ಸಾರಾಂಶ
ದ್ವಿತೀಯ ಪಿಯುಸಿ ಅಂತಿಮ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯದ ಪ್ರತಿಷ್ಠಿತ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅದ್ವಿತೀಯ ಸಾಧನೆ ಮಾಡಿದ್ದಾರೆ. 593 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದುಕೊಂಡು, ವಿವಿಧ ವಿಷಯಗಳಲ್ಲಿ ಶೇ.100 ಅಂಕ ಪಡೆದಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ದ್ವಿತೀಯ ಪಿಯುಸಿ ಅಂತಿಮ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯದ ಪ್ರತಿಷ್ಠಿತ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅದ್ವಿತೀಯ ಸಾಧನೆ ಮಾಡಿದ್ದಾರೆ. 593 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದುಕೊಂಡು, ವಿವಿಧ ವಿಷಯಗಳಲ್ಲಿ ಶೇ.100 ಅಂಕ ಪಡೆದಿದ್ದಾರೆ. 594 ಅಂಕಗಳನ್ನು ಪಡೆದುಕೊಂಡ ಪ್ರತೀಕ್ಷಾ ಎಸ್ ರಾಜ್ಯಕ್ಕೆ ಆರನೆಯ ಸ್ಥಾನ, 592 ಅಂಕಗಳನ್ನು ಪಡೆದುಕೊಂಡ ಕೃಪಾ ಸಾಂಚಿ ಮೌರ್ಯ ರಾಜ್ಯಕ್ಕೆ ಎಂಟನೆಯ ಸ್ಥಾನ, 591 ಅಂಕಗಳನ್ನು ಪಡೆದು ಕೊಂಡ ಹೇಮಂತ್ ಎಸ್ ಜೆ ರಾಜ್ಯಕ್ಕೆ ಒಂಬತ್ತನೆಯ ಸ್ಥಾನ ಪಡೆದು ಕೊಂಡಿದ್ದಾರೆ. ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುವುದು ಉಲ್ಲೇಖನೀಯಕಳೆದ ಬಾರಿ 597 ಅಂಕಗಳ ಜೊತೆಗೆ ಇಬ್ಬರು ವಿದ್ಯಾರ್ಥಿಗಳು ರಾಜ್ಯಕ್ಕೆ ದ್ವಿತೀಯ ಸ್ಥಾನಿಗಳಾಗಿದ್ದರು. ರಾಜ್ಯದ ಟಾಪ್ ಟೆನ್‌ನಲ್ಲಿ ಎಕ್ಸೆಲ್ ನ 9 ವಿದ್ಯಾರ್ಥಿಗಳಿದ್ದರು. ಕಳೆದ ಜನವರಿ ತಿಂಗಳಲ್ಲಿ ನಡೆದ ಜೆ ಇ ಇ ಪರೀಕ್ಷೆಯಲ್ಲಿ ಪ್ರಣವ್ ಪೊನ್ನಣ್ಣ 99.58, ಮೊಹಮ್ಮದ್ ಆಯ್ಮಾನ್ 99.23, ನಿಶಾಂತ್ ಜೈನ್ 99.21, ನಾಗಣ್ಣ ಗೌಡ 99.15 ಪರ್ಸಂಟೇಲ್ ನೊಂದಿಗೆ ಅತ್ಯುತ್ತಮ ಸಾಧನೆ ಮಾಡಿದ್ದಾರೆ.ಕಳೆದ ಶೈಕ್ಷಣಿಕ ವರ್ಷದಲ್ಲಿ ಸಿಇಟಿಯಲ್ಲಿ 17 ವಿದ್ಯಾರ್ಥಿಗಳು 1000 ದ ಒಳಗೆ ರ್‍ಯಾಂಕ್, 48 ವಿದ್ಯಾರ್ಥಿಗಳು 2000ದ ಒಳಗೆ ರ್‍ಯಾಂಕ್ ಪಡೆದುಕೊಂಡಿದ್ದರು. ಕಳೆದ ಬಾರಿಯ ನೀಟ್ ಪರೀಕ್ಷೆಯಲ್ಲಿ 720 ರಲ್ಲಿ 710 ಅಂಕಗಳನ್ನು ಪಡೆದುಕೊಂಡು ಪ್ರಜ್ವಲ್ ಎಚ್ ಎಂ ರಾಜ್ಯಕ್ಕೆ ಗೌರವ ತಂದಿದ್ದರು. ಒಟ್ಟು ನಾಲ್ಕು ವಿದ್ಯಾರ್ಥಿಗಳು ಏಮ್ಸ್ ಗೆ ಆಯ್ಕೆಯಾಗಿದ್ದರು.
ಹಲವು ವಿದ್ಯಾರ್ಥಿಗಳು ದೇಶದ ಪ್ರತಿಷ್ಠಿತ ಮೆಡಿಕಲ್ ಕಾಲೇಜುಗಳಲ್ಲಿ ಸ್ಥಾನ ಪಡೆಯುವುದರೊಂದಿಗೆ, ರಾಜ್ಯದ ಶೈಕ್ಷಣಿಕ ಭೂಪಟದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದರು.ವಿದ್ಯಾರ್ಥಿಗಳ ಸಾಧನೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಪ್ರಾಂಶುಪಾಲರು, ಪ್ರಾಧ್ಯಾಪಕರು ಮತ್ತು ಶಿಕ್ಷಕೇತರ ಸಿಬ್ಬಂದಿ ವರ್ಗ ಹಾಗೂ ಹೆತ್ತವರು ಅಭಿನಂದಿಸಿದ್ದಾರೆ.