ಸಾರಾಂಶ
ಕಳೆದ ವರ್ಷ ಪುರಸಭೆ ಕೈಗೊಂಡಿದ್ದ ಅತಿಕ್ರಮಣ ತೆರವು ಕಾರ್ಯಾಚರಣೆಗೆ ಸಹಕರಿಸಿದ ಗೂಡಂಗಡಿಕಾರರಿಗೆ, ಬೀದಿಬದಿಯ ಫಾಸ್ಟ್‌ಪುಡ್ ಮಾರಾಟಗಾರರಿಗೆ ಶಾಸಕರ ಅಪೇಕ್ಷೆಯಂತೆ ಪುರಸಭೆಯು ಪುಡ್ ಕೋರ್ಟ್ ಭಾಗ್ಯ ಕರುಣಿಸಿದೆ.
ಓರ್ವಲ್ಲ್ ಫರ್ನಾಂಡೀಸ್
ಹಳಿಯಾಳ:ಕಳೆದ ವರ್ಷ ಪುರಸಭೆ ಕೈಗೊಂಡಿದ್ದ ಅತಿಕ್ರಮಣ ತೆರವು ಕಾರ್ಯಾಚರಣೆಗೆ ಸಹಕರಿಸಿದ ಗೂಡಂಗಡಿಕಾರರಿಗೆ, ಬೀದಿಬದಿಯ ಫಾಸ್ಟ್‌ಪುಡ್ ಮಾರಾಟಗಾರರಿಗೆ ಶಾಸಕರ ಅಪೇಕ್ಷೆಯಂತೆ ಪುರಸಭೆಯು ಪುಡ್ ಕೋರ್ಟ್ ಭಾಗ್ಯ ಕರುಣಿಸಿದೆ.
ಅತಿಕ್ರಮಣ ತೆರವು ಕಾರ್ಯಾಚರಣೆಗೆ ಸ್ವಯಂ ಪ್ರೇರಣೆಯಿಂದ ಸಹಕರಿಸಿದ ಬೀದಿಬದಿಯ ಗೂಡಂಗಡಿಕಾರರಿಗೆ. ಸಣ್ಣ ವ್ಯಾಪಾರಸ್ಥರಿಗೆ ಅವರ ಆರ್ಥಿಕ ವಹಿವಾಟಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಶಾಸಕ ಆರ್.ವಿ. ದೇಶಪಾಂಡೆ ನೀಡಿದ ಗ್ಯಾರಂಟಿ ಭರವಸೆಯನ್ನು ಕಾರ್ಯರೂಪಕ್ಕೆ ತರಲು ಮುಂದಾಗಿರುವ ಪುರಸಭೆ ಪುಡ್ ಕೋರ್ಟ್ ನಿರ್ಮಿಸಲು ಮುಂದಾಗಿದೆ.ಪುಡ್ ಕೋರ್ಟ್ ಗ್ಯಾರಂಟಿ:ವಾಹನಗಳ ಮತ್ತು ಪಾದಚಾರಿಗಳ ಸಂಚಾರಕ್ಕೆ ಅಡೆತಡೆಯುಂಟ ಮಾಡುತ್ತಿದ್ದ, ಅಕ್ರಮವಾಗಿ ತಲೆಯೆತ್ತಿದ್ದ ಗೂಡಗಂಡಿ, ಬೀದಿಬದಿಯ ಅಂಗಡಿಗಳನ್ನು ತೆರವುಗೊಳಿಸಬೇಕೆಂಬ ಬೇಡಿಕೆಯು ಶಾಸಕ ದೇಶಪಾಂಡೆ ಅವರಿಗೆ ಸ್ಥಳೀಯ ನಿವಾಸಿಗಳು ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ಅತಿಕ್ರಮಣ ತೆರವು ಕಾರ್ಯಾಚರಣೆಯನ್ನು ಪುರಸಭೆ ನಡೆಸಿದ್ದಾಗ ರಸ್ತೆ, ಸರ್ಕಾರಿ ಜಮೀನನ್ನು ಅತಿಕ್ರಮಿಸಿದ 90ಕ್ಕೂ ಹೆಚ್ಚು ಗೂಡಂಗಡಿ ತೆರವುಗೊಳಿಸಲಾಗಿತ್ತು. ಇದಕ್ಕೆವ್ಯಾಪಾರಸ್ಥರು ಸಹಕಾರ ನೀಡಿದ್ದರು. ಹೀಗಾಗಿ ಶಾಸಕರು ಇವರಿಗೆ ಪುಡ್ ಕೋರ್ಟ್ ಗ್ಯಾರಂಟಿ ನೀಡಿ , ಈ ಯೋಜನೆ ಕಾರ್ಯರೂಪಕ್ಕೆ ತರಲು ಮುತುರ್ವಜಿ ವಹಿಸಿದ್ದರು.