ಸಾರಾಂಶ
ಕನ್ನಡಪ್ರಭ ವಾರ್ತೆ ಹರಪನಹಳ್ಳಿ
ತಾಲೂಕಿನ ಅರಸೀಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾರದಾ ಪೂಜೆ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಮಾಜಿ ಸಂಸದ ವೈ. ದೇವೇಂದ್ರಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈ ಶಾಲೆಗೆ 103 ವರ್ಷ ತುಂಬಿದ್ದು, ಸುವ್ಯವಸ್ಥೆ ಕಟ್ಟಡ ಹಾಗೂ ಉತ್ತಮ ಕಲಿಕಾ ವಾತಾವರಣವಿದೆಲ, ಈ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ಉನ್ನತ ಹುದ್ದೆಯಲ್ಲಿದ್ದು, ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ಬಡ ವಿದ್ಯಾರ್ಥಿಗಳು, ಹಾಗಾಗಿ ಶಿಕ್ಷಕರು ಬಾಲ್ಯದಲ್ಲಿಯೇ ಗುಣಮಟ್ಟದ ಶಿಕ್ಷಣ ನೀಡಬೇಕು. ನಾನು ಇದೇ ಶಾಲೆಯಲ್ಲಿ ಓದಿದ್ದೇನೆ ಎಂದ ಅವರು, ಪೋಷಕರು ಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿ ಹಾಗೂ ಸಹಕಾರವಿರಬೇಕು, ಶಿಕ್ಷಕರು ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕು. ಈ ಶಾಲೆಯಲ್ಲಿ ಓದಿದ ಮಕ್ಕಳು ಉನ್ನತ ಮಟ್ಟಕ್ಕೆ ಹೋಗಿ ಗುರುಗಳಿಗೆ, ತಂದೆ ತಾಯಂದಿರಿಗೆ ಹಾಗೂ ಊರಿಗೆ ಹೆಸರು ತರುವಂತರಾಗಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಲೇಪಾಕ್ಷಪ್ಪ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳು ಹೆಚ್ಚಾಗಿ ಐಎಎಸ್, ಐಪಿಎಸ್ ಹುದ್ದೆಗೆ ಹೋಗಿದ್ದು, ಮಕ್ಕಳು ಶಿಕ್ಷಣದ ಜತೆಗೆ ಸಂಸ್ಕಾರ, ಸಂಸ್ಕೃತಿ ಹಾಗೂ ಉತ್ತಮ ನಾಗರಿಕತೆ ಹೊಂದಿರುತ್ತಾರೆ, ಪೋಷಕರು ತಮ್ಮ ಮಕ್ಕಳ ಕಲಿಕೆಯಲ್ಲಿ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.