ಸಾರಾಂಶ
ಪಟ್ಟಣದ ಸ.ಪ.ಪೂ ಕಾಲೇಜಿನ ವಿದ್ಯಾರ್ಥಿನಿ ಸಿ.ವಿದ್ಯಾ ಹಾಗೂ ಬಂಗಿಬಸಪ್ಪ ವಿಜ್ಞಾನ ಪಿಯು ಕಾಲೇಜಿನ ಅರುಣ, ರೇಣುಕಾ ಉತ್ತಂಗಿ ಮೂವರು ವಿದ್ಯಾರ್ಥಿನಿಯರು ತಾಲೂಕಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದರೆ ಕಲಾ ವಿಭಾಗದಲ್ಲಿ ಎಸ್‌ಎಸ್‌ಎಚ್ ಜೈನ್ ಕಾಲೇಜಿನ ಆರ್.ಪುಟ್ಟರಾಜು ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ್ದಾನೆ.
ಕನ್ನಡಪ್ರಭ ವಾರ್ತೆ ಹರಪನಹಳ್ಳಿ
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ವಿಜ್ಞಾನ ವಿಭಾಗದಲ್ಲಿ ಪಟ್ಟಣದ ಸ.ಪ.ಪೂ ಕಾಲೇಜಿನ ವಿದ್ಯಾರ್ಥಿನಿ ಸಿ.ವಿದ್ಯಾ ಹಾಗೂ ಬಂಗಿಬಸಪ್ಪ ವಿಜ್ಞಾನ ಪಿಯು ಕಾಲೇಜಿನ ಅರುಣ, ರೇಣುಕಾ ಉತ್ತಂಗಿ ಮೂವರು ವಿದ್ಯಾರ್ಥಿನಿಯರು ತಾಲೂಕಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದರೆ ಕಲಾ ವಿಭಾಗದಲ್ಲಿ ಎಸ್‌ಎಸ್‌ಎಚ್ ಜೈನ್ ಕಾಲೇಜಿನ ಆರ್.ಪುಟ್ಟರಾಜು ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ್ದಾನೆ.ಸ.ಪ ಪೂ ಕಾಲೇಜಿಗೆ ಶೇ.34 ಫಲಿತಾಂಶ:
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 249 ವಿದ್ಯಾರ್ಥಿಗಳಿಗೆ 83 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅತ್ಯುನ್ನತ ಶ್ರೇಣಿ -9, ಪ್ರಥಮ -42, ದ್ವಿತೀಯ -25, ತೃತೀಯ -10 ಹೀಗೆ ಉತ್ತೀರ್ಣರಾಗಿದ್ದು, ವಿಜ್ಞಾನ ವಿಭಾಗದಲ್ಲಿ ವಿದ್ಯಾ ಸಿ. 558 ಅಂಕ ಪಡೆದು ಹರಪನಹಳ್ಳಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ ಎಂದು ಪ್ರಾಚಾರ್ಯ ವೆಂಕಟೇಶ ತಿಳಿಸಿದ್ದಾರೆ.ಬಂಗಿ ಬಸಪ್ಪ ಕಾಲೇಜಿಗೆ ಶೇ.62 ಫಲಿತಾಂಶ:
ಪಟ್ಟಣದ ಬಂಗಿ ಬಸಪ್ಪ ವಿಜ್ಞಾನ ಪಿಯು ಕಾಲೇಜಿನಲ್ಲಿ 238 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ ಅತ್ತುನ್ನತ ಶ್ರೇಣಿ -9, ಪ್ರಥಮ -109, ದ್ವಿತೀಯ -28 ಈ ರೀತಿ ಉತ್ತೀರ್ಣರಾಗಿದ್ದಾರೆ. ಅದರಲ್ಲಿ ಅರುಣ ಡಿ.555(ಶೇ.92.2) ಅಂಕಗಳೊಂದಿಗೆ ತಾಲೂಕಿಗೆ ದ್ವಿತೀಯ ಸ್ಥಾನ ಪಡೆದರೆ, ರೇಣುಕಾ ಉತ್ತಂಗಿ 547(ಶೇ.91.16) ತಾಲೂಕಿಗೆ ತೃತೀಯ ಸ್ಥಾನ ಪಡೆದಿದ್ದಾಳೆ ಎಂದು ಪ್ರಾಚಾರ್ಯ ಅರುಣಕುಮಾರ ತಿಳಿಸಿದ್ದಾರೆ.ಎಸ್ಎಸ್ಎಚ್ ಜೈನ್ ಕಾಲೇಜಿಗೆ ಶೇ.63.30 ಫಲಿತಾಂಶ:
ಪಟ್ಟಣದ ಎಸ್ಎಸ್ಎಚ್ ಜೈನ್ ಪಿಯು ಕಾಲೇಜಿನಲ್ಲಿ 366 ವಿದ್ಯಾರ್ಥಿಗಳಲ್ಲಿ 239 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅತ್ಯುನ್ನತ ಶ್ರೇಣಿ -36, ಪ್ರಥಮ ಸ್ಥಾನ -125.ಕಲಾವಿಭಾಗದಲ್ಲಿ ಆರ್ .ಪುಟ್ಟರಾಜು 586 ಅಂಕಗಳಿಸಿ ಹರಪನಹಳ್ಳಿ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದರೆ, ವಿಜ್ಞಾನ ವಿಭಾಗದಲ್ಲಿ ಸೃಷ್ಟಿ 539 ಅಂಕಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ್ದಾಳೆ.
ವಾಣಿಜ್ಯ ವಿಭಾಗದಲ್ಲಿ ಶ್ವೇತ 531 ಅಂಕಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ್ದಾಳೆ ಎಂದು ಪ್ರಾಚಾರ್ಯ ಕೆ.ಎಂ. ವಿಶ್ವನಾಥ ತಿಳಿಸಿದ್ದಾರೆ.ಎಸ್‌ಯುಜೆಎಂ ಕಾಲೇಜಿಗೆ ಶೇ. 95 ಫಲಿತಾಂಶ:
ಪಟ್ಟಣದ ಎಸ್‌ಯುಜೆಎಂ ಕಾಲೇಜಿನಲ್ಲಿ ಅತ್ಯುನ್ನತ ಶ್ರೇಣಿ -42, ಪ್ರಥಮ -190, ದ್ವಿತೀಯ -95, ಅದರಲ್ಲಿ ಕಲಾ ವಿಭಾಗದಲ್ಲಿ ಕಾಲೇಜಿಗೆ ಪ್ರಥಮರಾಗಿ ಕಂಬಟ್ರಹಳ್ಳಿಯ ಕೋಮಲಾಕ್ಷಿ -579, ಎಚ್.ಶುಷ್ಮ -569 ದ್ವಿತೀಯ ಹಾಗೂ ರಕ್ಷಿತ -568 ಅಂಕಗಳೊಂದಿಗೆ ಕಾಲೇಜಿಗೆ ತೃತೀಯ ಸ್ಥಾನ ಪಡೆದಿದ್ದಾಳೆ ಎಂದು ಪ್ರಾಚಾರ್ಯ ಗುರುಸ್ವಾಮಿ ತಿಳಿಸಿದ್ದಾರೆ.