ಪಟ್ಟಣದ ಮೌರ್ಯ ಹೋಟೆಲ್ ಪಕ್ಕ ಮರಡಿ ಗುಡ್ಡದ ಬಳಿ ಅಂದಾಜು 15 ಗುಂಟೆ ಜಮೀನಿನಲ್ಲಿ ಪುಡ್ ಕೋರ್ಟ್ ನಿರ್ಮಾಣವಾಗಲಿದೆ. ಅಂದಾಜು ₹ 60 ಲಕ್ಷ ವೆಚ್ಚದ ಕ್ರಿಯಾಯೋಜನೆಗೆ ಜಿಲ್ಲಾಡಳಿತದಿಂದ ಮಂಜೂರಾತಿ ದೊರೆತಿದೆ. ಪಟ್ಟಣದೆಲ್ಲೆಡೆ ರಸ್ತೆ ಬದಿಯಲ್ಲಿರುವ ಟೀ ಸ್ಟಾಲ್, ಫಾಸ್ಟ್‌ಪುಡ್, ವಡಾಪಾವ್, ಸಮೋಸಾ, ಬ್ಹೆಲ್ ಪುರಿ ಇತ್ಯಾದಿ, ಎಳನೀರು, ಕಬ್ಬಿನ ರಸ, ಜ್ಯೂಸ್, ಐಸ್ ಕ್ರಿಮ್ ಮೊದಲಾದವುಗಳನ್ನು ಮಾರಾಟ ಮಾಡುವ ಎಲ್ಲ ಚಿಕ್ಕ-ಪುಟ್ಟ ವ್ಯಾಪಾರಸ್ಥರಿಗೆ, ಗೂಡಂಗಡಿಕಾರರಿಗೆ ಒಂದೇ ಸ್ಥಳದಲ್ಲಿ ಮಾರಾಟ ಮಾಡುವ ಹಾಗೂ ಗ್ರಾಹಕರನ್ನು ಒಂದೆಡೇ ಸೇರಿಸುವ ವ್ಯವಸ್ಥೆಯನ್ನು ಈ ಪುಡ್ ಕೋರ್ಟ್ ಹೊಂದಲಿದೆ ಎಂದು ಹೇಳಲಾಗುತ್ತಿದೆ. ಮಹಾನಗರಗಳಲ್ಲಿರುವ ಈ ಪುಡ್ ಕೋರ್ಟ್ ಹೊಸ ಆರ್ಥಿಕ ಕನ್ಸೆಪ್ಟ್ ಹಳಿಯಾಳದಲ್ಲಿ ಯಶಸ್ವಿಯಾಗುವುದೇ ಎಂಬುವುದನ್ನು ಕಾದು ನೋಡಬೇಕಾಗಿದೆ.ಪುಡ್ ಕೋರ್ಟ್‌ನಲ್ಲಿ ಗ್ರಾಹಕರು ಸ್ವಚ್ಛಂದವಾಗಿ ಕುಳಿತುಕೊಳ್ಳಲು ಆಸನ ವ್ಯವಸ್ಥೆ, ಕೈತೊಳೆಯಲು ಸಿಂಕ್, ವಾಹನ್ ಪಾರ್ಕಿಂಗ್ ವ್ಯವಸ್ಥೆ, ನೀರಿನ ವ್ಯವಸ್ಥೆ ಕಲ್ಪಿಸುವ ಸಮಗ್ರ ಯೋಜನೆಯನ್ನು ನಾವು ರೂಪಿಸಿದ್ದೇವೆ. ಈಗಾಗಲೇ ಯೋಜನೆಗೆ ಮಂಜೂರಾತಿ ದೊರೆತಿದ್ದು, ಅನುದಾನ ಬಿಡುಗಡೆಯಾದ ನಂತರ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಆರಂಭಿಸಲಿದ್ದೆವೆ. ಅಲ್ಲಿಯವರೆಗೆ ಪಟ್ಟಣದ ಕೆಲವೆಡೆ ತಾತ್ಕಾಲಿಕವಾಗಿ ಸಂಚಾರಕ್ಕೆ ತೊಡಕಾಗದಂತೆ ಅಂಗಡಿ ತೆರೆಯಲು ಅವಕಾಶ ನೀಡಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಅಶೋಕ ಸಾಳೆನ್ನನವರ ಹೇಳಿದರು.
ಶಾಸಕರು ಬೀದಿಬದಿಯ ಸಣ್ಣ ವ್ಯಾಪಾರಸ್ಥರಿಗೆ ನೀಡಿದ ವಾಗ್ದಾಣದಂತೆ ಪುಡ್ ಕೋರ್ಟ್ ಯೋಜನೆ ಮಂಜೂರು ಮಾಡಿಸಿದ್ದಾರೆ. ಖಂಡಿತವಾಗಿಯೂ ಈ ಪುಡ್ ಕೋರ್ಟ್ ಯೋಜನೆಯು ಹಳಿಯಾಳ ಪಟ್ಟಣದ ಆಕರ್ಷಣೆ ಹೆಚ್ಚಿಸಲಿದೆ ಎಂದು ಪುರಸಭೆ ನಿಕಟಪೂರ್ವ ಅಧ್ಯಕ್ಷ ಅಜರ್ ಬಸರಿಕಟ್ಟಿ ತಿಳಿಸಿದರು.