ಸಂಭ್ರಮದ ರಕ್ಷಾ ಬಂಧನ ಹಬ್ಬ ಆಚರಣೆ

| Published : Aug 10 2025, 01:33 AM IST

ಸಾರಾಂಶ

ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿ ನಂತರ ಮನೆಯಲ್ಲಿ ಸಹ ವಿಶೇಷ ಪೂಜೆ ನೆರವೇರಿಸಿದರು.

ಗೋಕರ್ಣ: ಪುರಾಣ ಪ್ರಸಿದ್ಧ ಕ್ಷೇತ್ರದಲ್ಲಿ ರಕ್ಷಾಬಂಧನ ಹಬ್ಬವನ್ನು ಶನಿವಾರ ಸಂಭ್ರಮ ಸಡಗರದಿಂದ ಆಚರಿಸಲಾಯಿತು.

ಭ್ರಾತೃತ್ವ ಬೆಸೆಯುವ ಹಬ್ಬದಲ್ಲಿ ಶನಿವಾರ ಮುಂಜಾನೆಯಿಂದ ಜನರು ವಿವಿಧ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿ ನಂತರ ಮನೆಯಲ್ಲಿ ಸಹ ವಿಶೇಷ ಪೂಜೆ ನೆರವೇರಿಸಿದರು. ಬಳಿಕ ಮನೆಯಲ್ಲಿನ ಸಹೋದರರಿಗೆ ಸಹೋದರಿಯರು ಆರತಿ ಬೆಳಗಿ ಪರಸ್ಪರ ರಕ್ಷೆ ಕಟ್ಟಿ ಹಬ್ಬದ ಶುಭಾಶಯ ಕೋರಿದರು. ಇನ್ನು ಮನೆಯಲ್ಲಿ ವಿಶೇಷ ಸಿಹಿ ತಿನಿಸುಗಳನ್ನು ತಯಾರಿಸಿ ಎಲ್ಲರೂ ಒಟ್ಟಾಗಿ ಸವಿಯುವ ಮೂಲಕ ಸಂಭ್ರಮದಿಂದ ಹಬ್ಬ ಆಚರಿಸಿದರು.

ಇನ್ನು ದೇವಾಲಯ, ಶಾಲಾ ಕಾಲೇಜು, ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ರಕ್ಷೆ ಕಟ್ಟುವ ಮೂಲಕ ಭ್ರಾತೃತ್ವ ಸಂಬಂಧ ಸಾರುತ್ತ ಹಬ್ಬದ ಶುಭಾಶಯ ಕೋರಿದರು. ಕೆಲವು ಕಚೇರಿಗಳಲ್ಲಿ ಸಹ ಜನರ ಆಗಮಿಸಿ ಅಲ್ಲಿನ ಸಿಬ್ಬಂದಿಗೆ ಶುಭ ಕೋರಿ ರಕ್ಷೆ ನೀಡಿ ತೆರಳಿರುವ ದೃಶ್ಯವು ಕಂಡುಬಂತು. ಒಟ್ಟಾರೆ ಅಣ್ಣನ ಸ್ಥಾನದಲ್ಲಿ ನಿಂತು ರಕ್ಷಣೆಗೆ ನಾವಿದ್ದೇವೆ. ನಿಮ್ಮ ಒಳಿತು ಬಯಸುತ್ತೇವೆ ಎಂದು ಗೋಕರ್ಣ ಪುರಾಣ ಪ್ರಸಿದ್ಧ ಕ್ಷೇತ್ರದಲ್ಲಿ ರಕ್ಷಾಬಂಧನ ಹಬ್ವನ್ನ ಶನಿವಾರ ಸಂಭ್ರಮ ಸಡಗರದಿಂದ ಆಚರಿಸಲಾಯಿತು.

ಭ್ರಾತೃತ್ವ ಬೆಸೆಯುವ ಹಬ್ಬದಲ್ಲಿ ಶನಿವಾರ ಮುಂಜಾನೆಯಿಂದ ಜನರು ವಿವಿಧ ದೇವಾಲಯಗಳು ತೆರಳಿ ಪೂಜೆ ಸಲ್ಲಿಸಿ ನಂತರ ಮನೆಯಲ್ಲಿಯೂ ವಿಶೇಷ ಪೂಜೆ ನೆರವೇರಿಸಿದರು.

ಬಳಿಕ ಮನೆಯಲ್ಲಿನ ಸಹೋದರರಿಗೆ ಸಹೋದರಿಯರು ಆರತಿ ಬೆಳಗಿ ಪರಸ್ಪರ ರಕ್ಷೆ ಕಟ್ಟಿ ಹಬ್ಬದ ಶುಭಾಶಯ ಕೋರಿದರು.

ಇನ್ನು ಮನೆಯಲ್ಲಿ ವಿಶೇಷ ಸಿಹಿ ತಿನಿಸು ಗಳನ್ನು ತಯಾರಿಸಿ ಎಲ್ಲರೂ ಒಟ್ಟಾಗಿ ಸವಿಯುವ ಮೂಲಕ ಸಂಭ್ರಮದಿಂದ ಹಬ್ಬ ಆಚರಿಸಿದರು.

ಇನ್ನು ದೇವಾಲಯ, ಶಾಲಾ ಕಾಲೇಜು, ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳು ರಕ್ಷೆ ಕಟ್ಟುವ ಮೂಲಕ ಭ್ರಾತೃತ್ವ ಸಂಬಂಧ ಸಾರುತ್ತ ಹಬ್ಬದ ಶುಭಾಶಯ ಕೋರಿದರು.

ಇನ್ನು ಕೆಲವು ಕಚೇರಿಗಳಲ್ಲಿ ಸಹ ಜನರ ಆಗಮಿಸಿ ಅಲ್ಲಿನ ಸಿಬ್ಬಂದಿಗೆ ಶುಭ ಕೋರಿ ರಕ್ಷೆ ನೀಡಿ ತೆರಳಿರುವ ದೃಶ್ಯವು ಕಂಡುಬಂತು. ಅಣ್ಣನ ಸ್ಥಾನದಲ್ಲಿ ನಿಂತು ರಕ್ಷಣೆಗೆ ನಾವಿದ್ದೇವೆ ನಿಮ್ಮ ಒಳಿತು ಬಯಸುತ್ತೇವೆ ಎಂದು ಸಹೋದರಿಯರಿಗೆ ಧೈರ್ಯ ಸ್ಥೈರ್ಯದ ಸಂದೇಶ ನೀಡುವ ರಕ್ಷಾ ಬಂಧನ ಹಬ್ಬ ಅರ್ಥಪೂರ್ಣವಾಗಿ ಆಚರಿಸಲಾಯಿತು.