ಸಾರಾಂಶ
ಶ್ರೀಸಿದ್ಧಾರೂಢರ ಜನ್ಮಸ್ಥಳವಾದ ಬೀದರ ಜಿಲ್ಲೆಯ ಚಳಕಾಪೂರ ಗ್ರಾಮದಿಂದ ಡಿ. 23ರಿಂದ ಈ ಆರೂಢ ಜ್ಯೋತಿ ಯಾತ್ರೆಗೆ ಗಣ್ಯರು ಚಾಲನೆ ನೀಡಲಿದ್ದು, ಅಲ್ಲಿಂದ ಹೊರಡುವ ಜ್ಯೋತಿಯಾತ್ರೆಯು ಕರ್ನಾಟಕ, ಆಂಧ್ರ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಲ್ಲಿ ಸಂಚರಿಸಲಿದೆ.
ಹುಬ್ಬಳ್ಳಿ:
ಸಿದ್ಧಾರೂಢರ 190ನೇ ಜಯಂತ್ಯುತ್ಸವ ಹಾಗೂ ಗುರುನಾಥಾರೂಢರ 115ನೇ ಜಯಂತ್ಯುತ್ಸವ, ಶ್ರೀಸಿದ್ಧಾರೂಢರ ಕಥಾಮೃತದ ಶತಮಾನೋತ್ಸವ ನಿಮಿತ್ತ ಹಮ್ಮಿಕೊಂಡಿರುವ ಆರೂಢ ಜ್ಯೋತಿ ಯಾತ್ರೆಗೆ ನಗರದ ಸಿದ್ಧಾರೂಢರ ಮಠದ ಮುಂಭಾಗದಿಂದ ವಿಶೇಷ ಪೂಜೆ ಸಲ್ಲಿಸಿ ಚಳಕಾಪುರಕ್ಕೆ ಕಳಿಸಲಾಯಿತು.ಶ್ರೀಸಿದ್ಧಾರೂಢರ ಜನ್ಮಸ್ಥಳವಾದ ಬೀದರ ಜಿಲ್ಲೆಯ ಚಳಕಾಪೂರ ಗ್ರಾಮದಿಂದ ಡಿ. 23ರಿಂದ ಈ ಆರೂಢ ಜ್ಯೋತಿ ಯಾತ್ರೆಗೆ ಗಣ್ಯರು ಚಾಲನೆ ನೀಡಲಿದ್ದು, ಅಲ್ಲಿಂದ ಹೊರಡುವ ಜ್ಯೋತಿಯಾತ್ರೆಯು ಕರ್ನಾಟಕ, ಆಂಧ್ರ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ವಿವಿಧ ಮಠ ಹಾಗೂ ವಿವಿಧ ಸ್ಥಳಗಳಲ್ಲಿ ಸಂಚರಿಸಿ ಫೆ. 19 ರಂದು ನಗರದ ಶ್ರೀ ಸಿದ್ಧಾರೂಢ ಮಠಕ್ಕೆ ಬಂದು ತಲುಪಲಿದೆ. ಈ ಕಾರ್ಯಕ್ರಮದ ನಿಮಿತ್ತವಾಗಿ ಪೂರ್ವಭಾವಿಯಾಗಿ ಭಾನುವಾರ ಬೆಳಗ್ಗೆ ಆರೂಢ ಜ್ಯೋತಿ ಯಾತ್ರೆಯನ್ನು ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ಶ್ರೀಮಠದ ಟ್ರಸ್ಟ್ ಕಮಿಟಿಯ ಪದಾಧಿಕಾರಿಗಳು, ಧರ್ಮದರ್ಶಿಗಳು ಹಾಗೂ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.
ಈ ವೇಳೆ ಟ್ರಸ್ಟ್ ಕಮಿಟಿಯ ಚೇರ್‌ಮನ್ ಬಸವರಾಜ ಕಲ್ಯಾಣಶೆಟ್ಟರ, ವೈಸ್‌ಚೇರ್‌ಮನ್ ಮಂಜುನಾಥ ಮುನವಳ್ಳಿ, ಗೌರವ ಕಾರ್ಯದರ್ಶಿ ಸರ್ವಮಂಗಳಾ ಪಾಠಕ, ಧರ್ಮದರ್ಶಿಗಳಾದ ಡಾ. ಗೋವಿಂದ ಮಣ್ಣೂರ, ಶಾಮಾನಂದ ಪೂಜೇರಿ. ಬಾಳು ಮಗಜಿಕೊಂಡಿ, ಚನ್ನವೀರ ಮುಂಗುರವಾಡಿ, ಉದಯಕುಮಾರ ನಾಯ್ಕ, ಅಂದಾನಪ್ಪ ಚಾಕಲಬ್ಬಿ, ವಸಂತ ಸಾಲಗಟ್ಟಿ, ರಮೇಶ ಬೆಳಗಾವಿ, ವಿನಾಯಕ ಘೋಡ್ಕೆ, ಶ್ರೀಮಠದ ಮ್ಯಾನೇಜರ್ ಈರಣ್ಣ ತುಪ್ಪದ ಸೇರಿದಂತೆ ಹಲವರಿದ್ದರು.