ರೈತರಿಗೆ ಕೊಯ್ಲೋತ್ತರ ತಂತ್ರಜ್ಞಾನ, ಮೌಲ್ಯವರ್ಧನೆ ಮಾಹಿತಿ ನೀಡಿ

| Published : Mar 20 2024, 01:16 AM IST

ರೈತರಿಗೆ ಕೊಯ್ಲೋತ್ತರ ತಂತ್ರಜ್ಞಾನ, ಮೌಲ್ಯವರ್ಧನೆ ಮಾಹಿತಿ ನೀಡಿ
Share this Article
  • FB
  • TW
  • Linkdin
  • Email

ಸಾರಾಂಶ

ರೈತರಿಗೆ ಮುಖ್ಯವಾಗಿ ಕೊಯ್ಲೋತ್ತರ ತಂತ್ರಜ್ಞಾನ ಮತ್ತು ಮೌಲ್ಯವರ್ಧನೆ ಕುರಿತು ಮಾಹಿತಿ ನೀಡಬೇಕು. ಸುಧಾರಿತ ಬೆಳೆ ಪದ್ಧತಿಗಳ ಬಗ್ಗೆಯೂ ಮಾಹಿತಿ ತಲುಪಿಸಬೇಕು ಎಂದು ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಕುಲಪತಿ ಡಾ. ಆರ್.ಸಿ.ಜಗದೀಶ್ ತರೀಕೆರೆಯಲ್ಲಿ ಹೇಳಿದ್ದಾರೆ.

ಕೃಷಿ ಕಾಮಧೇನು ಮಾಹಿತಿ ಕೇಂದ್ರಕ್ಕೆ ಭೇಟಿ ನೀಡಿದ ಕುಲಪತಿ ಡಾ. ಆರ್.ಸಿ. ಜಗದೀಶ್ ಭೇಟಿ ವಿದ್ಯಾರ್ಥಿಗಳಿಗೆ ಸಲಹೆ

ಕನ್ನಡಪ್ರಭವಾರ್ತೆ ತರೀಕೆರೆ

ರೈತರಿಗೆ ಮುಖ್ಯವಾಗಿ ಕೊಯ್ಲೋತ್ತರ ತಂತ್ರಜ್ಞಾನ ಮತ್ತು ಮೌಲ್ಯವರ್ಧನೆ ಕುರಿತು ಮಾಹಿತಿ ನೀಡಬೇಕೆಂದು ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಕುಲಪತಿ ಡಾ.ಆರ್.ಸಿ.ಜಗದೀಶ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಮಂಗಳವಾರ ತಾಲೂಕಿನ ಬಾವಿಕೆರೆ ಗ್ರಾಮದಲ್ಲಿ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಬಿಎಸ್ಸಿ (ಕೃಷಿ) ವಿದ್ಯಾರ್ಥಿಗಳಿಂದ ತಯಾರಿಸಲ್ಪಟ್ಟ ಕೃಷಿ ಕಾಮಧೇನು ಮಾಹಿತಿ ಕೇಂದ್ರಕ್ಕೆ ಭೇಟಿ ನೀಡಿದ ಅವರು, ಸುಧಾರಿತ ಬೆಳೆ ಪದ್ಧತಿಗಳ ಬಗ್ಗೆ ರೈತರಿಗೆ ಮಾಹಿತಿ ತಲುಪಿಸಬೇಕು ಎಂದು ತಿಳಿಸಿದರು.

ಶಿವಮೊಗ್ಗ ಕೃಷಿ ಮಹಾವಿದ್ಯಾಲಯದಲ್ಲಿ ಹೊಸದಾಗಿ ಸ್ಥಾಪನೆಗೊಂಡಿರುವ ಆಹಾರ ಮತ್ತು ಪೌಷ್ಟಿಕತೆ ಲ್ಯಾಬ್ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿ, ವಿದ್ಯಾರ್ಥಿಗಳು ಮುಖ್ಯವಾಗಿ ಮೊಳಕೆ ಬರಿಸಿದ ಕಾಳುಗಳಿಂದ ಮೌಲ್ಯವರ್ಧನೆ ಉತ್ಪನ್ನಗಳು ಹಾಗೂ ದೈನಂದಿನ ಆಹಾರದಲ್ಲಿ ಅವುಗಳ ಮಹತ್ವವನ್ನು ತಿಳಿಸಬೇಕು, ಇತ್ತೀಚಿನ ಕೃಷಿ ಚಟುವಟಿಕೆಯಲ್ಲಿ ಪ್ರಮುಖವಾಗಿ ಕೇಳಿಬರುತ್ತಿರುವ ಸಾವಯವ ಕೃಷಿ ಮತ್ತು ಮುಖ್ಯ ಬೆಳೆಯೊಂದಿಗೆ ಬೆಳೆಯಬಹುದಾದ ಅಂತರಬೆಳೆಯ ಕುರಿತು ರೈತರಿಗೆ ಹೆಚ್ಚಿನ ಮಾಹಿತಿ ಕೊಡಬೇಕು ಎಂದು ತಿಳಿಸಿದರು.

