ಸಾರಾಂಶ
ರೈತನು ಇಂದು ಅನೇಕ ಅಡೆತಡೆಗಳ ನಡುವೆಯೂ ಸಹ ದೇಶಕ್ಕೆ ಅನ್ನ ನೀಡಲು ಕೃಷಿಯಲ್ಲಿ ತೊಡಗಿದ್ದಾನೆ, ದೇಶದ ಜನಸಂಖ್ಯೆ ಸ್ಫೋಟದಿಂದ ಆಹಾರ ಕೊರತೆ ಉಂಟಾಗಿದೆ, ಇದರಿಂದ ಕುಗ್ಗದೆ ರೈತ ಇರುವ ಸೌಲಭ್ಯಗಳನ್ನು ಬಳಸಿಕೊಂಡು ದೇಶಕ್ಕೆ ಆಹಾರ ಕೊಡುತ್ತಿದ್ದಾನೆ. ರೈತ ಬೆಳೆದ ತನ್ನ ಉತ್ಪನ್ನಗಳಿಗೆ ಆತನೇ ಬೆಲೆ ನಿಗದಿ ಮಾಡುವ ಹಕ್ಕನ್ನು ಸರ್ಕಾರ ನೀಡಬೇಕು.
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ರೈತರು ದೇಶದ ಬೆನ್ನೆಲಬು ಎಂದು ಕೇವಲ ವೇದಿಕೆಗಳಲ್ಲಿ ಭಾಷ ಮಾಡಿದರೆ ಸಾಲದು ಅವರ ಬೆಳೆಗಳಿಗೆ ಸರ್ಕಾರ ಸೂಕ್ತವಾದ ಮಾರುಕಟ್ಟೆ ಕಲ್ಪಿಸಿ ಆರ್ಥಿಕವಾಗಿ ಬೆಳೆಯಲು ಉತ್ತೇಜನ ನೀಡಿದಾಗ ಮಾತ್ರ ರೈತರೇ ನಿಜವಾದ ದೇಶದ ಬೆನ್ನೆಲಬು ಎಂಬ ಪದಕ್ಕೆ ಅರ್ಥ ಬರುವುದು ಎಂದು ಕೃಷಿಕ ಸಮಾಜದ ಅಧ್ಯಕ್ಷ ಜಿ.ರಾಜಾರೆಡ್ಡಿ ಅಭಿಪ್ರಾಯಪಟ್ಟರು.ಪಟ್ಟಣದ ಕೃಷಿಕ ಸಮಾಜದ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದ ೫ನೇ ಪ್ರಧಾನಿಯಾದ ಚೌಧರಿ ಚರಣ್ ಸಿಂಗ್ ರೈತ ನಾಯಕರೂ ಆಗಿದ್ದರು. ಅವರ ನೆನಪಿಗಾಗಿ ಡಿ.೨೩ರಂದು ರೈತ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.ಬೆಳೆಗಳಿಗೆ ಉತ್ತಮ ದರ ನೀಡಿ
ರೈತನು ಇಂದು ಅನೇಕ ಅಡೆತಡೆಗಳ ನಡುವೆಯೂ ಸಹ ದೇಶಕ್ಕೆ ಅನ್ನ ನೀಡಲು ಕೃಷಿಯಲ್ಲಿ ತೊಡಗಿದ್ದಾನೆ, ದೇಶದ ಜನಸಂಖ್ಯೆ ಸ್ಫೋಟದಿಂದ ಆಹಾರ ಕೊರತೆ ಉಂಟಾಗಿದೆ, ಇದರಿಂದ ಕುಗ್ಗದೆ ರೈತ ಇರುವ ಸೌಲಭ್ಯಗಳನ್ನು ಬಳಸಿಕೊಂಡು ದೇಶಕ್ಕೆ ಆಹಾರ ಕೊಡುತ್ತಿದ್ದಾನೆ. ರೈತ ಬೆಳೆದ ತನ್ನ ಉತ್ಪನ್ನಗಳಿಗೆ ಬೆಲೆ ನಿಗದಿ ಮಾಡುವ ಹಕ್ಕನ್ನು ಸರ್ಕಾರ ನೀಡಿದಾಗ ಮಾತ್ರ ರೈತ ಸದೃಢನಾಗಲು ಸಾಧ್ಯವಾಗಲಿದೆ ಇಲ್ಲದಿದ್ದರೆ ತನ್ನ ಮಕ್ಕಳನ್ನು ಕೃಷಿಯತ್ತ ಮುಖ ಮಾಡಲು ಸಲಹೆ ನೀಡುವರು ಎಂದರು.ಕೃಷಿ ಅಧಿಕಾರಿ ನಾರಾಯಣಗೌಡ ಮಾತನಾಡಿ ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿಯ ಸಂಸ್ಕೃತಿ ರೈತರು ಕಾಲಕ್ಕೆ ತಕ್ಕಂತೆ ಕೃಷಿಯಲ್ಲಿ ಬದಲಾಗುವ ಹೊಸ ಹೊಸ ಆವಿಷ್ಕಾರಗಳನ್ನು ಅಳವಡಿಸಿಕೊಂಡು ಕೃಷಿಯಲ್ಲಿ ತೊಡಗಿದರೆ ಮಾತ್ರ ಕೃಷಿಯಲ್ಲಿ ಲಾಭ ಮಾಡಲು ಸಾಧ್ಯ ಎಂದರು. ಕೃಷಿ ಇಲಾಖೆ ಸಹಾಯಕಿ ನಿರ್ದೇಶಕಿ ಪ್ರತಿಭಾ, ತೋಟಗಾರಿಕೆ ಸಹಾಯಕ ನಿರ್ದೇಶಕ ಶಿವಾರೆಡ್ಡಿ, ರೈತ ನಾಯಕ ರಾಮೇಗೌಡ ಮತ್ತಿತರರು ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))