ತರೀಕೆರೆ ಡಿ.21 ರಿಂದ ಡಿ.24 ರವರೆಗೆ ತಾಲೂಕಿನಾದ್ಯಂತ ಪಲ್ಸ್ ಪೋಲಿಯೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಈ ವರ್ಷ ಒಟ್ಟು 15929, 5 ವರ್ಷದ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಚಂದ್ರೇಖರ್‌ ಬಿ.ಜಿ ತಿಳಿಸಿದರು.

- ತಾಲೂಕು ಮಟ್ಟದ ಪಲ್ಸ್ ಪೋಲಿಯೋ ಚಾಲನಾ ಸಮಿತಿ ಸಭೆಯಲ್ಲಿ ಡಾ.ಚಂದ್ರೇಖರ್‌

ಕನ್ನಡಪ್ರಭ ವಾರ್ತೆ, ತರೀಕೆರೆ

ಡಿ.21 ರಿಂದ ಡಿ.24 ರವರೆಗೆ ತಾಲೂಕಿನಾದ್ಯಂತ ಪಲ್ಸ್ ಪೋಲಿಯೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಈ ವರ್ಷ ಒಟ್ಟು 15929, 5 ವರ್ಷದ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಚಂದ್ರೇಖರ್‌ ಬಿ.ಜಿ ತಿಳಿಸಿದರು.

ರೀಕೆರೆ ಮತ್ತು ಅಜ್ಜಂಪುರ ತಾಲೂಕು ತಹಸೀಲ್ದಾರ್ ವಿನಾಯಕ್ ಸಾಗರ್ ಅಧ್ಯಕ್ಷತೆಯಲ್ಲಿ ನಡೆದ ತಾಲೂಕು ಮಟ್ಟದ ಪಲ್ಸ್ ಪೋಲಿಯೋ ಚಾಲನಾ ಸಮಿತಿ ಸಭೆಯಲ್ಲಿ ಮಾತನಾಡಿ ಈ ಗುರಿ ತಲುಪಲು ಒಟ್ಟು 114 ಸ್ಥಿರ ಬೂತ್, 10 ಸಂಚಾರಿ ಮತ್ತು 12 ಟ್ರಾನ್ಸಿಟ್ ಬೂತ್‌ಗಳಲ್ಲಿ ಡಿ.21 ರಂದು ಲಸಿಕೆ ಹಾಕಲಾಗುವುದು. ಗ್ರಾಮೀಣ ಭಾಗದಲ್ಲಿ ಡಿ.22 ಮತ್ತು ಡಿ.23 ಹಾಗೂ ತರೀಕೆರೆ ಪಟ್ಟಣದಲ್ಲಿ ಡಿ. 22 ರಿಂದ ಡಿ. 24 ರವರೆಗೆ ಸಿಬ್ಬಂದಿ ಮನೆ ಮನೆ ಭೇಟಿ ಮಾಡಿ ಪೋಲಿಯೋ ಲಸಿಕೆ ಪಡೆಯದ ಮಕ್ಕಳನ್ನು ಗುರುತಿಸಿ ಲಸಿಕೆ ಹಾಕಲಾಗುವುದು ಎಂದು ತಿಳಿಸಿದರು.

ತಹಸೀಲ್ದಾರ್ ವಿನಾಯಕ್ ಸಾಗರ್ ಮಾತನಾಡಿ ಪುರಸಭೆ, ತಾಲೂಕು ಪಂಚಾಯಿತಿ, ಗ್ರಾಪಂಗಳು, ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಅಗತ್ಯವಾದ ಬ್ಯಾನರ‍್ ಹಾಗೂ ಮಧ್ಯಾಹ್ನದ ಊಟದ ವ್ಯವಸ್ಥೆ ನಿರ್ವಹಿಸುವಂತೆ ಸೂಚಿಸಿದರು ಮತ್ತು ಎಲ್ಲಾ ಇಲಾಖೆಗಳು ಅಗತ್ಯ ಸಹಕಾರ ಮತ್ತು ಪ್ರಚಾರಕೈಗೊಂಡು ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೆ ಸೂಚಿಸಿದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು ಶಿವಪ್ಪ ಜಿ. ತರೀಕೆರೆ ಮತ್ತು ಅಜ್ಜಂಪುರ ತಾಪಂ ಕಾರ್ಯನಿರ್ವಹಣಾಧಿಕಾರಿ, ಶಿಶು ಅಭಿವೃದ್ಧಿ ಅಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿ, ಪುರಸಭೆ. ಪಪಂ ಮುಖ್ಯಾಧಿಕಾರಿಗಳು, ಮೆಸ್ಕಾಂ ಅಧಿಕಾರಿಗಳು, ಅಧ್ಯಕ್ಷರು ರೋಟರಿ ಸಂಸ್ಥೆ ತರೀಕೆರೆ ಸೇರಿದಂತೆ ವಿವಿಧ ಇಲಾಖೆ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

17ಕೆಟಿಆರ್.ಕೆ.8ಃ

ತರೀಕೆರೆಯಲ್ಲಿ ತಹಸೀಲ್ದಾರ್ ವಿನಾಯಕ್ ಸಾಗರ್ ಅವರ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಪಲ್ಸ್ ಪೋಲಿಯೋ ಚಾಲನ ಸಮಿತಿ ಸಭೆಯನ್ನು ಏರ್ಪಡಿಸಲಾಗಿತ್ತು. ತಾಲೂಕು ಆರೋಗ್ಯಾಧಿಕಾರಿ ಡಾ.ಚಂದ್ರಶೇಖರ್ ಬಿ.ಜಿ.ಮತ್ತಿತರರು ಇದ್ದಾರೆ.