ಮತದಾರರ ಪಟ್ಟಿ ಪರಿಷ್ಕರಣೆ, ತಿದ್ದುಪಡಿಗೆ ಅಗತ್ಯ ಮಾಹಿತಿ ನೀಡಿ: ತಹಸೀಲ್ದಾರ್ ಲೋಕೇಶ್

| Published : Mar 14 2025, 12:30 AM IST

ಮತದಾರರ ಪಟ್ಟಿ ಪರಿಷ್ಕರಣೆ, ತಿದ್ದುಪಡಿಗೆ ಅಗತ್ಯ ಮಾಹಿತಿ ನೀಡಿ: ತಹಸೀಲ್ದಾರ್ ಲೋಕೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,56,339 ಮತದಾರರು ಇದ್ದು, ಪುರುಷರು 1,27,010, ಮಹಿಳಾ ಮತದಾರರು 1,29,329, ಇತರೆ 10, ವಿಶೇಷ ಚೇತನರು 6657 ,ಹಿರಿಯ ಮತದಾರರು 3672 ಹಾಗೂ 81 ಸೇವಾ ಮತದಾರರನ್ನು ಗುರುತಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಮತದಾರರ ಪಟ್ಟಿಯನ್ನು ಪರಿಷ್ಕರಿಸಲಾಗುತ್ತಿದೆ. ತಿದ್ದುಪಡಿ ಇದ್ದರೆ ಮಾರ್ಚ್ ಅಂತ್ಯದೊಳಗೆ ಬಿಎಲ್‌ಒಗಳಿಗೆ ಅಗತ್ಯ ಮಾಹಿತಿ ನೀಡುವಂತೆ ತಹಸೀಲ್ದಾರ್ ಲೊಕೇಶ್ ತಿಳಿಸಿದರು.

ಪಟ್ಟಣದ ತಾಲೂಕು ಕಚೇರಿಯಲ್ಲಿ ಮಳವಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಇತರೆ ಚುನಾವಣಾ ವಿಷಯಗಳ ಸಂಬಂಧ ನಡೆದ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರ ಸಭೆಯಲ್ಲಿ ಮಾತನಾಡಿ, ಅರ್ಹ ವ್ಯಕ್ತಿಗಳ ಸೇರ್ಪಡೆಗೆ ಬಾಕಿ ಇದ್ದವರು, ಹೆಸರು ಕೈತಪ್ಪಿನಿಂದ ಡಿಲೀಟ್ ಆಗಿರುವವರು ಹಾಗೂ ಇತರೆ ತಿದ್ದುಪಡಿ ಅವಶ್ಯಕತೆ ಇದ್ದಲ್ಲಿ ಅಗತ್ಯ ಮಾಹಿತಿ ನೀಡಬೇಕು ಎಂದರು.

ಜನವರಿ 2025 ರಂದು ಪ್ರಕಟಿಸಲಾಗಿರುವ ಅಂತಿಮ ಮತದಾರರ ಪಟ್ಟಿಯೂ ಎಲ್ಲಾ ಬಿಎಲ್‌ಓಗಳ ಬಳಿ ಇದೆ. ಪ್ರತಿಯೊಬ್ಬ ಮತದಾರರು ಪರಿಶೀಲನೆ ನಡೆಸಬೇಕು. ಪ್ರತಿ ವರ್ಷವೂ ಬಿಎಲ್‌ಓಗಳ ವತಿಯಿಂದ ನಡೆಸಲಾಗುವ ಮನೆ ಸಮೀಕ್ಷೆ ಮತ್ತು ವಿಶೇಷ ನೋಂದಣಿ ಅಭಿಯಾನಕ್ಕೆ ಸಹಕಾರ ನೀಡಬೇಕೆಂದು ಕೋರಿದರು.

ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,56,339 ಮತದಾರರು ಇದ್ದು, ಪುರುಷರು 1,27,010, ಮಹಿಳಾ ಮತದಾರರು 1,29,329, ಇತರೆ 10, ವಿಶೇಷ ಚೇತನರು 6657 ,ಹಿರಿಯ ಮತದಾರರು 3672 ಹಾಗೂ 81 ಸೇವಾ ಮತದಾರರನ್ನು ಗುರುತಿಸಲಾಗಿದೆ ಎಂದರು.

ತಾಲೂಕಿನಲ್ಲಿ ಒಟ್ಟು 272 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಎಲ್ಲಾ ಮತಗಟ್ಟೆಗಳೂ ಸಹ ಸರ್ಕಾರಿ ಕಟ್ಟಡಗಳಲ್ಲಿ ನಡೆಯುತ್ತಿವೆ. ಎಲ್ಲಾ ಮತಗಟ್ಟೆಗಳು ಸುಸ್ಥಿತಿಯಲ್ಲಿವೆ ಎಂದರು.

ಯಾವುದೇ ರೀತಿಯ ದುರಸ್ಥಿಯ ಅವಶ್ಯಕತೆ ಕಂಡು ಬಂದಲ್ಲಿ ಸಂಬಂಧಪಟ್ಟ ಗ್ರಾಪಂ ಹಾಗೂ ಶಿಕ್ಷಣ ಇಲಾಖೆಯವರ ಸಹಯೋಗದೊಂದಿಗೆ ಚುನಾವಣಾ ಪೂರ್ವ ದುರಸ್ಥಿಯನ್ನು ಮಾಡಲಾಗುವುದು, ಮತಗಟ್ಟೆಗಳಿಗೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಸಲಹೆ ಸೂಚನೆಗಳನ್ನು ಆಹ್ವಾನಿಸಲಾಗಿದೆ ಎಂದರು.

ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರಾದ ಚಿಕ್ಕಲಿಂಗಯ್ಯ, ಮಾರ್ಕಾಲು ಮಾಧು, ದೊಡ್ಡಯ್ಯ, ಕಾಂತರಾಜು, ಕಂಬರಾಜು, ಕಿರಣ್‌ಶಂಕರ್, ಆಯುಬ್‌ಪಾಷ, ಶಿವಸ್ವಾಮಿ, ನಂಜುಂಡಸ್ವಾಮಿ ಸೇರಿದಂತೆ ಇತರರು ಇದ್ದರು.