ಪಿಯು ಫಲಿತಾಂಶ ಉತ್ತಮ ಸಾಧನೆ

| Published : Apr 12 2024, 01:01 AM IST

ಸಾರಾಂಶ

ಪಟ್ಟಣ ಸೇರಿದಂತೆ ತಾಲೂಕಿನ ೭ ವಿವಿಧ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯು ಪರೀಕ್ಷೆಯ ಫಲಿತಾಂಶದಲ್ಲಿ ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಕಾರಟಗಿ

ಪಟ್ಟಣ ಸೇರಿದಂತೆ ತಾಲೂಕಿನ ೭ ವಿವಿಧ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯು ಪರೀಕ್ಷೆಯ ಫಲಿತಾಂಶದಲ್ಲಿ ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ಇಲ್ಲಿನ ಚೆಳ್ಳೂರು ರಸ್ತೆಯ ಕಸ್ತೂರಿ ಬಾ ಮಹಿಳಾ ಮಹಾವಿದ್ಯಾಲಯ ಮತ್ತು ಗ್ಲೋಬಲ್ ಅಕಾಡೆಮಿ ಪಿಯು ಸೈನ್ಸ್ ಕಾಲೇಜಿಗಳು ಶೇ.೧೦೦ರಷ್ಟು ಫಲಿತಾಂಶ ಪಡೆದಿವೆ.

ಕಸ್ತೂರಿ ಬಾ ಮಹಿಳಾ ವಿದ್ಯಾಲಯದಿಂದ ಒಟ್ಟು ೭೧ ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದು, ಆ ಪೈಕಿ ೪೫ ಉನ್ನತ ಶ್ರೇಣಿಯಲ್ಲಿ ೧೮ ಪ್ರಥಮ ಮತ್ತು ೮ ಜನರು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಮಹಾಲಕ್ಷ್ಮಿ ಭೀಮಪ್ಪ ಚೆಳ್ಳೂರ್ ೫೮೨ (ಶೇ.೯೭.೦೦), ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ವಿಹಾರಿಕಾ ಕೆ. ಶ್ರೀನಿವಾಸ ಬಸವಣ್ಣ ಕ್ಯಾಂಪ್ ೫೭೬(ಶೇ.೯೬.೦೦) ಹಾಗೂ ಕಲಾ ವಿಭಾಗದಲ್ಲಿ ಹನುಮಂತಿ ತಿಮ್ಮಣ್ಣ ಚೆಳ್ಳೂರ್ ೫೭೧ (ಶೇ.೯೫.೫) ರಷ್ಟು ಅಂಕ ಗಳಿಸಿದ್ದಾರೆ. ಕಾಲೇಜು ಸತತ ಎರಡನೇ ಬಾರಿಗೂ ಶೇ.೧೦೦ರಷ್ಟು ಫಲಿತಾಂಶ ಪಡೆದಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಅಮರೇಶ ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗ್ಲೋಬಲ್ ಕಾಲೇಜು: ಸಿದ್ಧಲಿಂಗ ನಗರದಲ್ಲಿನ ಗ್ಲೋಬಲ್ ಅಕಾಡೆಮಿ ಪಿಯು ಸೈನ್ಸ್ ಕಾಲೇಜಿನ ಪ್ರಥಮ ಬ್ಯಾಚ್ ಶೇ. ೧೦೦ರಷ್ಟು ಫಲಿತಾಂಶ ನೀಡುವ ಮೂಲಕ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ತೋರಿದ್ದಾರೆ.

ಪರೀಕ್ಷೆ ಬರೆದ ಒಟ್ಟು ೨೬ ವಿದ್ಯಾರ್ಥಿಗಳಲ್ಲಿ ೧೧ ವಿದ್ಯಾರ್ಥಿಗಳು ಉನ್ನತ ಶ್ರೇಣಿ ೧೫ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಸನಾ ಆಮದಿಹಾಳ ೫೭೩ (ಶೇ.೯೫.೫ರಷ್ಟು) ಅಂಕ ಪಡೆದು ಕಾಲೇಜಿಗೆ ಪ್ರಥಮ ಮತ್ತು ತಾಲೂಕಿನಲ್ಲಿಯೇ ಉನ್ನತ ಸ್ಥಾನ ಪಡೆದಿದ್ದಾಳೆ. ಮಂಜುನಾಥ ಶೇ.೯೪.೫, ಸಂಜನಾ ಶೇ. ೯೩.೮, ವರ್ಷ ಶೇ. ೯೨.೩, ತಂಜಿಮ್ ತಬ್ಸಮ್ 90.8 ಅಂಕ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆಂದು ಪ್ರಾಚಾರ್ಯ ವಿಶ್ವನಾಥ ಹಿಂದಪುರ ತಿಳಿಸಿದ್ದಾರೆ.

ಸಿಎಂಎನ್‌ ಕಾಲೇಜು:

ಇಲ್ಲಿನ ಸಿ. ಮಲ್ಲಿಕಾರ್ಜುನ ನಾಗಪ್ಪ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸಹ ಉತ್ತಮ ಸಾಧನೆ ಮಾಡಿದ್ದಾರೆ. ಕಾಲೇಜಿನ ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ ಒಟ್ಟು ೮೪ ವಿದ್ಯಾರ್ಥಿಗಳಲ್ಲಿ ೬೮ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕಲಾ ವಿಭಾಗದಲ್ಲಿ ೭ ಉನ್ನತ ಶ್ರೇಣಿಯಲ್ಲಿ, ೨೦ ಪ್ರಥಮ, ೧೦ ದ್ವಿತೀಯ ಮತ್ತು ೬ ಜನರು ತೃತೀಯ ಶ್ರೇಣಿಯಲ್ಲಿ ತೇಗಡೆಯಾಗಿದ್ದಾರೆ. ಆ ಪೈಕಿ ನಾಗರತ್ನ ಪ್ರಭುರಾಜ್ ೫೬೭ (ಶೇ.೯೪.೫), ಮಹಾದೇವಿ ರಾಮಣ್ಣ ೫೫೭(ಶೇ.೯೨.೮೩) ಮತ್ತು ಹನುಮಂತ ನಾಗರಾಜ ೫೪೪ (ಶೇ.೯೦.೬೬)ರಷ್ಟು ಅಂಕ ಪಡೆದು ಉತ್ತಮ ಸಾಧನೆ ತೋರಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಇಬ್ಬರು ಉನ್ನತ ಶ್ರೇಣಿ, ೧೬ ಜನ ಪ್ರಥಮ ಶ್ರೇಣಿ ಮತ್ತು ೭ ಜನರು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ ಎಂದು ಪ್ರಾಚಾರ್ಯ ನಾರಾಯಣ ವೈದ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.