ಸಾರಾಂಶ
ಪುನರೂರು ಪ್ರತಿಷ್ಠಾನದ ಆಶ್ರಯದಲ್ಲಿ ಜನವಿಕಾಸ ಸಮಿತಿ ಮೂಲ್ಕಿಯ ಸಹಕಾರದಲ್ಲಿ ಮೂಲ್ಕಿ ಸಮೀಪದ ಕವತ್ತಾರು ಗ್ರಾಮದ ದೇಂದಡ್ಕ - ಪುತ್ತೂರಿನ ಪಿ.ಜಿ.ಎಂ. ಹೌಸ್ ನಲ್ಲಿ ವಿಶ್ವ ಆಹಾರ ದಿನಾಚರಣೆಯ ಪ್ರಯುಕ್ತ ಜರಗಿದ ಆಹಾರ ಜಾಗೃತಿ-2025 ಕಾರ್ಯಕ್ರಮದಲ್ಲಿ ಕೃಷಿಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಮೂಲ್ಕಿ
ಮಳೆಯ ಕಷ್ಟ, ಬೇಸಿಗೆಯ ಬೆವರು, ಮಣ್ಣಿನ ಒಡನಾಟ ಸೇರಿದಂತೆ ಎಲ್ಲವನ್ನೂ ಅಪ್ಪಿಕೊಂಡು, ಕೃಷಿ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತು ಮೂಡಿಸಿದ ಕೃಷಿಕರು ಸಮಾಜದ ಅನ್ನಭದ್ರತೆ ಬಲಪಡಿಸಿದ್ದಾರೆ. ಮಣ್ಣಿನ ಸುಗಂಧ ಹೊತ್ತು ತರುವ ಕೃಷಿಕರನ್ನು ಗುರುತಿಸಿ ಗೌರವಿಸುವುದು ಶ್ಲಾಘನೀಯ ಎಂದು ದೇಂದಡ್ಕ- ಪುತ್ತೂರಿನ ಗೆಳೆಯರ ಮತ್ತು ಗೆಳತಿಯರ ಬಳಗದ ಅಧ್ಯಕ್ಷ ಗುರುರಾಜ್ ಭಟ್ ದೇಂದಡ್ಕ ಹೇಳಿದ್ದಾರೆ.ಪುನರೂರು ಪ್ರತಿಷ್ಠಾನದ ಆಶ್ರಯದಲ್ಲಿ ಜನವಿಕಾಸ ಸಮಿತಿ ಮೂಲ್ಕಿಯ ಸಹಕಾರದಲ್ಲಿ ಮೂಲ್ಕಿ ಸಮೀಪದ ಕವತ್ತಾರು ಗ್ರಾಮದ ದೇಂದಡ್ಕ - ಪುತ್ತೂರಿನ ಪಿ.ಜಿ.ಎಂ. ಹೌಸ್ ನಲ್ಲಿ ವಿಶ್ವ ಆಹಾರ ದಿನಾಚರಣೆಯ ಪ್ರಯುಕ್ತ ಜರಗಿದ ಆಹಾರ ಜಾಗೃತಿ-2025 ಕಾರ್ಯಕ್ರಮದಲ್ಲಿ ಕೃಷಿಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.ಸುಮಾರು 60 ವರ್ಷಗಳಿಂದ ಕೃಷಿ ಕ್ಷೇತ್ರದಲ್ಲಿ ಅಪಾರ ಸಾಧನೆಗೈದ ಕವತ್ತಾರು ಗ್ರಾಮದ ದೇಂದಡ್ಕ - ಪುತ್ತೂರಿನ ಯಮುನಾ ಗುಡ್ಡ ದೇವಾಡಿಗರಿಗೆ ‘ಕೃಷಿ ರತ್ನ – 2025’ ಪ್ರಶಸ್ತಿ ನೀಡಿ ಸನ್ಮಾನಿಸಿ ಮಾತನಾಡಿದರು.ಪುನರೂರು ಪ್ರತಿಷ್ಠಾನದ ಗೌರವ ಅಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಪ್ರಭಾಕರ ಶೆಟ್ಟಿ ಸಾಗುಮನೆ, ಪಿ.ಸುಬ್ರಹ್ಮಣ್ಯ ಭಟ್ ದೇಂದಡ್ಕ, ಜನವಿಕಾಸ ಸಮಿತಿ ಮೂಲ್ಕಿಯ ಅಧ್ಯಕ್ಷೆ ಅಕ್ಷತಾ ಶೆಟ್ಟಿ ಪದಾಧಿಕಾರಿಗಳಾದ ದಾಮೋದರ ಶೆಟ್ಟಿ ಕೊಡೆತ್ತೂರು, ಶೋಭಾ ರಾವ್ ಮತ್ತಿತರರು ಉಪಸ್ಥಿತರಿದ್ದರು.
ಪುನರೂರು ಪ್ರತಿಷ್ಠಾನದ ಅಧ್ಯಕ್ಷರಾದ ದೇವಪ್ರಸಾದ್ ಪುನರೂರು ಸ್ವಾಗತಿಸಿದರು, ಜನವಿಕಾಸ ಸಮಿತಿ ಮೂಲ್ಕಿಯ ಪ್ರಧಾನ ಕಾರ್ಯದರ್ಶಿ ಪ್ರಾಣೇಶ್ ಭಟ್ ದೇಂದಡ್ಕ ವಂದಿಸಿದರು. ಶಿಮಂತೂರಿನ ಶ್ರೀ ಶಾರದಾ ಸೆಂಟ್ರಲ್ ಸ್ಕೂಲ್ ನ ಪ್ರಾಂಶುಪಾಲ ಜಿತೇಂದ್ರ ವಿ.ರಾವ್ ಹೆಜಮಾಡಿ ನಿರೂಪಿಸಿದರು.;Resize=(128,128))
;Resize=(128,128))
;Resize=(128,128))