ಮಕ್ಕಳ ಕಲಿಕೆ ಉತ್ತಮಗೊಳಿಸುವಲ್ಲಿ ಶಿಕ್ಷಕರ ಹಾಗೂ ಪೋಷಕರು ಪಾತ್ರ ಅತ್ಯವಶ್ಯಕ. ಈ ವರ್ಷದಿಂದ ನಾವು ಎಲ್‌ಕೆಜಿ, ಯುಕೆಜಿ ಹಾಗೂ ಒಂದನೇ ತರಗತಿ ಇಂಗ್ಲಿಷ್ ಮಾಧ್ಯಮದಲ್ಲಿ ಪ್ರಾರಂಭಿಸಿದ್ದೇವೆ, ಕಲಿಕೆಯಲ್ಲಿ ಅತ್ಯುತ್ತಮ ಪ್ರಗತಿ ಹೊಂದುತ್ತಿದ್ದಾರೆ ಹಾಗೂ ಇತರ ಚಟುವಟಿಕೆಗಳಲ್ಲೂ ಸಹ ಭಾಗವಹಿಸುತ್ತಿದ್ದಾರೆ ಎಂದ ಅವರು, ಎಲ್‌ಕೆಜಿ, ಯುಕೆಜಿ ತರಗತಿಯೇ ಮಕ್ಕಳಿಗೆ ಮುಖ್ಯ ಬುನಾದಿಯಾಗಿದೆ, ಆದ್ದರಿಂದ ಮಕ್ಕಳನ್ನು ವಿದ್ಯಾವಂತರನ್ನಾಗಿಸುವುದು ಶಿಕ್ಷಕರ ಕರ್ತವ್ಯ ಎಂದು ಹೇಳಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಪ್ರಾರಂಭವಾಗಲಿವೆ, ಪರೀಕ್ಷೆಯನ್ನು ಹಬ್ಬದ ರೀತಿಯಲ್ಲಿ ಆಚರಿಸೋಣ, ನಮ್ಮ ಮಕ್ಕಳು ಪರೀಕ್ಷೆಯಲ್ಲಿ ಯಾರೂ ಫೇಲ್ ಆಗಬಾರದು ಎಂಬುವುದೇ ಹರಪನಹಳ್ಳಿ ತಾಲೂಕಿನ ಶಿಕ್ಷಣ ಇಲಾಖೆಯ ದೃಢ ನಿರ್ಧಾರವಾಗಿದೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಭಿತ್ತಿಪತ್ರ ವಿತರಿಸಿ, ಭಯವಿಲ್ಲದೇ ಪರೀಕ್ಷೆ ಬರೆಯಿರಿ ಎಂದು ಧೈರ್ಯ ತುಂಬಿದರು.
ಎಸ್‌ಡಿಎಂಸಿ ಅಧ್ಯಕ್ಷ ಕೆ. ರಂಗಪ್ಪ ಅಧ್ಯಕ್ಷತೆ ವಹಿಸಿದ್ದರು, ಉಪಾಧ್ಯಕ್ಷೆ ಕೆ. ನೀಲಾಂಬಿಕಾ ಬಸವರಾಜ್, ಮುಖ್ಯಅತಿಥಿಗಳಾಗಿ ಗ್ರಾಪಂ ಅಧ್ಯಕ್ಷೆ ಹಾಲಮ್ಮ ನಾಗರಾಜ್, ಉಪಾಧ್ಯಕ್ಷೆ ನಂದ್ಯಮ್ಮ, ರಾಜ್ಯ ಮಹಿಳಾ ಸಂಘದ ಉಪಾಧ್ಯಕ್ಷೆ ಪದ್ಮಲತಾ, ದೈಹಿಕ ಕ್ಷೇತ್ರಾಧಿಕಾರಿ ಷಣ್ಮುಖಪ್ಪ, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಬಂದೋಳ್ ಸಿದ್ದೇಶ್, ಬಿಆರ್ ಪಿ ನಾಗರಾಜ್, ಪ್ರಶಾಂತ್ ಪಾಟೀಲ್, ಎ.ಎಚ್. ಪಂಪಣ್ಣ, ವೆಂಕೋಬಶೆಟ್ರು, ಗ್ರಾಪಂ ಸದಸ್ಯರಾದ ಅಡ್ಡಿ ಚನ್ನವೀರಪ್ಪ, ಅದಾಮ್ ಸಾಹೇಬ್, ಎಂ. ಚಂದ್ರಪ್ಪ,ಮುಖ್ಯ ಗುರು ಮಾಲತೇಶ್ ಪಾಟೀಲ್, ರ‍್ಜುನ್ ಪರಸಪ್ಪ, ಕಥೆಗಾರ ಮಂಜಣ್ಣ, ಮಟ್ಟಿ ಹನುಮಂತಪ್ಪ, ಮಟ್ಟಿ ನಾಗರಾಜ್, ಸಂಘದ ಪದಾಧಿಕಾರಿಗಳು, ಎಸ್ ಡಿಎಂಸಿ ಸದಸ್ಯರು, ಗ್ರಾಪಂ ಸದಸ್ಯರು, ಪೋಷಕರು, ಸಹ ಶಿಕ್ಷಕರು ಹಾಗೂ ಶಾಲಾ ಮಕ್ಕಳು ಹಾಜರಿದ್ದರು.