ಸಾರಾಂಶ
ಮರಕುಂಬಿಯಲ್ಲಿ 2002ರಲ್ಲಿ ದಲಿತರನ್ನು ಕಂಬಕ್ಕೆ ಕಟ್ಟಿ ಥಳಿಸಲಾಗಿತ್ತು. ಆಗ ಐವರಿಗೆ ಅಲ್ಪಸ್ವಲ್ಪ ಪರಿಹಾರ ಬಂದಿದೆ. ದಲಿತರ ಮೂಲಭೂತ ಸಮಸ್ಯೆಯಾದ ಮನೆ, ನಿವೇಶನ, ಭೂ ಒಡೆತನ ಯೋಜನೆ ಅಡಿ ಸಾಗುವಳಿ ಭೂಮಿ, ಉದ್ಯೊಗ ಯಾವುದು ಸಿಗಲಿಲ್ಲ, ಹಲವು ಬಾರಿ ಹೋರಾಟ ನಡೆಸಿದರು ಯಾವುದೇ ಪ್ರಯೋಜನವಾಗಿಲ್ಲ.
ಗಂಗಾವತಿ:
ದೌರ್ಜನ್ಯಕ್ಕೆ ಒಳಗಾದ ದಲಿತರಿಗೆ ಪರಿಹಾರ, ಸೌಲಭ್ಯ ಒದಗಿಸಬೇಕೆಂದು ಒತ್ತಾಯಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಎಂ)ದ ಕೊಪ್ಪಳ ಜಿಲ್ಲಾ ಕಾರ್ಯದರ್ಶಿ ನಿರುಪಾದಿ ಬೆಣಕಲ್ ನೇತೃತ್ವದಲ್ಲಿ ಸಮಾಜ ಕಲ್ಯಾಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು.ತಾಲೂಕಿನ ಮರಕುಂಬಿಯಲ್ಲಿ 2002ರಲ್ಲಿ ದಲಿತರನ್ನು ಕಂಬಕ್ಕೆ ಕಟ್ಟಿ ಥಳಿಸಲಾಗಿತ್ತು. ಆಗ ಐವರಿಗೆ ಅಲ್ಪಸ್ವಲ್ಪ ಪರಿಹಾರ ಬಂದಿದೆ. ದಲಿತರ ಮೂಲಭೂತ ಸಮಸ್ಯೆಯಾದ ಮನೆ, ನಿವೇಶನ, ಭೂ ಒಡೆತನ ಯೋಜನೆ ಅಡಿ ಸಾಗುವಳಿ ಭೂಮಿ, ಉದ್ಯೊಗ ಯಾವುದು ಸಿಗಲಿಲ್ಲ, ಹಲವು ಬಾರಿ ಹೋರಾಟ ನಡೆಸಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
2014ರಲ್ಲಿ ದಲಿತರ ಮೇಲೆ ಹಲ್ಲೆ, ದೌರ್ಜನ್ಯ, ದಬ್ಬಾಳಿಕೆ ನಡೆಸಿ ಕೆಲವು ಮನೆಗಳಿಗೆ ಬೆಂಕಿ ಹಾಕಿ ದಲಿತರನ್ನು ಜೀವಂತ ಸುಡಬೇಕೆಂಬ ಹುನ್ನಾರ ನಡೆಸಿದ್ದರು. ಅದೃಷ್ಟವಶಾತ್ ಪ್ರಾಣ ಹಾನಿಯಾಗಲಿಲ್ಲ. ಯಾಕೆ ಈ ರೀತಿ ದಬ್ಬಾಳಿಕೆ ಎಂದು ಕೇಳುವಂತಿಲ್ಲ. ದಲಿತರು ಕ್ಷೌರದ ಅಂಗಡಿ ಮತ್ತು ಹೋಟೆಲ್ ಪ್ರವೇಶ ಬಯಸಿದ್ದೇ ದೊಡ್ಡ ತಪ್ಪಾಗಿದೆ ಎನ್ನುವ ಹಾಗಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ಎಲ್ಲರೊಂದಿಗೆ ಹೊಂದಾಣಿಕೆಯಾಗಿ ಬಾಳಬೇಕೆಂಬ ಸಂಘಟನೆಯ ಮತ್ತು ದಲಿತರ ಕನಸು ನನಸಾಗಿಲ್ಲ. ಈ ಕುರಿತು ಸಮಾಜ ಕಲ್ಯಾಣ ಇಲಾಖೆ ಗಮನಹರಿಸಿ ಮರಕುಂಬಿಯ ದಲಿತರಿಗೆ ಮನೆ, ನಿವೇಶನ ಕೊಡಬೇಕು, ಅಂಬೇಡ್ಕರ್ ವಸತಿ ಯೊಜನೆಯಡಿ ಗುಂಪು ಮನೆ ನಿರ್ಮಿಸಿ ದೌರ್ಜನ್ಯಕ್ಕೊಳಗಾದ ದಲಿತ ಕುಟುಂಬಗಳಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಈ ವೇಳೆ ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಬಸವರಾಜ ಮರಕುಂಬಿ, ಗಂಗಾವತಿ ತಾಲೂಕು ಕಾರ್ಯದರ್ಶಿ ಹುಸೇನಪ್ಪ ಕೆ., ಶಾಖಾ ಕಾರ್ಯದರ್ಶಿ ಹುಲುಗಪ್ಪ ಮರುಕುಂಬಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))