ಯಲಿಯೂರು ಗ್ರಾಪಂ ಅಧ್ಯಕ್ಷರಾಗಿ ಪುನೀತ್ ಕುಮಾರ್

| Published : May 10 2025, 01:09 AM IST

ಸಾರಾಂಶ

ಯಲಿಯೂರು ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಎಮ್ಮೆರಹಳ್ಳಿ ಗೊಲ್ಲರಹಟ್ಟಿಯ ಪುನೀತ್ ಕುಮಾರ್.

ಕನ್ನಡಪ್ರಭ ವಾರ್ತೆ ಶಿರಾ ಗ್ರಾಮೀಣ ಪ್ರದೇಶದ ಮೂಲಭೂತ ಸೌಲಭ್ಯ ಸೇರಿದಂತೆ ಕುಡಿಯವ ನೀರು, ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಿ ಜನ ಮೆಚ್ಚುವಂತಹ ಕೆಲಸ ಮಾಡುವ ಮೂಲಕ ಅಧ್ಯಕ್ಷ ಸ್ಥಾನಕ್ಕೆ ಗೌರವ ತರುತ್ತೇನೆ. ಎಲ್ಲರೂ ಒಗ್ಗೂಡಿ ಕೆಲಸ ಮಾಡಿದಾಗ ಮಹಾತ್ಮ ಗಾಂಧಿ ಕಂಡಂತಹ ಗ್ರಾಮ ಸ್ವರಾಜ್ ಪರಿಕಲ್ಪನೆ ಸಕಾರ ಗೊಳ್ಳಲಿದೆ. ಎಲ್ಲಾ ಸದಸ್ಯರನ್ನು ಒಟ್ಟುಗೂಡಿಸಿ, ಸಲಹೆ ಹಾಗೂ ಸೂಚನೆಗಳನ್ನು ಸ್ವೀಕರಿಸಿ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸುವುದಾಗಿ ಯಲಿಯೂರು ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಎಮ್ಮೆರಹಳ್ಳಿ ಗೊಲ್ಲರಹಟ್ಟಿಯ ಪುನೀತ್ ಕುಮಾರ್.ಟಿ. ಹೇಳಿದರು.ಅವರು ಶಿರಾ ತಾಲೂಕಿನ ಯಲಿಯೂರು ಗ್ರಾಮ ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿ ಅಭಿಮಾನಿಗಳಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಗ್ರಾಮ ಪಂಚಾಯಿತಿಗೆ ಬರುವಂತಹ ಸಾರ್ವಜನಿಕರಿಗೆ ಪ್ರೀತಿ -ವಿಶ್ವಾಸದಿಂದ ಮಾತನಾಡಿ ಅವರ ಸಮಸ್ಯೆಯನ್ನು ಬಗೆಹರಿಸಬೇಕು. ಪರಸ್ಪರ ಸ್ನೇಹ -ಸಂಬಂಧ ಜನಸ್ನೇಹಿ ಆಡಳಿತಕ್ಕೆ ಮುನ್ನಡೆ ಬರೆಯಲಿದೆ. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯತಿ ಸಿಬ್ಬಂದಿ ಹೆಚ್ಚು ಕ್ರಿಯಾಶೀಲರಾಗಿ ಕೆಲಸ ಮಾಡಬೇಕು ಎಂದರು.ಯಲಿಯೂರು ಗ್ರಾಪಂ ಉಪಾಧ್ಯಕ್ಷ ರಾಮಚಂದ್ರಣ್ಣ, ಮಾಜಿ ಅಧ್ಯಕ್ಷೆ, ಹಾಲಿ ಸದಸ್ಯರಾದ ಸುಷ್ಮಾ ಮೋಹನ್, ಆಶಾ ಲೋಹಿತ್, ನಾಗವೇಣಿ ವೆಂಕಟರಾಮು, ಸಿದ್ದಗಂಗಮ್ಮ ಶ್ರೀನಿವಾಸ, ಮಾಜಿ ಉಪಾಧ್ಯಕ್ಷೆ ಲಕ್ಕಮ್ಮ ಗಂಗಣ್ಣ, ಗಂಗಮ್ಮ ಹನುಮಂತರಾಜು, ಶಿವಮ್ಮ ರಾಜಣ್ಣ ಸದಸ್ಯರಾದ ನವೀನ್, ಸತೀಶ್ ಕುಮಾರ್, ಭಾಗ್ಯಮ್ಮ ರಂಗನಾಥ, ಪಿಡಿಒ ತುಳಸಿರಾಮು, ಎಸ್ ಡಿ ಎ ವೆಂಕಟರಾಮು, ಸುನಂದಮ್ಮ ಸಿದ್ದಣ್ಣ, ಚಂದ್ರಣ್ಣ, ಈರಗ್ಯಾತಪ್ಪ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಈರಣ್ಣ, ರಾಮಣ್ಣ , ಮುಖಂಡರಾದ ತಿಮ್ಮಯ್ಯ, ಓಬಳೇಶ್, ಮಂಜು, ನವೀನ್ , ರಂಗನಾಥ, ಕಾಂತರಾಜ್, ಗೌಡಪ್ಪ, ರಾಜಣ್ಣ, ಸೇರಿದಂತೆ ಹಲವರು ಹಾಜರಿದ್ದರು. ಚುನಾವಣಾಧಿಕಾರಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ, ತಾಲ್ಲೂಕು ಚುನಾವಣಾ ಆಯೋಗದಿಂದ ಬಶೀರ್, ಗ್ರಾಮ ಲೆಕ್ಕಾಧಿಕಾರಿ ಶಿವಕುಮಾರ್, ಕಾರ್ಯನಿರ್ವಹಿಸಿದರು.