ನಗರ ವ್ಯಾಪ್ತಿಯಲ್ಲಿ ಸೈಟ್‍ಗಳ ದರ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಆದ್ದರಿಂದ ಸಹಕಾರಿ ಕ್ಷೇತ್ರದ ಮೂಲಕ ಜಮೀನು ಖರೀದಿಸಿ ಲೇ ಔಟ್ ಮಾಡಿ ಶಿಕ್ಷಕರಿಗೆ ಕಡಿಮೆ ದರದಲ್ಲಿ ಸೈಟ್‍ಗಳನ್ನು ನೀಡಬೇಕೆಂದು ಡಿಸಿಸಿ ಬ್ಯಾಂಕ್ ಹಾಗೂ ಎಂಎಡಿಬಿ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಸಲಹೆ ನೀಡಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರ ವ್ಯಾಪ್ತಿಯಲ್ಲಿ ಸೈಟ್‍ಗಳ ದರ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಆದ್ದರಿಂದ ಸಹಕಾರಿ ಕ್ಷೇತ್ರದ ಮೂಲಕ ಜಮೀನು ಖರೀದಿಸಿ ಲೇ ಔಟ್ ಮಾಡಿ ಶಿಕ್ಷಕರಿಗೆ ಕಡಿಮೆ ದರದಲ್ಲಿ ಸೈಟ್‍ಗಳನ್ನು ನೀಡಬೇಕೆಂದು ಡಿಸಿಸಿ ಬ್ಯಾಂಕ್ ಹಾಗೂ ಎಂಎಡಿಬಿ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಸಲಹೆ ನೀಡಿದರು.ಕರ್ನಾಟಕ ರಾಜ್ಯ ಸರ್ಕಾರಿ ಮತ್ತು ಅನುದಾತ ಪ್ರಾಥಮಿಕ ಶಾಲಾ ಶಿಕ್ಷಕರ ಗೃಹ ನಿರ್ಮಾಣ ಸಹಕಾರ ಸಂಘದ ವತಿಯಿಂದ ಸಂಘದ ಭಾನುವಾರ ಇಲ್ಲಿನ ಪೊಲೀಸ್ ಭವನದಲ್ಲಿ ಹಮ್ಮಿಕೊಂಡಿದ್ದ 16ನೇ ವಾರ್ಷಿಕ ಮಹಾಸಭೆ, ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಶಿಕ್ಷಕ ವೃತಿ ಅತ್ಯಂತ ಪವಿತ್ರವಾದುದ್ದು. ಈ ವೃತ್ತಿಯಿಂದ ಗೌರವ ಸಂಪಾದಿಸಬಹುದೇ ಹೊರತು ಬೇರೆ ಸಂಪಾದನೆ ಸಾಧ್ಯವಿಲ್ಲ. ಶಿಕ್ಷಕರು ತಾವು ಗಳಿಸುವ ಆದಾಯದಲ್ಲೇ ಕನಿಷ್ಠ ನಿವೃತ್ತಿಯ ವೇಳೆಗಾದರೂ ತಲೆಯ ಮೇಲೊಂದು ಸೂರು (ಮನೆ) ನಿರ್ಮಿಸಿಕೊಳ್ಳುವಂತಾಗಲಿ. ಈ ನಿಟ್ಟಿನಲ್ಲಿ ಶಿಕ್ಷಕರ ಗೃಹ ನಿರ್ಮಾಣ ಸಹಕಾರ ಸಂಘವು ಕಾರ್ಯೋನ್ಮುಖವಾಗಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ಶಿಕ್ಷಕರು ಸ್ವಂತ ಮನೆಯನ್ನು ಹೊಂದಬೇಕೆಂಬುವುದೇ ಗೃಹ ನಿರ್ಮಾಣ ಸಹಕಾರ ಸಂಘದ ಗುರಿಯಾಗಿದೆ. ಸೈಟ್‍ಗಳ ಬೆಲೆ ಜಾಸ್ತಿಯಾಗಿದ್ದು, ಗೃಹ ನಿರ್ಮಾಣದ ವಸ್ತುಗಳೂ ಕೂಡ ದುಬಾರಿಯಾಗಿವೆ. ಇಂತಹ ಪರಿಸ್ಥಿತಿಯಲ್ಲೂ ಶಿಕ್ಷಕರು ಕಡಿಮೆ ವೆಚ್ಚದಲ್ಲಿ ಸ್ವಂತ ಮನೆ ಹೊಂದಲು ಸಂಘವು ಅಗತ್ಯ ಸಹಕಾರ ನೀಡುವಂತಾಗಬೇಕೆಂದು ಆಶಿಸಿದರು.