ಸರಕಾರದ ಪಂಚಗ್ಯಾರಂಟಿ ಯೋಜನೆ ಫಲಪ್ರದವಾಗಿದ್ದು ಈ ಯೋಜನೆಯಿಂದ ಗ್ರಾಮೀಣಪ್ರದೇಶದ ಲಕ್ಷಾಂತರ ಕುಟುಂಬಗಳು ನೆಮ್ಮದಿಯಿಂದ

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ ಸರ್ಕಾರದಿಂದ ಬರುವ ಯಾವುದೆ ಸವಲತ್ತುಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಅರ್ಹ ಫಲಾನುಭವಿಗಳ ಮನೆಬಾಗಿಲಿಗೆ ತಪ್ಪದೆ ತಲುಪಿಸಬೇಕೆಂದು ಶಾಸಕ ಡಿ. ರವಿಶಂಕರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.ಪಟ್ಟಣದ ಹಾಸನ ರಸ್ತೆಯ ಲೋಕೋಪಯೋಗಿ ಕಚೇರಿಯಲ್ಲಿರುವ ತಮ್ಮ ಕಚೇರಿಯಲ್ಲಿ ಜನತಾದರ್ಶನ ನಡೆಸಿ ಸಾರ್ವಜನಿಕರು ಹಾಗೂ ಮುಖಂಡರು ಮತ್ತು ಕಾರ್ಯಕರ್ತರಿಂದ ಕೇಳಿ ಬಂದ ಅಹವಾಲುಗಳನ್ನು ಸ್ವೀಕರಿಸಿ ಅವರು ಮಾತನಾಡಿದರು.ಈಗಾಗಲೆ ಸರಕಾರದ ಪಂಚಗ್ಯಾರಂಟಿ ಯೋಜನೆ ಫಲಪ್ರದವಾಗಿದ್ದು ಈ ಯೋಜನೆಯಿಂದ ಗ್ರಾಮೀಣಪ್ರದೇಶದ ಲಕ್ಷಾಂತರ ಕುಟುಂಬಗಳು ನೆಮ್ಮದಿಯಿಂದ ಜೀವನ ನಡೆಸುವಂತಾಗಿದೆ ಎಂದರು. ಈ ನಡುವೆ ಸರಕಾರದಿಂದ ಜನತೆಗೆ ಆಗಬೇಕಾದ ಕೆಲಸಗಳು ಹಾಗೂ ಹಲವಾರು ಮಾಸಾಶನಗಳು ಬಾರದೆ ಇದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಅರ್ಹ ಫಲಾನುಭವಿಗಳ ಮನೆಬಾಗಿಲಿಗೆ ತೆರಳಿ ಜನತೆಗೆ ಅನುಕೂಲ ಕಲ್ಪಿಸುವಂತೆ ಸೂಚನೆ ನೀಡಿದರು.ಸೆಸ್ಕ್‌ ಎಇಇ ಅರ್ಕೆಶ್ವರಮೂರ್ತಿ, ನೀರಾವರಿ ಇಲಾಖೆ ಎಇಇ ಅಯಾಜ್‌ಪಾಷ, ತಾಪಂ ಇಒ ವಿ.ಪಿ. ಕುಲದೀಪ್, ಪುರಸಭೆ ಮುಖ್ಯಾಧಿಕಾರಿ ರಮೇಶ್, ಲೋಕೋಪಯೋಗಿ ಇಲಾಖೆ ಎಇಇ ಸಿದ್ದೇಶ್ವರಪ್ರಸಾದ್, ಅರಣ್ಯಇಲಾಖೆ ಮಂಜುನಾಥ್, ಟಿ.ವಿ.ಹರಿಪ್ರಸಾದ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಉದಯಶಂಕರ್, ಎಂ.ಎಸ್. ಮಹದೇವ್, ವಕ್ತಾರ ಸೈಯ್ಯದ್‌ಜಾಬೀರ್, ಪುನೀತ್, ನವೀನ್‌ರಂಗಶೆಟ್ಟಿ, ರವಿ ಹಾಗೂ ಮುಖಂಡರು, ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.