ಸಾರಾಂಶ
- ಹೆಣ್ಣು ಮಕ್ಕಳಿಗಾಗಿ ಪಿಂಕ್ ಟಾಯ್ಲೆಟ್ ನಿರ್ಮಾಣಕ್ಕೆ ಗುದ್ದಲಿಪೂಜೆ .
ಕನ್ನಡಪ್ರಭ ವಾರ್ತೆ, ತರೀಕೆರೆಶುದ್ಧ ಕುಡಿಯುವ ನೀರು, ಸ್ವಚ್ಛ ಶೌಚಾಲಯ ಕಲ್ಲಿಸಿಕೊಟ್ಟರೆ ಮಕ್ಕಳು ಶಾಲೆ ಬಿಡುವುದನ್ನು ತಡಗಟ್ಟ ಬಹುದು ಎಂದು ವಿಕಸನ ಸಂಸ್ಥೆ ನಿರ್ದೇಶಕ ವರ್ಗೀಸ್ ಕ್ಲೀಟಸ್ ಹೇಳಿದ್ದಾರೆ.ಪಟ್ಟಣದ ವಿಕಸನ ಸಂಸ್ಥೆ ಮಂಗಳೂರು ಮುತ್ತೂಟ್ ಪೈನಾನ್ಸ್ ಸಹಯೋಗದಲ್ಲಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಹೆಣ್ಣು ಮಕ್ಕಳಿಗೆ ಶೌಚಾಲಯ ನಿರ್ಮಾಣ (ಪಿಂಕ್ ಟಾಯ್ಲೆಟ್)ಕ್ಕೆ ನಡೆದ ಗುದ್ದಲಿ ಪೂಜೆ ವೇಳೆ ಮಾತನಾಡುತ್ತಿದ್ದರು. ಮುತ್ತೂಟ್ ಸಂಸ್ಥೆ ಸಹಕಾರದೊಂದಿಗೆ ದೇಶದ ಹಲವಾರು ಹಿಂದುಳಿದ ಬಡವರಿಗೆ ಆರೋಗ್ಯ ನೈರ್ಮಲ್ಯತೆ ಇನ್ನೂ ಹಲವಾರು ಯೋಜನೆಗಳಲ್ಲಿ ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಲ್ಲಿ ಹಲವಾರು ಕೊಡುಗೆ ನೀಡುತ್ತಿದೆ. ವಿಶೇಷವಾಗಿ ಹೆಣ್ಣು ಮಕ್ಕಳಿಗೆ ನಿರ್ಮಾಣವಾಗುತ್ತಿರುವ ಈ ಶೌಚಾಲಯದಲ್ಲಿ ವಿಶೇಷ ಚೇತನರಿಗೂ ಅನುಕೂಲವಾಗುವಂತೆ ನಿರ್ಮಿಸಲಾಗುವುದು. ಋತುಚಕ್ರದ ಸಂದರ್ಭದಲ್ಲಿ ಹೆಣ್ಣು ಮಕ್ಕಳು ಬಳಸುವ ವಸ್ತುಗಳನ್ನು ನಾಶಪಡಿಸುವ ಯಂತ್ರ ಸಹ ಅಳವಡಿಸುವ ಬಗ್ಗೆ ಯೋಜಿಸ ಲಾಗುವುದು ಎಂದು ಹೇಳಿದರು. ಹೆಣ್ಣು ಮಕ್ಕಳಿಗೆ ಪಿಂಕ್ ಟಾಯ್ಲೆಟ್ ನಿರ್ಮಾಣದ ವೆಚ್ಚ ನೀಡುತ್ತಿರುವ ಮುತ್ತೂಟ್ ಪೈನಾನ್ ಸಂಸ್ಥೆಗೆ ಧನ್ಯವಾದ ತಿಳಿಸಿ, ಓದುತ್ತಿರುವ ಶಾಲಾ ಹೆಣ್ಣು ಮಕ್ಕಳಿಗೆ ಅಗತ್ಯವಾಗಿ ಬೇಕಾಗಿರುವ ಸೌಲಭ್ಯವನ್ನು ಸಂಸ್ಥೆ ಒದಗಿಸುತ್ತಿದೆ. ಇದರ ನಿರ್ಮಾಣ ಕಾರ್ಯದಲ್ಲಿ ಸ್ಥಳೀಯ ಕಾಲೇಜಿನ ಸಿಬ್ಬಂದಿ, ಸಾರ್ವಜನಿಕರು ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪಪ್ರಾಚಾರ್ಯರಾದ ಲೀಲಾವತಿ ಮಾತನಾಡಿ, ನಮ್ಮ ಶಾಲೆ ಎಲ್ಲಾ ಸಿಬ್ಬಂದಿ ಸೇರಿ ನಿರ್ಮಾಣ ಕಾರ್ಯದಲ್ಲಿ ಬೇಕಾದ ಸಹಕಾರ ನೀಡುವ ಭರವಸೆ ನೀಡಿದರು. ತರೀಕೆರೆ ಮುತ್ತೂಟ್ ಸಂಸ್ಥೆ ಮ್ಯಾನೇಜರ್ ಅಬ್ಧುಲ್ ಮುಶೀರ್ , ಆಧಿಕಾರಿಗಳಾದ ಮನೋಜ್ ಕುಮಾರ್ , ಶ್ರೀನಿವಾಸ್, ಹೆಣ್ಣು ಮಕ್ಕಳ ಶಾಲೆ ಮುಖ್ಯೋಪಾದ್ಯಾಯರಾದ ಶಿವಪ್ರಸಾದ್ , ವಿಕಸನ ಸಂಸ್ಥೆ ಸದಸ್ಯೆ ವಿಭಾ ಕ್ಲೀಟಸ್, ಲಿಲ್ಲೀ ವರ್ಗೀಸ್ ಹಾಗೂ ಸಿಬ್ಬಂದಿಗೆ ಉಪಸ್ಥಿತರಿದ್ದರು.
-28ಕೆಟಿಆರ್.ಕೆ.1ಃತರೀಕೆರೆಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಹೆಣ್ಣು ಮಕ್ಕಳಿಗೆ ನಡೆದ ಪಿಂಕ್ ಟಾಯ್ಲೆಟ್ ಶೌಚಾಲಯ ನಿರ್ಮಾಣದ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ವಿಕಸನ ಸಂಸ್ಥೆ ನಿರ್ದೇಶಕ ವರ್ಗೀಸ್ ಕ್ಲೀಟಸ್ ಮತ್ತಿತರರು ಇದ್ದರು.