ಯುಪಿಎಸ್‌ಸಿ ಸಿದ್ಧತೆ ವೇಳೆ ಸಮಯ ಪಾಲನೆ ಅಗತ್ಯ: ಕುಶ್ ಮೋಟ್ವಾನಿ

| Published : May 05 2024, 02:09 AM IST

ಯುಪಿಎಸ್‌ಸಿ ಸಿದ್ಧತೆ ವೇಳೆ ಸಮಯ ಪಾಲನೆ ಅಗತ್ಯ: ಕುಶ್ ಮೋಟ್ವಾನಿ
Share this Article
  • FB
  • TW
  • Linkdin
  • Email

ಸಾರಾಂಶ

ಅಧ್ಯಯನ ಯೋಜನೆಗಳನ್ನು ಹಾಕಿಕೊಳ್ಳಬೇಕು ಎಂದು ನಾಗರಿಕ ಸೇವಾ ಪರೀಕ್ಷೆಯಲ್ಲಿ 11ನೇ ರ್‍ಯಾಂಕ್ ಗಳಿಸಿರುವ ಕುಶ್ ಮೋಟ್ವಾನಿ ಆಕಾಂಕ್ಷಿಗಳಿಗೆ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಉನ್ನತ ನಾಗರಿಕ ಸೇವೆ ನೇಮಕಾತಿ ಪರೀಕ್ಷೆ ಬರೆಯುವವರು ವೇಳೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಬೇಕು. ಅಧ್ಯಯನ ಯೋಜನೆಗಳನ್ನು ಹಾಕಿಕೊಳ್ಳಬೇಕು ಎಂದು ನಾಗರಿಕ ಸೇವಾ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 11ನೇ ರ್‍ಯಾಂಕ್ ಗಳಿಸಿರುವ ಕುಶ್ ಮೋಟ್ವಾನಿ ಹೇಳಿದರು.

ವಿಜಯನಗರದ ‘ವಿಷನ್ ಐಎಎಸ್’ ಆಯೋಜಿಸಿದ್ದ ಸೆಮಿನಾರ್‌ನಲ್ಲಿ ಯುಪಿಎಸ್‌ಸಿ ಆಕಾಂಕ್ಷಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ತಮ್ಮ ಸ್ಫೂರ್ತಿದಾಯಕ ಕತೆ ಮೂಲಕ ಪ್ರೇರಣೆ ನೀಡಿದರು.

ಗಣಿತವನ್ನು ಐಚ್ಛಿಕ ವಿಷಯವನ್ನಾಗಿ ಆರಿಸಿಕೊಂಡು ಕುಶ್ ಅಪಾರವಾದ ಶ್ರದ್ಧೆ ಮತ್ತು ಛಲದಿಂದ ಯಶಸ್ಸು ಸಾಧಿಸಿದ ಅವರು, ಸಮಯ ಪರಿಪಾಲನೆ, ಅಧ್ಯಯನ ಯೋಜನೆಗಳನ್ನು ಹಾಕಿಕೊಳ್ಳುವುದು, ಪೂರ್ವಸಿದ್ಧತೆಯ ಉದ್ದಕ್ಕೂ ಸ್ಫೂರ್ತಿ ಕಾಪಾಡಿಕೊಳ್ಳುವ ಕುರಿತು ಅವರು ಮಾರ್ಗದರ್ಶನ ನೀಡಿದರು.

ನೆರುಲ್‌ನ ಡೆಲ್ಲಿ ಪಬ್ಲಿಕ್ ಸ್ಕೂಲ್‌ನಲ್ಲಿ ತನ್ನ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್ ಮತ್ತು ಬಾಂಬೆಯ ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕಮ್ಯುನಿಕೇಷನ್ ಆಂಡ್ ಸಿಗ್ನಲ್ ಪ್ರೊಸೆಸಿಂಗ್‌ನಲ್ಲಿ ಎಂ.ಟೆಕ್ ಪೂರ್ಣಗೊಳಿಸಿದ್ದರು. ಸಂಶೋಧನಾ ಎಂಜಿನಿಯರ್‌ನಿಂದ ಹಿಡಿದು ಭಾರತೀಯ ಕಾರ್ಪೊರೇಟ್ ಕಾನೂನು ಸೇವೆ ಮತ್ತು ನಂತರ ಡೇಟಾ ವಿಜ್ಞಾನಿಯಾಗುವವರೆಗಿನ ಕುಶ್ ಅವರ ವೃತ್ತಿ ಪ್ರಯಾಣವು ವಿಶಿಷ್ಟವಾಗಿದೆ ಮತ್ತು ಅವರ ಬಹುಮುಖ ಆಸಕ್ತಿ, ಸಾಮರ್ಥ್ಯಕ್ಕೆ ಪುರಾವೆಯಾಗಿದೆ ಎಂದು ವಿಷನ್‌ ಐಎಎಸ್‌ ತಿಳಿಸಿದೆ.