ಗ್ರಾಮೀಣ ಭಾಗದ ಸಹಕಾರ ಸಂಘಗಳು ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಕೃಷಿ ಸಾಲಗಳನ್ನು ನೀಡಲು ಹಿಂದೆಟ್ಟು ಹಾಕಬಾರದು ಎಂದು ರೈತ ಸಂಘದ ಕಾರ್ಯಧ್ಯಕ್ಷ ಎಚ್.ಆರ್.ಬಸವರಾಜಪ್ಪ ಹೇಳಿದರು.
ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು
ಗ್ರಾಮೀಣ ಭಾಗದ ಸಹಕಾರ ಸಂಘಗಳು ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಕೃಷಿ ಸಾಲಗಳನ್ನು ನೀಡಲು ಹಿಂದೆಟ್ಟು ಹಾಕಬಾರದು ಎಂದು ರೈತ ಸಂಘದ ಕಾರ್ಯಧ್ಯಕ್ಷ ಎಚ್.ಆರ್.ಬಸವರಾಜಪ್ಪ ಹೇಳಿದರು.ಹನುಮಂತಾಪುರದಲ್ಲಿ ಗುರುವಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 63ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿ, ಸದಸ್ಯರುಗಳು ಪಡೆದ ಸಾಲವನ್ನು ಸುಸ್ತಿಯಾಗದಂತೆ ಎಚ್ಚರ ವಹಿಸಬೇಕು. ಬಡ್ಡಿ ರಿಯಾಯತಿ ಸೌಲಭ್ಯಗಳನ್ನು ಆದಷ್ಟು ಸದ್ಬಳಕೆ ಮಾಡಿಕೊಳ್ಳಬೇಕು. ಸುಸ್ತಿದಾರರ ಮರಣದ ನಂತರ ಖಾತೆ ಬದಲಾವಣೆ ಮಾಡಿಕೊಂಡು ವ್ಯವಹಾರ ಮುನ್ನಡೆಸಬೇಕು. ಅಧಿಕಾರಿಗಳು ನಿಗಾವಹಿಸಿ ಸಕಾಲದಲ್ಲಿ ಸಾಲಗಳನ್ನು ಮರುಪಾವತಿ ಮಾಡಿಸಿ ಸಂಘದ ಆರ್ಥಿಕತೆಗೆ ಶಕ್ತಿ ತುಂಬಬೇಕು. ಕಡಿಮೆ ಬಡ್ಡಿದರದಲ್ಲಿ ಸಿಗುವ ಅಡಕೆ ಅಡಮಾನ ಹಾಗೂ ಬಂಗಾರ ಅಡಮಾನ ಸಾಲಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಹನುಮಂತು ಮಾತನಾಡಿ, ಸಹಕಾರ ಇಲಾಖೆ ರೈತರ ಹಿತ ಕಾಯಲು ಬದ್ದವಾಗಿದೆ. ಗ್ರಾಮಾಂತರದ 16 ಸಹಕಾರ ಸಂಘಗಳಲ್ಲಿ ಅಡಕೆ ಅಡಮಾನ ಸಾಲಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಲಾಗಿದೆ. ಸ್ಥಳೀಯವಾಗಿ ಅಡಕೆ ಅಡಮಾನ ಸಾಲಗಳು ಮುನ್ನಲೆಯಲ್ಲಿವೆ. ಸಂಘದಲ್ಲಿ ಅಲ್ಪ ಬಡ್ಡಿದರಲ್ಲಿ ಸುಮಾರು 5 ಲಕ್ಷದ ರು.ತನಕ ಸಾಲ ಪಡೆಯಬಹುದು. ನಬಾರ್ಡ್ ಆದೇಶದಿಂದ ಸಣ್ಣ ರೈತರಿಗೆ ಹೆಚ್ಚುವರಿ ಸಾಲ ಸೌಲಭ್ಯ ನೀಡಲು ಸಾದ್ಯವಾಗುತ್ತಿಲ್ಲ. ರೈತರು ಕೃಷಿಯೊಟ್ಟಿಗೆ ಹೈನುಗಾರಿಕೆಗೂ ಉತ್ತೇಜನ ನೀಡಿದರೆ ಆರ್ಥಿಕವಾಗಿ ಸದೃಡರಾಗಬಹುದು ಎಂದು ಸಲಹೆ ನೀಡಿದರು.ಸಂಘದ ಅಧ್ಯಕ್ಷ ನಾಗೇಂದ್ರಪ್ಪ, ಉಪಾಧ್ಯಕ್ಷ ಜಿ.ಕೃಷ್ಣೋಜಿ ರಾವ್, ಎಚ್.ಸಿ ಹಿರಣ್ಣಯ್ಯ, ಬಿ.ಎಂ ಶಿವಮೂರ್ತಿ, ಬಿ.ಎಸ್ ನಾಗರಾಜ್ ರಾವ್, ಸಿ.ಚಂದ್ರಪ್ಪ, ಪರುಶುರಾಮಪ್ಪ, ಗೀತಾ, ಜಯಮ್ಮ, ರತ್ನಮ್ಮ, ಹಾಲಸ್ವಾಮಿ, ಟಿ.ಎಸ್ ಗಿರೀಶ್, ಪೂಜಾ, ಅಭಿಷೇಕ್, ಯೋಗೇಶ್, ಶಿವಮೂರ್ತಿ ಇತರರಿದ್ದರು.