ವೈದ್ಯರಿಗೆ ಸಮಯಪಾಲನೆ ಅವಶ್ಯ:ಹಿರೇಗೌಡರ

| Published : Jan 03 2025, 12:30 AM IST

ಸಾರಾಂಶ

ರೋಗಿಗಳ ರೋಗ ನಿಧಾನಗೊಳಿಸುವ ಕಾಯಕದಲ್ಲಿ ಹಲವು ಒತ್ತಡ, ಸವಾಲುಗಳೊಂದಿಗೆ ತಮ್ಮನ್ನು ಸಮರ್ಪಿಸಿಕೊಂಡಿರುವ ವೈದ್ಯರು ಕುಟುಂಬ ಮತ್ತು ಆರೋಗ್ಯದ ನಡುವೆ ಸಮತೋಲನ ಕಾಯ್ದುಕೊಳ್ಳುವದು ಸಹ ಅಷ್ಟೇ ಮುಖ್ಯವಾಗಿದೆ

ಗದಗ: ಜನತೆಯ ಆರೋಗ್ಯ ಸುಧಾರಿಸುವ ಕಾರ್ಯದಲ್ಲಿ ತೊಡಗಿರುವ ವೈದ್ಯ ಮಿತ್ರರು ತಮ್ಮ ವೃತ್ತಿಯಲ್ಲಿ ಶಿಸ್ತು ಮತ್ತು ಸಮಯಪಾಲನೆ ಕಾಪಾಡುವದು ಅವಶ್ಯವಿದೆ ಎಂದು ಹಿರಿಯ ವೈದ್ಯ ಡಾ. ಸಿ.ಬಿ.ಹಿರೇಗೌಡರ ಹೇಳಿದರು.

ನಗರದ ಆಶ್ರಯ ಆಸ್ಪತ್ರೆಯಲ್ಲಿ ನೂತನ ವರ್ಷ 2025ರ ದಿನದರ್ಶಿಕೆ ಹಾಗೂ ಡೈರಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ರೋಗಿಗಳ ರೋಗ ನಿಧಾನಗೊಳಿಸುವ ಕಾಯಕದಲ್ಲಿ ಹಲವು ಒತ್ತಡ, ಸವಾಲುಗಳೊಂದಿಗೆ ತಮ್ಮನ್ನು ಸಮರ್ಪಿಸಿಕೊಂಡಿರುವ ವೈದ್ಯರು ಕುಟುಂಬ ಮತ್ತು ಆರೋಗ್ಯದ ನಡುವೆ ಸಮತೋಲನ ಕಾಯ್ದುಕೊಳ್ಳುವದು ಸಹ ಅಷ್ಟೇ ಮುಖ್ಯವಾಗಿದೆ ಎಂದರು.

ಈ ವೇಳೆ ಡಾ. ಸಿ.ಬಿ. ಹಿರೇಗೌಡರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಡಾ. ಜಯರಾಜ್ ಪಾಟೀಲ್, ಡಾ. ಮಧುಸೂಧನ್ ಚಿಂತಾಮಣಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಡಾ.ಸಹನಾ ಪಾಟೀಲ, ಮಂಜುನಾಥ ಆರಟ್ಟಿ, ಎಲ್.ಬಿ. ಪಾಟೀಲ, ಸಿ.ವಿ. ಹಿರೇಮಠ ಹಾಗೂ ಆಶ್ರಯ ಆಸ್ಪತ್ರೆಯ ಸಿಬ್ಬಂದಿ ಇದ್ದರು. ಡಾ. ಶ್ರೀಧರ ಕುರಡಗಿ ಸ್ವಾಗತಿಸಿ ನಿರೂಪಿಸಿದರು. ಡಾ. ಸುನೀತಾ ಕುರಡಗಿ ವಂದಿಸಿದರು.