ಸಾರಾಂಶ
ಶೃಂಗೇರಿ: ಪಟ್ಟಣದ ಹೊರವಲಯದ ಶಂಕರಗಿರಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಶ್ರೀ ಶಂಕರಾಚಾರ್ಯರ ಭವ್ಯ ಮೂರ್ತಿ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.
ಶೃಂಗೇರಿ: ಪಟ್ಟಣದ ಹೊರವಲಯದ ಶಂಕರಗಿರಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಶ್ರೀ ಶಂಕರಾಚಾರ್ಯರ ಭವ್ಯ ಮೂರ್ತಿ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.
ಈ ವಿಗ್ರಹವನ್ನು ಸುಮಾರು 32 ಅಡಿಗಳಷ್ಟು ಎತ್ತರವಾಗಿದ್ದು ವಿಗ್ರಹ ಸ್ಥಾಪಿಸಿರುವ ಪ್ರದೇಶಕ್ಕೆ ಪ್ರವಾಸಿಗರು ಭೇಟಿ ನೀಡಿದಾಗ ಸುತ್ತಮುತ್ತಲ ವಿಹಂಗಮ ದೃಶ್ಯ ವಿಕ್ಷಿಸಬಹುದಾಗಿದೆ. ಈ ವಿಗ್ರಹದ ನಿರ್ಮಾಣ ಕಾರ್ಯಕ್ಕೆ ಜಗದ್ಗುರು ಶ್ರೀ ಭಾರತೀ ತೀರ್ಥರು ಹಾಗೂ ಶ್ರೀ ವಿಧುಶೇಖರ ಭಾರತೀ ತೀರ್ಥರು ಚಾಲನೆ ನೀಡಿದ್ದರು. ಈಗ ನಿರ್ಮಾಣ ಕಾರ್ಯ ಪೂರ್ಣ ಗೊಂಡಿದ್ದು ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿದೆ. ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ,ಅಪರಾಹ್ನ 3 ರಿಂದ ರಾತ್ರಿ 8 ರವರೆಗೆ ಸಾರ್ವಜನಿಕರ ಭೇಟಿಗೆ ಅವಕಾಶವಿದೆ.21 ಶ್ರೀ ಚಿತ್ರ 1-
ಶೃಂಗೇರಿಯ ಶಂಕರಗಿರಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ 32 ಅಡಿ ಎತ್ತರದ ಶ್ರೀ ಶಂಕರಾಚಾರ್ಯರ ಭವ್ಯ ವಿಗ್ರಹ