ಹುಲುಗುಂದ ದಲ್ಲಿ ಸಾರ್ವಜನಿಕ ತಂಗುದಾಣ ಲೋಕಾರ್ಪಣೆ

| Published : Apr 06 2025, 01:47 AM IST

ಹುಲುಗುಂದ ದಲ್ಲಿ ಸಾರ್ವಜನಿಕ ತಂಗುದಾಣ ಲೋಕಾರ್ಪಣೆ
Share this Article
  • FB
  • TW
  • Linkdin
  • Email

ಸಾರಾಂಶ

ಹುಲುಗುಂದ ಗ್ರಾಮದಲ್ಲಿ ನಿರ್ಮಾಣವಾಗಿರುವ ಸಾರ್ವಜನಿಕರ ತಂಗುದಾಣವನ್ನು ರೋಟರಿ ಜಿಲ್ಲಾ ಪ್ರಾಂತ್ಯಪಾಲ ವಿಕ್ರಮ್‌ ದತ್ತ ಉದ್ಘಾಟಿಸಿದರು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ರೋಟರಿ ಹಿಲ್ಸ್ ಸೋಮವಾರಪೇಟೆ ಮತ್ತು ರೋಟರಿ ಕುಶಾಲನಗರ ವತಿಯಿಂದ ಹಾರಂಗಿ ಡ್ಯಾಂ ಸಮೀಪದ ಹುಲುಗುಂದ ಗ್ರಾಮದಲ್ಲಿ ನಿರ್ಮಾಣವಾಗಿರುವ ಸಾರ್ವಜನಿಕರ ತಂಗುದಾಣವನ್ನು ರೋಟರಿ ಜಿಲ್ಲಾ ಪ್ರಾಂತ್ಯಪಾಲ ವಿಕ್ರಮ್ ದತ್ತ ಅವರು ಬುಧವಾರ ಉದ್ಘಾಟಿಸಿರು.

ನಂತರ ಅವರು ಮಾತನಾಡಿ, ರೋಟರಿ ಸಂಸ್ಥೆಯೂ ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದೆ. ರೋಟರಿ ಸದಸ್ಯರು ಪ್ರತಿಫಲಾಫೇಕ್ಷೆಯಿಲ್ಲದೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸಮಾಜದ ಪ್ರತಿಯೊಬ್ಬರೂ ತಾವು ಸಂಪಾದಿಸಿದ ಹಣದಲ್ಲಿ ಅಲ್ಪ ಹಣವನ್ನು ಸಮಾಜಸೇವೆಗೆ ಉಪಯೋಗಿಸಿದರೆ ಅದು ಪುಣ್ಯ ಕಾರ್ಯ ಎಂದು ಹೇಳಿದರು.

ರೋಟರಿ ಸಹಾಯಕ ಪ್ರಾಂತಪಾಲ ಡಾ. ಹರಿ ಎ. ಶೆಟ್ಟಿ. ಸೋಮವಾರಪೇಟೆ ರೋಟರಿ ಹಿಲ್ಸ್ ಅಧ್ಯಕ್ಷ ಜೆ.ಕೆ.ಪೊನ್ನಪ್ಪ, ಕಾರ್ಯದರ್ಶಿ ಕೆ.ಡಿ.ಬಿದ್ದಪ್ಪ, ರೋಟರಿ ಕುಶಾಲನಗರ ಅಧ್ಯಕ್ಷ ಸಿ.ಬಿ.ಹರೀಶ್, ಕಾರ್ಯದರ್ಶಿ ಡಿ.ಡಿ. ಕಿರಣ್, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್ ಇದ್ದರು.