ಭೋವಿ ಸಮಾಜದ ಬೇಡಿಕೆ ಈಡೇರಿಕೆ ಗೆ ಅಗತ್ಯ ಸಹಕಾರ ನೀಡುವೆ

| Published : Aug 26 2025, 01:05 AM IST

ಸಾರಾಂಶ

ಭೋವಿ ಸಮುದಾಯದ ಬೇಡಿಕೆಗಳನ್ನು ಈಡೇರಿಸುವುದರ ಜತೆಗೆ ಹಿರೇದುರ್ಗಾದೇವಿ ದೇವಸ್ಥಾನ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡುವುದಾಗಿ ಎಂದು ರಾಜ್ಯ ಖನಿಜ ನಿಗಮದ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ಗಜೇಂದ್ರಗಡ: ಭೋವಿ ಸಮುದಾಯದ ಬೇಡಿಕೆಗಳನ್ನು ಈಡೇರಿಸುವುದರ ಜತೆಗೆ ಹಿರೇದುರ್ಗಾದೇವಿ ದೇವಸ್ಥಾನ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡುವುದಾಗಿ ಎಂದು ರಾಜ್ಯ ಖನಿಜ ನಿಗಮದ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ಪಟ್ಟಣದ ಹಿರೇದುರ್ಗಾದೇವಿ ದೇವಸ್ಥಾನದ ಬಳಿ ಸೋಮವಾರ ನಡೆದ ಸಿದ್ದರಾಮೇಶ್ವರ ಭೋವಿ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಸಮುದಾಯ ಭವನದ ಅಡಿಗಲ್ಲು ಸಮಾರಂಭದಲ್ಲಿ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.ಚುನಾವಣೆ ಮುನ್ನ ಹಾಗೂ ಚುನಾವಣೆ ನಂತರ ನೀಡಿದ ಭರವಸೆಗಳನ್ನು ಜಾರಿಗೊಳಿಸುವ ರಾಜ್ಯ ಸರ್ಕಾರ ಕೋಟ್ಯಾಂತರ ಅನುದಾನವನ್ನು ಬಿಡುಗಡೆ ಮಾಡುತ್ತಿದೆ. ಅದರ ಭಾಗವಾಗಿ ಕ್ಷೇತ್ರಕ್ಕೆ ಬಿಡುಗಡೆಯಾದ ಅನುದಾನದಲ್ಲಿ ವಿವಿಧ ಸಮಾಜಗಳ ಅಭಿವೃದ್ಧಿಗೆ ಅನುದಾನ ನೀಡಿದ ಮಾದರಿಯಲ್ಲಿ ಭೋವಿ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ರು.೨೫ ಲಕ್ಷ ಹಾಗೂ ದೇವಸ್ಥಾನಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಮೂಲಸೌಕರ್ಯ ಒದಗಿಸಲು ರು. ೧೭ ಲಕ್ಷ ವೆಚ್ಚದ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ. ಮುಂದಿನ ದಿನಗಳಲ್ಲಿ ನಿಮ್ಮೆಲ್ಲರ ಸಹಕಾರ ಹಾಗೂ ಆಶೀರ್ವಾದದಿಂದ ಪುರಸಭೆ ಹಾಗೂ ತಾಲೂಕಾಡಳಿತದಿಂದ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತೇನೆ ಎಂದರು.