ಉದ್ಯಮಿಗಳಿಗೆ ಸಂಪೂರ್ಣ ಸಹಕಾರ ನೀಡುವೆ: ಗವಿಯಪ್ಪ

| Published : Aug 10 2025, 01:33 AM IST

ಉದ್ಯಮಿಗಳಿಗೆ ಸಂಪೂರ್ಣ ಸಹಕಾರ ನೀಡುವೆ: ಗವಿಯಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ನಗರ ಆರ್ಥಿಕವಾಗಿ ಬೆಳೆಯುತ್ತಿದೆ. ಈಗಾಗಲೇ ಪ್ರವಾಸೋದ್ಯಮದಲ್ಲಿ ದೇಶದ ಗಮನ ಸೆಳೆದಿದ್ದೇವೆ. ಉಳಿದ ವಲಯದಲ್ಲೂ ನಗರ ಬೆಳವಣಿಗೆ ಹೊಂದಲು ಉದ್ಯಮಿಗಳಿಗೆ ಸಂಪೂರ್ಣ ಸಹಕಾರ ನೀಡುವೆ.

ಹೊಸಪೇಟೆಯಲ್ಲಿ ವ್ಯಾಪಾರಸ್ಥರೊಂದಿಗೆ ನೇರ ಸಂವಾದ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಹೊಸಪೇಟೆ

ನಗರ ಆರ್ಥಿಕವಾಗಿ ಬೆಳೆಯುತ್ತಿದೆ. ಈಗಾಗಲೇ ಪ್ರವಾಸೋದ್ಯಮದಲ್ಲಿ ದೇಶದ ಗಮನ ಸೆಳೆದಿದ್ದೇವೆ. ಉಳಿದ ವಲಯದಲ್ಲೂ ನಗರ ಬೆಳವಣಿಗೆ ಹೊಂದಲು ಉದ್ಯಮಿಗಳಿಗೆ ಸಂಪೂರ್ಣ ಸಹಕಾರ ನೀಡುವೆ ಎಂದು ಶಾಸಕ ಎಚ್‌.ಆರ್. ಗವಿಯಪ್ಪ ಹೇಳಿದರು.

ವಿಜಯನಗರ ಜಿಲ್ಲಾ ವಾಣಿಜ್ಯ ಹಾಗೂ ಕೈಗಾರಿಕೋದ್ಯಮ ಸಂಘದಿಂದ ನಗರದ ಮಲ್ಲಿಗೆ ಹೋಟೆಲ್‌ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವ್ಯಾಪಾರಸ್ಥರ ನಡುವೆ ನೇರ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಗರದ ಉದ್ಯಮಿಗಳು ಎದುರಿಸುತ್ತಿರುವ ಫಾರಂ-3, ಟ್ರೇಡ್ ಲೈಸೆನ್ಸ್, ಮ್ಯುಟೇಷನ್, ಪ್ರಾಪರ್ಟಿ ಟ್ಯಾಕ್ಸ್ ಸಮಸ್ಯೆಗಳನ್ನು ಬಗೆಹರಿಸಲಾಗುವುದು. ನಗರದಲ್ಲಿ ಸುಸಜ್ಜಿತ ಒಳಚರಂಡಿ, ರಸ್ತೆ ಹಾಗೂ ನೂತನ ರಿಂಗ್ ರೋಡ್‌ಗಳು ಹಾಗೂ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಮ ವಹಿಸಲಾಗುವುದು. ಉದ್ಯಮಿಗಳ ಸಮಸ್ಯೆಗೆ ಸದಾ ಸ್ಪಂದಿಸುವೆ. ನಗರದ ಸೌಂದರ್ಯ ಹಾಗೂ ಅಭಿವೃದ್ಧಿಯಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದರು.

ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಅಶ್ವಿನ್ ಕೊತ್ತಂಬರಿ, ಕಾರ್ಯದರ್ಶಿ ಕಾಕುಬಾಳ್ ರಾಜೇಂದ್ರ, ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಪ್ರಭುಲಿಂಗ ತಳಕೇರಿ, ಡಿಎಚ್‌ಒ ಡಾ. ಎಲ್‌.ಆರ್‌. ಶಂಕರ ನಾಯ್ಕ, ಹುಡಾ ಆಯುಕ್ತ ಯೋಗಾನಂದ, ನಗರಸಭೆ ಪೌರಾಯುಕ್ತ ಶಿವಕುಮಾರ, ತಹಸೀಲ್ದಾರ್ ಶ್ರುತಿ ಎಂ., ಪಿಐ ಹುಲುಗಪ್ಪ, ಜೆಸ್ಕಾಂ ಎಇಇ ಅರುಣ್ ಕುಮಾರ್ ಮತ್ತಿತರರಿದ್ದರು.