ಸಾರಾಂಶ
ಕಾರವಾರ: ತಾಲೂಕಿನ ಮುದಗಾದಲ್ಲಿ ಅಯ್ಯಪ್ಪಸ್ವಾಮಿ ವ್ರತಧಾರಿಗಳ ಮೇಲೆ ಹಲ್ಲೆ ನಡೆಸಿದ ನೌಕಾನೆಲೆ ಸಿಬ್ಬಂದಿಯನ್ನು ಸ್ಟೇಷನ್ ಬೇಲ್(ಠಾಣಾ ಜಾಮೀನು) ಮೇಲೆ ಬಿಡುಗಡೆ ಮಾಡಿರುವುದನ್ನು ಖಂಡಿಸಿ ಅವರ ವಿರುದ್ಧ ಕೊಲೆ ಪ್ರಯತ್ನ ಪ್ರಕರಣ ದಾಖಲು ಮಾಡಲು ಆಗ್ರಹಿಸಿ ಸಾರ್ವಜನಿಕರು ಹೆಚ್ಚುವರಿ ಪೊಲೀಸ್ ವರಿಷ್ಠ ಜಗದೀಶ ಅವರಿಗೆ ಇಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಬುಧವಾರ ಸಾರ್ವಜನಿಕರು ಮನವಿ ಸಲ್ಲಿಸಿದರು.ಅಪಘಾತ ಪಡಿಸಿದ್ದಲ್ಲದೇ ೨೦ ಜನರೊಂದಿಗೆ ಆಗಮಿಸಿದ ಅಮಿತ್ ಎಂಬವರು ವ್ರತಧಾರಿಗಳ ಮೇಲೆ ಹಲ್ಲೆ ಮಾಡಿದ್ದಾರೆ. ಆದರೂ ಅವರಿಗೆ ಜಾಮೀನು ನೀಡಲಾಗಿದೆ. ದೇಶ ರಕ್ಷಣೆ ಮಾಡುವ ನೌಕಾ ಅಧಿಕಾರಿಗಳು, ಸಿಬ್ಬಂದಿ ವಿನಾಕರಣ ಪದೇ ಪದೇ ಸಾರ್ವಜನಿಕರ ಮೇಲೆ ಈ ರೀತಿ ಹಲ್ಲೆ ಮಾಡುತ್ತಿದ್ದರೂ ಜಾಮೀನು ಮಂಜೂರು ಮಾಡಿರುವುದು ಖಂಡನೀಯವಾಗಿದೆ ಎಂದರು.ಯಾವುದೇ ತಪ್ಪು ಮಾಡದ ಅಯ್ಯಪ್ಪ ವ್ರತಾಧಾರಿಗಳ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದನ್ನು ಕೈಬಿಡಬೇಕು. ಸಾರ್ವಜನಿಕರಿಗೆ ಥಳಿಸಿ ತಪ್ಪು ಮಾಡಿದ ನೌಕಾನೆಲೆ ಸಿಬ್ಬಂದಿ ಮೇಲೆ ಕಠಿಣ ಕ್ರಮವಾಗಬೇಕು ಎಂದು ಆಗ್ರಹಿಸಿದರು.ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ ಮಾತನಾಡಿ, ಜಿಲ್ಲಾಡಳಿತದ ನೇತೃತ್ವದಲ್ಲಿ ಸಮನ್ವಯ ಸಮಿತಿಯನ್ನು ರಚನೆ ಮಾಡಿ ನೌಕಾನೆಲೆ ಹಾಗೂ ಸಾರ್ವಜನಿಕರೊಂದಿಗೆ ಸಭೆ ಮಾಡಲಾಗುತ್ತದೆ. ಮೀನುಗಾರಿಕೆಗೆ ತೆರಳಿದಾಗಲೂ ಹಲ್ಲೆ ಮಾಡುತ್ತಿರುವುದು ಗಮನಕ್ಕಿದೆ. ಈ ಎಲ್ಲ ವಿಷಯವನ್ನು ಚರ್ಚೆ ಮಾಡಬಹುದು. ನೌಕಾನೆಲೆ ಎಫ್‌ಒಕೆ ಅವರಿಗೂ ಪತ್ರ ಬರೆಯಲಾಗಿದೆ ಎಂದರು. ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ, ಪುರುಷೋತ್ತಮ ಗೌಡ, ಉಮಾಕಾಂತ ಹರಿಕಂತ್ರ, ಗಣಪತಿ ಮಾಂಗ್ರೆ ಮೊದಲಾದವರು ಇದ್ದರು. ೧೯ರಂದು ಶಿರಸಿಯಲ್ಲಿ ಲಯ ವಂದನಾ ಕಾರ್ಯಕ್ರಮ
