ಮಾನವ ಕಳ್ಳ ಸಾಗಾಣಿಕೆ ಬಗ್ಗೆ ದೊಡ್ಡ ಜಾಲವೇ ಇರುವ ಕಾರಣ ಸಾರ್ವಜನಿಕರು ಎಚ್ಚರದಿಂದ ಇರಬೇಕು ಎಂದು ನ್ಯಾಯಾಧೀಶ ದೀಪು ಎಂ.ಟಿ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

‌ಮಾನವ ಕಳ್ಳ ಸಾಗಾಣಿಕೆ ಬಗ್ಗೆ ದೊಡ್ಡ ಜಾಲವೇ ಇರುವ ಕಾರಣ ಸಾರ್ವಜನಿಕರು ಎಚ್ಚರದಿಂದ ಇರಬೇಕು ಎಂದು ನ್ಯಾಯಾಧೀಶ ದೀಪು ಎಂ.ಟಿ ಸಲಹೆ ನೀಡಿದರು.

ಪಟ್ಟಣದ ದೊಡ್ಡಹುಂಡಿ ಭೋಗಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ,ವಕೀಲರ ಸಂಘದ,ಪೊಲೀಸ್‌ ಇಲಾಖೆ, ದೊಡ್ಡಹುಂಡಿ ಭೋಗಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜು ಸಂಯುಕ್ತಾಶ್ರಯದಲ್ಲಿ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಾನವ ಕಳ್ಳ ಸಾಗಾಣಿಕೆ ಈ ಹಿಂದೆ ಹೆಣ್ಣು ಮಕ್ಕಳ ಕಳ್ಳ ಸಾಗಾಣಿಕೆ ಇತ್ತು. ಆದರೀಗ ಗಂಡು, ಹೆಣ್ಣು ಎನ್ನದೆ ನೌಕರಿಯ ಆಮಿಷ ತೋರಿ ಕಳ್ಳ ಸಾಗಾಣಿಕೆ ಪರಿಚಿತರ ಹೆಸರೇಳಿಕೊಂಡು ಬರುತ್ತಿದ್ದಾರೆ ಈ ಬಗ್ಗೆ ಜನರು ಜಾಗೃತರಾಗಿರಬೇಕು ಎಂದರು.

ಕಾನೂನು ಅರಿವಿನ ಉದ್ದೇಶ ಏನೆಂದರೆ ವಿದ್ಯಾರ್ಥಿಗಳ ತಲೆಗೆ ತುಂಬಿದರೆ ಕಾನೂನು ಅರಿವು ಮೂಡಿಸಿದರೆ ವಿದ್ಯಾರ್ಥಿಗಳ ಕುಟುಂಬಕ್ಕೆ ಅಪರಾಧದ ಬಗ್ಗೆ ಹೇಗೆ ನಡೆಯುತ್ತದೇ ಎಂಬುದು ಕಾಲೇಜುಗಳಲ್ಲಿ ಏರ್ಪಡಿಸಲಾಗಿದೆ ಎಂದರು.

ದೊಡ್ಡಹುಂಡಿ ಭೋಗಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಗೋಪಾಲಕೃಷ್ಣ ಬಿ.ಜಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಪರ ಸಿವಿಲ್‌ ಹಾಗು ಜೆಎಂಎಫ್‌ಸಿ ನ್ಯಾಯಾಧೀಶ ಗಿರೀಶ್‌ ಆರ್.ಬಿ, ಪೊಲೀಸ್‌ ಇನ್ಸ್‌ಪೆಕ್ಟರ್ ಎನ್.ಜಯಕುಮಾರ್‌, ವಕೀಲರ ಸಂಘದ ಅಧ್ಯಕ್ಷ ಟಿ.ಎಸ್.ವೆಂಕಟೇಶ್‌, ಸಬ್‌ ಇನ್ಸ್‌ಪೆಕ್ಟರ್‌ ಸಾಹೇಬಗೌಡ ಆರ್.ಬಿ,ವಕೀಲರ ಸಂಘದ ಕಾರ್ಯದರ್ಶಿ ಎಂ.ಬೀರೇಗೌಡ ಸೇರಿದಂತೆ ಹಲವರಿದ್ದರು.