ಸಾರ್ವಜನಿಕರು ಗ್ರಂಥಾಲಯ ಸದುಪಯೋಗ ಪಡೆದುಕೊಳ್ಳಿ: ಶಾಸಕ ಆರ್.ಬಸನಗೌಡ ತುರ್ವಿಹಾಳ

| Published : Aug 13 2024, 01:03 AM IST

ಸಾರ್ವಜನಿಕರು ಗ್ರಂಥಾಲಯ ಸದುಪಯೋಗ ಪಡೆದುಕೊಳ್ಳಿ: ಶಾಸಕ ಆರ್.ಬಸನಗೌಡ ತುರ್ವಿಹಾಳ
Share this Article
  • FB
  • TW
  • Linkdin
  • Email

ಸಾರಾಂಶ

ಹೈಟೆಕ್ ಗ್ರಂಥಾಲಯದಿಂದ ಸ್ಥಳೀಯ ಓದುಗರ ಕನಸು ನನಸಾಗಿದೆ. ಗ್ರಂಥಾಲಯ ಕಟ್ಟಡದಲ್ಲಿ ಉತ್ತಮ ಪುಸ್ತಕ ಲಭ್ಯವಿದೆ.

ಕನ್ನಡಪ್ರಭ ವಾರ್ತೆ ಮಸ್ಕಿ

ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳು ಗ್ರಂಥಾಲಯದ ಸದುಪಯೋಗಪಡಿಸಿಕೊಂಡು ಜ್ಞಾನವಂತರಾಗಬೇಕು ಎಂದು ಖಾದಿ ಮತ್ತು ಗ್ರಾಮೋದ್ಯೋಗ ನಿಗಮದ ಅಧ್ಯಕ್ಷ ಶಾಸಕ ಆರ್.ಬಸನಗೌಡ ತುರ್ವಿಹಾಳ ಹೇಳಿದರು.

ಪಟ್ಟಣದ ಬಸವೇಶ್ವರ ನಗರದಲ್ಲಿ ನೂತನವಾಗಿ ನಿರ್ಮಿಸಲಾಗಿದ್ದ ಇ-ಗ್ರಂಥಾಲಯ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಗ್ರಂಥಾಲಯ ಕಟ್ಟಡ ಸೋಮವಾರ ಉದ್ಘಾಟಿಸಿ ಮಾತನಾಡಿ, ಈಗಾಗಲೇ ಇಲ್ಲಿರುವ ಹೈಟೆಕ್ ಗ್ರಂಥಾಲಯದಿಂದ ಸ್ಥಳೀಯ ಓದುಗರ ಕನಸು ನನಸಾಗಿದೆ. ಗ್ರಂಥಾಲಯ ಕಟ್ಟಡದಲ್ಲಿ ಉತ್ತಮ ಪುಸ್ತಕ ಲಭ್ಯವಿದೆ. ಸಾರ್ವಜನಿಕರು ಪುಸ್ತಕ ಓದುವ ಮೂಲಕ ತಮ್ಮ ಬುದ್ಧಿಶಕ್ತಿ ಹೆಚ್ಚಿಸಿಕೊಳ್ಳಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮೀಣ ಘಟಕದ ಅಧ್ಯಕ್ಷ ಹನುಮಂತಪ್ಪ ಮುದ್ದಾಪುರ್, ಮುಖಂಡರಾದ ಅಂದಾನಪ್ಪ ಗುಂಡಳ್ಳಿ, ದೊಡ್ಡಪ್ಪ, ಪುರಸಭೆ ಸದಸ್ಯರಾದ ಮಲ್ಲಯ್ಯ ಚಿಗರಿ, ಗ್ಯಾರಂಟಿ ಸಮಿತಿಯ ತಾಲೂಕು ಅಧ್ಯಕ್ಷ ಮೈಬೂಬ್ ಸಾಬ್ ಮುದ್ದಾಪುರ್, ಮಲ್ಲಯ್ಯ ಮುರಾರಿ, ಆನಂದ ವೀರಾಪುರ್, ರಮೇಶ್ ಕಾಸ್ಲಿ, ಕೃಷ್ಣ ಚಿಗರಿ, ಶಬ್ಬೀರ್ ಸಾಬ್ ಸೇರಿ ಗ್ರಂಥಾಲಯ ಇಲಾಖೆ ಅಧಿಕಾರಿಗಳು ಇನ್ನಿತರರಿದ್ದರು.