ಮಾರ್ಚ್ 26ರಂದು ಬಾವಿಕೆರೆ ಗ್ರಾಮದಲ್ಲಿ ಆಯೋಜಿಸಲಾದ ಕೃಷಿ ಮೇಳದ ತಯಾರಿ ಬಗ್ಗೆ ಸಹ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಸಬೇಕು. ಗ್ರಾಮದ ರೈತ ಬಾಂಧವರಿಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ಕೃಷಿ ಉತ್ಪನ್ನಗಳ ಬಗ್ಗೆ ವಸ್ತು ಪ್ರದರ್ಶನ ನೀಡಬೇಕು ಎಂದು ತಿಳಿಸಿದರು. ಕೃಷಿ ಸಂಬಂಧಿತ ಆದಾಯ ಉತ್ಪಾದಿತ ಇತರ ಚಟುವಟಿಕೆಯಾದ ಅಜೋಲ ಕೃಷಿ, ಅಣಬೆ ಕೃಷಿ, ಚಿಪ್ಸ್, ಇತರ ಕಾಂಡಿಮೆಂಟ್ಸ್ ತಯಾರಿಕೆಯ ವಿಧ ಮತ್ತು ಫಲಿತಾಂಶ ಪ್ರಾತ್ಯಕ್ಷಿಕೆ ತಿಳಿಸಿಕೊಡಬೇಕು ಎಂದು ಅವರು ಹೇಳಿದರು.

ಕೃಷಿ ವಿದ್ಯಾರ್ಥಿಯಾದ ಮನೋಜಿ ರಾವ್ ಮೋರೆ ಅವರು ಮಾತನಾಡಿ ಮಾಹಿತಿ ಕೇಂದ್ರದಲ್ಲಿ ಹಾಕಿರುವ ವಿವಿಧ ಮಾಹಿತಿಯನ್ನು ಕುಲಪತಿ ಡಾ. ಆರ್.ಪಿ. ಜಗದೀಶ್ ಅವರಿಗೆ ವಿವರಿಸಿದರು.

ಕೃಷಿ ಮಹಾವಿದ್ಯಾಲಯ ಶಿವಮೊಗ್ಗದ ಡೀನ್ (ಕೃಷಿ) ಡಾ. ಆರ್. ಗಣೇಶ್ ನಾಯ್ಕ್, ಗ್ರಾಮೀಣ ಕೃಷಿ ಕಾರ್ಯನುಭವ ಕಾರ್ಯಕ್ರಮದ ಸಂಯೋಜಕರಾದ ಡಾ. ಗಜೇಂದ್ರ ಟಿ.ಎಚ್., ಸಹ ಸಂಯೋಜಕರಾದ ಡಾ. ರುದ್ರೇಗೌಡ ಎಫ್. ಸಿ., ಬಾವಿಕೆರೆ ಕೃ.ತೋ.ಸಂ.ಕೇ. ಮುಖ್ಯಸ್ಥರಾದ ಎಂ. ಬಸವರಾಜ್ ಹಾಗೂ ವಿಜ್ಞಾನಿ ಡಾ. ಮಂಜುನಾಥ್ ಕುದರಿ, ಗ್ರಾಮದ ರೈತರಾದ ಸೀತಾರಾಮ್, ತಿಲಕ್, ನಾಗರಾಜ್, ವಿದ್ಯಾರ್ಥಿ ಆದಿತ್ಯ, ಭರತ್, ದೀಕ್ಷಿತ್, ಗಗನ್ ಕಾಂತೇಶ್, ರಾಜೆಂದರ್, ನಿತೀಶ್, ಶರತ್ ಕುಮಾರ್, ಶರತ್ ಮಾಳಗಿ, ಶ್ರೇಯಸ್, ಶುಶಾನ್, ವಿಶ್ವನಾಥ್ ಗೌಡ,.ಶಾಲಾ ಮುಖ್ಯೋಪಾಧ್ಯಾಯರಾದ ವಸಂತಕುಮಾರಿ ಉಪಸ್ಥಿತರಿದ್ದರು.-----------------

19ಕೆಟಿಆರ್.ಕೆ.1

ತರೀಕೆರೆ ತಾಲೂಕಿನ ಬಾವಿಕೆರೆ ಗ್ರಾಮದಲ್ಲಿ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಬಿಎಸ್ಸಿ (ಕೃಷಿ) ವಿದ್ಯಾರ್ಥಿಗಳಿಂದ ತಯಾರಿಸಲ್ಪಟ್ಟ ಕೃಷಿ ಕಾಮಧೇನು ಮಾಹಿತಿ ಕೇಂದ್ರಕ್ಕೆ ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ.ಆರ್.ಸಿ.ಜಗದೀಶ್ ಭೇಟಿ ನೀಡಿ ಮಾತನಾಡಿದರು.