ಶಿಕ್ಷಕರ ಗೃಹ ನಿರ್ಮಾಣ ಸಹಕಾರ ಸಂಘವು ಕೇವಲ ಶಿವಮೊಗ್ಗ ಜಿಲ್ಲೆಗಷ್ಟೇ ಸೀಮಿತವಾಗದೆ ರಾಜ್ಯ ವ್ಯಾಪ್ತಿ ವ್ಯಾಪಿಸಿರುವುದು ಹೆಮ್ಮೆಯ ಸಂಗತಿ. ಈ ಕಾರಣಕ್ಕಾಗಿ ಸಂಘದ ಅಧ್ಯಕ್ಷರಾದ ಮಹಾಬಲೇಶ್ವರ ಹೆಗಡೆ ಅಭಿನಂದನಾರ್ಹರು. ಅವರು ಕೇವಲ ಶೈಕ್ಷಣಿಕ ಕ್ಷೇತ್ರಕಷ್ಟೇ ಸೀಮಿತವಾಗದೆ ಸಹಕಾರ ಕ್ಷೇತ್ರದಲ್ಲೂ ಕೂಡ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಸರಳತೆ, ತ್ವರಿತ ಸೇವೆ, ಪಾರದರ್ಶಕತೆ ಎಂಬ ಧ್ಯೇಯದೊಂದಿಗೆ ಶಿಕ್ಷಕರ ಶ್ರೇಯೋಭಿವೃದ್ದಿಗಾಗಿ ಶ್ರಮಿಸುತ್ತಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶಿಕಾರಿಪುರದ ಕೆ.ಬಿ. ಲೋಕೇಶಪ್ಪ , ತೀರ್ಥಹಳ್ಳಿಯ ಆರ್. ಮಂಜುನಾಥ್ , ಸಂಘದ ಉಫಾಧ್ಯಕ್ಷ ಎಂ.ನಾಗರಾಜಪ್ಪ, ಪ್ರಭಾರ ಕಾಯದರ್ಶಿ ಎನ್. ನಾಗರಾಜ್ ಅಡಿಗ ಮತ್ತಿತರರು ಭಾಗವಹಿಸಿದ್ದರು.ಇದೇ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಾಗೂ ನಿವೃತ್ತ ಶಿಕ್ಷಕರು ಮತ್ತು ಜಿಲ್ಲಾ ಹಾಗೂ ತಾಲೂಕು ಮಟ್ಟದ ಉತ್ತಮ ಶಿಕ್ಷಕರನ್ನು ಸನ್ಮಾನಿಸಲಾಯಿತು. ಉಮಾ ಪ್ರಾರ್ಥಿಸಿ, ನಾಗರಾಜಪ್ಪ ಎಂ. ಸ್ವಾಗತಿಸಿ, ಮಹಾಬಲೇಶ್ವರ ಹೆಗಡೆ ಪ್ರಾಸ್ತಾವಿಸಿ, ಗಿಳಲಗುಂಡಿಯ ಶಿಕ್ಷಕಿ ಎನ್.ಆರ್. ಪವಿತ್ರ ಮತ್ತು ನಾಗರಾಜ್ ನಿರೂಪಿಸಿ, ಕೆ.ವಿ.ಪುಟ್ಟಪ್ಪ ವಂದಿಸಿದರು.
--------------------ಪೊಟೋ: 06ಎಸ್‌ಎಂಜಿಕೆಪಿ04
ಶಿವಮೊಗ್ಗದ ಪೋಲಿಸ್ ಭವನದಲ್ಲಿ ರಾಜ್ಯ ಸರ್ಕಾರಿ ಮತ್ತು ಅನುದಾತ ಪ್ರಾಥಮಿಕ ಶಾಲಾ ಶಿಕ್ಷಕರ ಗೃಹ ನಿರ್ಮಾಣ ಸಹಕಾರ ಸಂಘದ ವತಿಯಿಂದ ಸಂಘದ ಭಾನುವಾರ ಹಮ್ಮಿಕೊಂಡಿದ್ದ 16ನೇ ವಾರ್ಷಿಕ ಮಹಾಸಭೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.