ಶಿರಸಿ: ನಾದ ಪ್ರಪಂಚದ ಮೇರು ಕಲಾವಿದ ಖಲೀಫಾ ಉಸ್ತಾದ್ ಝಾಕೀರ್ ಹುಸೇನ್ ಅವರಿಗೆ ಶಿಷ್ಯರಿಂದ, ಅಭಿಮಾನಿಗಳಿಂದ ಭಾವಪೂರ್ಣ ಶ್ರದ್ಧಾಂಜಲಿಯ ಲಯ ವಂದನಾ ಕಾರ್ಯಕ್ರಮ ನಗರದ ಟಿಆರ್‌ಸಿ ಸಭಾಂಗಣದಲ್ಲಿ ಜ. ೧೯ರಂದು ಸಂಜೆ ೫ರಿಂದ ನಡೆಯಲಿದೆ ಎಂದು ರಾಜದೀಪ ಟ್ರಸ್ಟ್ ಅಧ್ಯಕ್ಷ ದೀಪಕ ಹೆಗಡೆ ದೊಡ್ಡೂರು ತಿಳಿಸಿದರು.ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿರಸಿಯ ಕಲ್ಗುಂಡಿಕೊಪ್ಪದ ಪ್ರಸಿದ್ಧ ಲಕ್ಷ್ಮೀಶರಾವ್ ಕಲ್ಗುಂಡಿಕೊಪ್ಪ ಅವರು ಝಾಕೀರ್ ಶಿಷ್ಯರಾಗಿದ್ದಾರೆ. ಶಿರಸಿಗೆ ಜಝಾಕೀರ್ ಅವರು ಎರಡು ಸಲ ಬಂದಿದ್ದಾರೆ. ಈ ಕಾರಣದಿಂದ ಶಿರಸಿಯಲ್ಲಿ ಶ್ರದ್ಧಾಜಲಿ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಕಲ್ಗುಂಡಿಕೊಪ್ಪ ಫೌಂಡೇಶನ್, ರಾಜದೀಪ ಟ್ರಸ್ಟ್ ಜಂಟಿಯಾಗಿ ಹಮ್ಮಿಕೊಳ್ಳಲಾಗಿದೆ ಎಂದರು.ಲಕ್ಷ್ಮೀಶರಾವ್ ಮಾತನಾಡಿ, ಆರಂಭದಲ್ಲಿ ವಿ. ಶೇಷಾದ್ರಿ ಅಯ್ಯಂಗಾರ ಸಂಯೋಜನೆಯಲ್ಲಿ ಜಿಲ್ಲೆಯ ತಬಲಾ ವಾದಕರಿಂದ ಲಯ ಸರ್ಗ ನಡೆಯಲಿದೆ. ತಬಲಾ ವಾದನದಲ್ಲಿ ಕಾಗೇರಿ ನಾಗಪತಿ ಹೆಗಡೆ, ವಾಜಗಾರ ಅನಂತ ಹೆಗಡೆ, ಶೇಷಾದ್ರಿ ಅಯ್ಯಂಗಾರ್, ಮಂಜುನಾಥ್ ಹೆಗಡೆ, ಗುರುರಾಜ ಹೆಗಡೆ, ಅಕ್ಷಯ ಭಟ್ಟ, ದಿನೇಶ ನಾಯ್ಕ, ಡಾ. ಸಚಿನ್ ಪಂಡಿತ್, ಸುಬ್ರಹ್ಮಣ್ಯ ಶಾಸ್ತ್ರಿ, ವಿನಾಯಕ್ ಸಾಗರ್, ಮನೋಜ ಶೇಟ್ ಇತರ ಕಲಾವಿದರು ಭಾಗವಹಿಸಲಿದ್ದಾರೆ ಎಂದರು.
ಫೌಂಡೇಶನ್ ಜಯದೇವ್ ರಾವ್ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ರಾಜದೀಪ ಉಪಾಧ್ಯಕ್ಷ ಜೇಮ್ಸ ವಾಜ್, ಗಿರಿಧರ ಕಬ್ನಳ್ಳಿ ವೆಂಕಟೇಶ ಹೆಗಡೆ ಬೆಂಗಳೆ, ಜಿ.ವಿ. ಹೆಗಡೆ ಬಿಸಲಕೊಪ್ಪ ಮತ್ತಿತರರು ಇದ್ದರು.