ನಾಗರ ಪಂಚಮಿ ಹಿನ್ನೆಲೆ ಸರ್ಕಾರಿ ರಜೆಯಿಂದಾಗಿ ಮಂಗಳೂರು ನಗರದಲ್ಲಿ ಬಾರೀ ವಾಹನ ದಟ್ಟಣೆಯಿಂದ ನಗರದ ವಿವಿಧೆಡೆ ಸೋಮವಾರ ಟ್ರಾಫಿಕ್ ಜಾಮ್ ಉಂಟಾಗಿ ಸಂಚಾರದಲ್ಲಿ ವ್ಯತ್ಯಾಯ ಉಂಟಾಯಿತು.
ಮಂಗಳೂರು : ನಾಗರ ಪಂಚಮಿ ಹಿನ್ನೆಲೆ ಸರ್ಕಾರಿ ರಜೆಯಿಂದಾಗಿ ಮಂಗಳೂರು ನಗರದಲ್ಲಿ ಬಾರೀ ವಾಹನ ದಟ್ಟಣೆಯಿಂದ ನಗರದ ವಿವಿಧೆಡೆ ಸೋಮವಾರ ಟ್ರಾಫಿಕ್ ಜಾಮ್ ಉಂಟಾಗಿ ಸಂಚಾರದಲ್ಲಿ ವ್ಯತ್ಯಾಯ ಉಂಟಾಯಿತು. ರಾಷ್ಟ್ರೀಯ ಹೆದ್ದಾರಿಯ ಅವ್ಯವಸ್ಥೆಯಿಂದಾಗಿ ಸುರತ್ಕಲ್-ಕುಳಾಯಿ-ಬೈಕಂಪಾಡಿ-ಕೂಳೂರು-ಕೊಟ್ಟಾರದ ಮಧ್ಯೆ ಸೋಮವಾರ ಗಂಟೆಗಟ್ಟಲೆ ಟ್ರಾಫಿಕ್ ಜಾಂ ಉಂಟಾಗಿತ್ತು. ಟ್ರಾಫಿಕ್ ಸಮಸ್ಯೆಯಿಂದ ಜನರು, ವಾಹನ ಸವಾರರು ತಲುಪುವಲ್ಲಿಗೆ ಸರಿಯಾದ ಸಮಯಕ್ಕೆ ತಲುಪಲಾಗದೆ ಸಮಸ್ಯೆ ಅನುಭವಿಸಿದರು. ಕೂಳೂರು ಸೇತುವೆ ಕಾಮಗಾರಿ ಅಪೂರ್ಣವೂ ಟ್ರಾಫಿಕ್ ಜಾಮ್‌ಗೆ ಕಾರಣವಾಗಿದೆ. ತಲಪಾಡಿ ಟೋಲ್ ಗೇಟ್ ಸೇರಿದಂತೆ ನಗರ ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿತ್ತು.
