ಶೈಕ್ಷಣಿಕ ಕ್ಷೇತ್ರದಲ್ಲಿ ಪಿಯುಸಿ ಟರ್ನಿಂಗ್ ಪಾಯಿಂಟ್: ಪ್ರೊ.ಮಲ್ಲಣ್ಣ ಜಿಗಬಡ್ಡಿ

| Published : Feb 04 2025, 12:30 AM IST

ಶೈಕ್ಷಣಿಕ ಕ್ಷೇತ್ರದಲ್ಲಿ ಪಿಯುಸಿ ಟರ್ನಿಂಗ್ ಪಾಯಿಂಟ್: ಪ್ರೊ.ಮಲ್ಲಣ್ಣ ಜಿಗಬಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ಮಯ ವ್ಯರ್ಥ ಮಾಡದೇ ನಿರಂತರ ಅಧ್ಯಯನ ಮಾಡಿದಲ್ಲಿ ಉನ್ನತ ಶಿಕ್ಷಣ ಪಡೆದುಕೊಳ್ಳಲು ಸಾಕಷ್ಟು ಅವಕಾಶ ದೊರೆಯಲಿವೆ.

ಕನ್ನಡಪ್ರಭ ವಾರ್ತೆ ಮುಧೋಳ

ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕ್ಷೇತ್ರದಲ್ಲಿ ದ್ವಿತೀಯ ಪಿಯುಸಿ ಟರ್ನಿಂಗ್ ಪಾಯಿಂಟ್ ಇದ್ದಂತೆ. ತಾವು ಯಾವುದೇ ಕಾರಣಕ್ಕೂ ಸಮಯ ವ್ಯರ್ಥ ಮಾಡದೇ ನಿರಂತರ ಅಧ್ಯಯನ ಮಾಡಿದಲ್ಲಿ ಉನ್ನತ ಶಿಕ್ಷಣ ಪಡೆದುಕೊಳ್ಳಲು ಸಾಕಷ್ಟು ಅವಕಾಶ ದೊರೆಯಲಿವೆ. ಇಲ್ಲದಿದ್ದರೆ ಅವಕಾಶಗಳಿಂದ ವಂಚಿತರಾಗಬೇಕಾಗುತ್ತದೆ ಎಂಬುದು ಎಂದಿಗೂ ಮರೆಯಬಾರದೆಂದು ಎಸ್.ಆರ್.ಕಂಠಿ ಕಾಲೇಜು ಪ್ರಾಚಾರ್ಯ ಪ್ರೊ.ಮಲ್ಲಣ್ಣ ಜಿಗಬಡ್ಡಿ ಹೇಳಿದರು.

ನಗರದ ವಾಗ್ದೇವಿ ವಿಕಾಸ ಪಿಯು ವಿಜ್ಞಾನ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಮತ್ತು ಬಹುಮಾನ ವಿತರಣಾ ಸಮಾರಂಭ ಉದ್ಘಾಟಿಸಿ, ಮುಖ್ಯ ಅತಿಥಿ ಸ್ಥಾನವಹಿಸಿ ಮಾತನಾಡಿದ ಅವರು, ದ್ವಿತೀಯ ಪಿಯು ವಿದ್ಯಾರ್ಥಿಗಳು ತಾವು ಇಟ್ಟುಕೊಂಡಿರುವ ಗುರಿ ತಲುಪಲು ನಿರಂತರ ಹಾರ್ಡ್‌ವರ್ಕ್ ಮಾಡಬೇಕು. ಯಾವ ವಿಷಯದಲ್ಲಿ ತಾವು ವೀಕ್ ಇದ್ದಿರಿ ಆ ವಿಷಯದ ಕುರಿತು ಶಿಕ್ಷಕರಿಂದ ತಿಳಿದುಕೊಳ್ಳಬೇಕು. ನಮ್ಮಿಂದ ಸಾಧ್ಯವಿಲ್ಲ ಎಂಬ ಭಾವನೆಯಿಂದ ದೂರು ಉಳಿಯಬೇಕು. ಅಸಾಧ್ಯವಾದುದನ್ನು ಸಾಧ್ಯವನ್ನಾಗಿ ಮಾಡಬೇಕು. ಉತ್ತಮ ಗೆಳೆಯರ ಜೊತೆ ಬೆರೆಯಬೇಕು. ಒಟ್ಟಾರೆ ಭರವಸೆ, ನಂಬಿಕೆ, ಶ್ರಮ ಇದ್ದರೆ ತಾವು ಅಂದುಕೊಂಡಂತೆ ಸಾಧಿಸಲು ಸಾದ್ಯವಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೋರ್ವ ವಿದ್ಯಾರ್ಥಿಗಳು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಹೇಳಿದರು.

ವಾಗ್ದೇವಿ ವಿಕಾಸ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಲ್.ಕೆ.ಕಾಮಾ ಅಧ್ಯಕ್ಷತೆವಹಿಸಿ ಮಾತನಾಡಿದರು, ಸಂಸ್ಥೆ ಕಾರ್ಯದರ್ಶಿ ಪ್ರೊ.ಎ.ಆರ್. ಜಿಗಜಿನ್ನಿ, ಖಜಾಂಚಿ ಆರ್.ಬಿ.ತುರಮರಿ, ನಿರ್ದೇಶಕಿ ಸುಮಾ ಹೆರಕಲ್, ಪ್ರಾಚಾರ್ಯ ಎಸ್.ಜಿ.ನ್ಯಾಮಗೌಡರ ವೇದಿಕೆ ಮೇಲೆ ಇದ್ದರು. ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಲಾಯಿತು.