ಪುನರೂರು ಮುಗೇರ ಕ್ರೀಡಾ ಕೂಟ ವಾರ್ಷಿಕೋತ್ಸವ

| Published : May 20 2024, 01:35 AM IST

ಪುನರೂರು ಮುಗೇರ ಕ್ರೀಡಾ ಕೂಟ ವಾರ್ಷಿಕೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಕ್ರೀಡಾಕೂಟದ ಅಂಗವಾಗಿ ವಾಲಿಬಾಲ್ , ತ್ರೋಬಾಲ್ , ಪುರುಷರ, ಮಹಿಳೆಯರ ಹಗ್ಗ ಜಗ್ಗಾಟ , ಮಕ್ಕಳಗೆ ವಿವಿಧ ಸ್ಪರ್ಧೆ ನಡೆಯಿತು.

ಕನ್ನಡಪ್ರಭವಾರ್ತೆ ಮೂಲ್ಕಿ

ಗ್ರಾಮೀಣ ಮಟ್ಟದಲ್ಲಿ ಕ್ರೀಡೆಯ ಮೂಲಕವಾಗಿ ಜನರನ್ನು ಒಗ್ಗೂಡಿಸಿ ಸಂಘಟನೆಯನ್ನು ಬಲಪಡಿಸಲು ಸಾಧ್ಯವಿದೆ ಎಂದು ಕಿನ್ನಿಗೋಳಿಯ ಯುಗಪುರುಷದ ಸಂಪಾದಕ ಕೆ. ಭುವನಾಭಿರಾಮ ಉಡುಪ ಹೇಳಿದರು. ಪುನರೂರು ಭಾರತ ಮಾತಾ ಶಾಲೆಯ ಕ್ರೀಡಾಂಗಣದಲ್ಲಿ ಪುನರೂರು ಗುರು ಬ್ರಹ್ಮ ಫ್ರೆಂಡ್ಸ್, ನಾಗಶ್ರೀ ಮಹಿಳಾ ಸಮಿತಿ ಜಂಟಿ ಆಶ್ರಯದಲ್ಲಿ ಫ್ರೆಂಡ್ಸ್ ಪುನರೂರು ಸಹಯೋಗದಲ್ಲಿ ಜರುಗಿದ ( ಮುಗೇರ, ಮೇರ, ಗೊಡ್ಡ ಮುಗೇರ, ಮುಗೇರ ಜಾತಿಗೆ ಸೇರಿದ ಹಸ್ಲರ್ ಜಾತಿ ಬಾಂದವರ ) 15ನೇ ವರ್ಷದ ವಾರ್ಷಿಕೋತ್ಸವ ಹಾಗೂ ದ್ವಿತೀಯ ವರ್ಷದ ಕ್ರೀಡಾ ಕೂಟ- 2024 ಉದ್ಘಾಟಿಸಿ ಮಾತನಾಡಿದರು.

ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ ಪುನರೂರು ಮಾತನಾಡಿ, ಸದ್ದಿಲ್ಲದೆ ಸಂಘಟನೆಯನ್ನು ಬಲಪಡಿಸಿ ಪ್ರಚಾರ ವಿಲ್ಲದ ಉತ್ತಮ ಕೆಲಸ ಮಾಡುತ್ತಿರುವ ಗುರುಬ್ರಹ್ಮ ಪ್ರೆಂಡ್ಸ್ ಇತರ ಸಂಘ ಸಂಸ್ಥೆಗಳಿಗೆ ಪ್ರೇರಣೆ ಎಂದು ಹೇಳಿದರು.

ಪಠೇಲ ವಿಶ್ವನಾಥ ರಾವ್ , ಶಾಲಾ ಮುಖ್ಯ ಶಿಕ್ಷಕ ರಾಘವೇಂದ್ರ ರಾವ್, ರವಿ ಶೆಟ್ಟಿ ಪುನರೂರು ಗುತ್ತು, ಪುನರೂರು ಬ್ರಹ್ಮ ಮುಗೇರ ದೈವಸ್ಥಾನದ ಮುತ್ತಪ್ಪ ಗುರಿಕಾರ, ಶ್ರೀ ಬ್ರಹ್ಮ ಮುಗೇರ ದೈವಸ್ಥಾನ ಟ್ರಸ್ಟ್ ರಘುರಾಮ ಮುಕ್ಕಾಲ್ದಿ, ಎನ್ಐಟಿಕೆಯ ಉಮೇಶ ಪಿ, ಉದ್ಯಮಿ ಅನಂತಕೃಷ್ಣ ಶೆಟ್ಟಿಗಾರ್, ಉದ್ಯಮಿ ರಾಜೇಂದ್ರ ಸಾಲ್ಯಾನ್, ಹೇಮಾನಂದ ಶೆಟ್ಟಿಗಾರ್, ಶ್ರಿಶೋಲ್ ಪುನರೂರು, ರಾಕೇಶ್ ಸಾಲ್ಯಾನ್ ಪುನರೂರು , ಕೊಡುಗು ಎಸ್ ಸಿ ಮೋರ್ಚಾದ ರವಿ ಎಮ್‌ ಡಿ, ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಸಂತೋಷ್ ಪುನರೂರು, ನಾಗಶ್ರೀ ಮಹಿಳಾ ಸಮಿತಿ ಅಧ್ಯಕ್ಷೆ ಕೃಷ್ಣಮ್ಮ ಪುನರೂರು ಉಪಸ್ಥಿತರಿದ್ದರು.

ಸಂಘಟಕ ಗೋಪಾಲಕೃಷ್ಣ ಪುನರೂರು ಸ್ವಾಗತಿಸಿದರು. ಶ್ರೀಶ ಸರಾಪ್ ಐಕಳ ಕಾರ್ಯಕ್ರಮ ನಿರೂಪಿಸಿದರು. ರಾಕೇಶ್ ವಂದಿಸಿದರು. ವಾಲಿಬಾಲ್ , ತ್ರೋಬಾಲ್ , ಪುರುಷರ, ಮಹಿಳೆಯರ ಹಗ್ಗ ಜಗ್ಗಾಟ , ಮಕ್ಕಳಗೆ ವಿವಿಧ ಸ್ಪರ್ಧೆ ನಡೆಯಿತು.