು ಅಧ್ಯಯನ ಮಾಡಬೇಕೆಂದು ನಿವೃತ್ತ ಲೋಕಾಯುಕ್ತ ಎನ್. ಸಂತೋಷ ಹೆಗ್ಡೆ ಹೇಳಿದರು.ಪಟ್ಟಣದ ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಸಂಘಕ್ಕೆ ಸೋಮವಾರ ಭೇಟಿ ನೀಡಿ ವಕೀಲರು ಹಮ್ಮಿಕೊಂಡಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದರು.ನ್ಯಾಯಕ್ಕಾಗಿ ಕೋರ್ಟ್‌ಗೆ ಬರುವ ಕಕ್ಷಿದಾರರಿಗೆ ವಕೀಲರು ಸಕಾಲಕ್ಕೆ ನ್ಯಾಯ ಒದಗಿಸಿಕೊಡಬೇಕು. ವೃತ್ತಿಯ ಕ್ರಿಯಾಶೀಲತೆ ಹೆಚ್ವಿಸಿಕೊಳ್ಳಬೇಕು. ಅಲ್ಲದೆ ನಿರಂತರ ಅಧ್ಯಯನಶೀಲರಾಗಬೇಕು. ಸಣ್ಣ ಸಣ್ಣ ವಿಷಯಗಳಿಗೆ ಕಕ್ಷಿದಾರರನ್ನು ಅಲೆದಾಡಿಸದೆ ತ್ವರಿತಗತಿಯಲ್ಲಿ ನ್ಯಾಯದಾನ ಒದಗಿಸಬೇಕು ಎಂದರು.

ನ್ಯಾಯಾಂಗ ಕ್ಷೇತ್ರಕ್ಕೆ ಅತಿ ಹೆಚ್ಚು ನ್ಯಾಯಾಧೀಶರು ಮತ್ತು ವಕೀಲರನ್ನು ಕೊಡುಗೆಯಾಗಿ ನೀಡಿದ ಕೀರ್ತಿ ಯಲಬುರ್ಗಾಕ್ಕೆ ಸಲ್ಲುತ್ತದೆ. ವಕೀಲರಿಗೆ ಸಮಾಜ ಬದಲಾಯಿಸುವ ಶಕ್ತಿ ಇದೆ. ವೃತ್ತಿಯ ಜತೆಗೆ ಮಾನವೀಯ ಮೌಲ್ಯ ರೂಢಿಸಿಕೊಳ್ಳಬೇಕು. ನಾಗರಿಕ ಸಮಾಜ ವಕೀಲರ ಮೇಲೆ ಅಪಾರವಾದ ವಿಶ್ವಾಸ ಇಟ್ಟುಕೊಂಡು ವ್ಯಾಜ್ಯ ಬಗೆಹರಿಸಿಕೊಳ್ಳಲು ಬರುತ್ತಾರೆ. ಅವರ ನಂಬಿಕೆ ಉಳಿಸಿಕೊಳ್ಳುವ ಜವಾಬ್ದಾರಿ ವಕೀಲರದ್ದಾಗಿದೆ ಎಂದು ಹೇಳಿದರು.ನಿವೃತ್ತ ಜಿಲ್ಲಾ ನ್ಯಾಯಾಧೀಶ ಎಸ್.ಜಿ. ಪಲ್ಲೇದ, ಎಸ್.ಎನ್. ಗದ್ದಿ, ಹಿರಿಯ ಸಿವಿಲ್ ನ್ಯಾಯಾಧೀಶ ಜೆ. ರಂಗಸ್ವಾಮಿ, ಸಿವಿಲ್ ನ್ಯಾಯಾಧೀಶ ಪಿ. ಸಂಜೀವಕುಮಾರ, ವಕೀಲರ ಸಂಘದ ತಾಲೂಕು ಅಧ್ಯಕ್ಷ ಸುಭಾಶ್ಚಂದ್ರ ಹೊಂಬಳ, ಜಿಲ್ಲಾಧ್ಯಕ್ಷ ಎ.ವಿ. ಕಣವಿ, ವಕೀಲರಾದ ಸಿ.ಎಚ್. ಪಾಟೀಲ್, ಬಿ.ಎಂ. ಶಿರೂರ, ಎಚ್.ಎಚ್. ಹಿರೇಮನಿ, ಎಸ್.ಎ. ನಿಂಗೋಜಿ, ಹನುಮಂತರಾವ್ ಕೆಂಪಳ್ಳಿ, ಆರ್.ಜಿ. ನಿಂಗೋಜಿ, ಆನಂದ ಉಳ್ಳಾಗಡ್ಡಿ, ಅಮರೇಶ ಹಡಪದ, ವಿ.ಎಸ್. ಭೂಸನೂರಮಠ, ಮಲ್ಲನಗೌಡ ಪಾಟೀಲ್, ಸಾವಿತ್ರಿ ಗೊಲ್ಲರ ಸೇರಿದಂತೆ ಮತ್ತಿತರರು ಇದ್ದರು.