ಸಾಹಿತಿ ಎಫ್.ಎಸ್. ಕರಿದುರಗನವರ ಮಾತನಾಡಿ, ದೇಶ ಹಾಗೂ ವಿಶ್ವಕ್ಕೆ ನಮ್ಮ ಕೊಡುಗೆ ಅಪಾರವಿದೆ. ದೇಶ ಹಾಗೂ ರಾಜ್ಯದಲ್ಲಿನ ಬಹುಭಾಗ ಕಟ್ಟಡಗಳ ನಿರ್ಮಾಣವನ್ನು ನಾವು ಮಾಡಿದ್ದೇವೆ. ಶಿಕ್ಷಣಕ್ಕೆ ಆದ್ಯತೆ ನೀಡಲು ನಾವೆಲ್ಲರೂ ಮುಂದಾಗಬೇಕಿದೆ ಎಂದ ಅವರು, ಸಮುದಾಯ ಭವನಕ್ಕೆ ಶಾಸಕರು ರು. ೨೫ ಲಕ್ಷ ನೀಡುವುದರ ಜತೆಗೆ ಸಮಾಜದ ಅಭಿವೃದ್ಧಿಗಾಗಿ ಸಲ್ಲಿಸಿರುವ ಬೇಡಿಕೆಗಳ ಈಡೇರಿಕೆಗೆ ಸಕಾರಾತ್ಮಕವಾಗಿ ಶಾಸಕ ಜಿ.ಎಸ್. ಪಾಟೀಲ ಸ್ಪಂದಿಸಿದ್ದಾರೆ ಎಂದರು.ಮುಖಂಡ ಎಚ್.ಎಸ್. ಸೋಂಪುರ ಮಾತನಾಡಿ, ಭೋವಿ ಸಮಾಜದ ಕೊಡುಗೆ ದೇಶಕ್ಕೆ ಅನನ್ಯವಾದದ್ದು. ನೆಲದ ರಕ್ಷಣೆಗಾಗಿ ನಡೆದ ಹೋರಾಟದಲ್ಲಿ ಭೋವಿ ವಡ್ಡರ ಯಲ್ಲಣ್ಣನ ಪರಾಕ್ರಮ ಅಗ್ರಗಣ್ಯ ಎಂದ ಅವರು, ಜ.೨೮ರಂದು ವಡ್ಡರ ಯಲ್ಲಣ್ಣನ ಜಯಂತಿ ಆಚರಿಸುವ ಮೂಲಕ ಯುವ ಸಮೂಹದಲ್ಲಿ ದೇಶಪ್ರೇಮ ಹಾಗೂ ಯಲ್ಲಣ್ಣನ್ನ ಆದರ್ಶದ ಕುರಿತು ತಿಳಿಸಿಕೊಡಬೇಕಿದೆ ಎಂದರು. ಮುಖಂಡರಾದ ವೀರಣ್ಣ ಶೆಟ್ಟರ, ಶಿವರಾಜ ಘೋರ್ಪಡೆ ಹಾಗೂ ರಾಜು ಸಾಂಗ್ಲಿಕರ, ಕ್ಷೇತ್ರದಲ್ಲಿ ಶಾಸಕ ಜಿ.ಎಸ್. ಪಾಟೀಲ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಹಾಗೂ ಪುರಸಭೆ ಚುನಾವಣೆಯಲ್ಲಿ ಸದಸ್ಯರ ಕೈಗೊಂಡ ನಿರ್ಧಾರದ ಕುರಿತು ಮಾತನಾಡಿದರು.ಸಮಾಜದ ಅಧ್ಯಕ್ಷ ಮಾರುತಿ ಕಲ್ಲೊಡ್ಡರ, ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ, ಉಪಾಧ್ಯಕ್ಷೆ ಸವಿತಾ ಬಿದರಳ್ಳಿ, ಸ್ಥಾಯಿ ಸಮಿತಿ ಚೇರ್ಮನ್ ಮುದಿಯಪ್ಪ ಮುಧೋಳ, ವಿಪಕ್ಷ ನಾಯಕ ಮೂಕಪ್ಪ ಮುಧೋಳ, ರೋಣ ಪುರಸಭೆ ಉಪಾಧ್ಯಕ್ಷ ಮಿಥುನ ಪಾಟೀಲ, ಮುಖಂಡರಾದ ಬಸವರಾಜ ಬಂಕದ, ರಫೀಕ್ ತೋರಗಲ್, ಲಾಲಪ್ಪ ರಾಠೋಡ, ದುರಗಪ್ಪ ಮುಧೋಳ, ಸುರೇಂದ್ರಸಾ ರಾಯಬಾಗಿ, ಲಕ್ಷ್ಮೀ ಮುಧೋಳ, ರಾಜು ಸಾಂಗ್ಲೀಕರ, ಅರ್ಜುನ ರಾಠೋಡ, ಷಣ್ಮುಖಪ್ಪ ಚಿಲಝರಿ, ಶರಣಪ್ಪ ಚಳಗೇರಿ, ಯಲ್ಲಪ್ಪ ಬಂಕದ, ಯಚ್ಚರಗೌಡ ಗೌಡ್ರ ಸೇರಿ ಇತರರು ಇದ್ದರು.