ಪುನೀತ್ ರಾಜಕುಮಾರ್ ಪುತ್ಥಳಿ ಬಳಿ ಅನ್ನಸಂತರ್ಪಣೆ

| Published : Oct 29 2024, 12:54 AM IST

ಸಾರಾಂಶ

ಅಖಿಲ ಕರ್ನಾಟಕ ಡಾ. ರಾಜಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟ, ಡಾ. ಶಿವರಾಜಕುಮಾರ್‌ ಅಭಿಮಾನಿ ಸಂಘ, ರಾಜರತ್ನ ರಾಜಕುಮಾರ್‌ ಅಭಿಮಾನಿಗಳ ಸಂಘ ಹಾಗೂ ಮಹಿಳಾ ಘಟಕ ಇವರ ಸಂಯುಕ್ತಾಶ್ರಯದಲ್ಲಿ ಸಂಘಟನೆಯಿಂದ ೨ನೇ ವರ್ಷದ ಶ್ರೀ ಹಾಸನಾಂಭ ಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ನಗರದ ಎನ್.ಆರ್‌. ವೃತ್ತದಲ್ಲಿ ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್‌ರವರ ಪ್ರತಿಮೆ ಬಳಿ ಶ್ರೀ ಹಾಸನಾಂಬೆ ಮತ್ತು ಶ್ರೀಸಿದ್ದೇಶ್ವರರವರ ಆರ್ಶಿವಾದದಲ್ಲಿ ಅಮ್ಮನವರಿಗೆ ನೈವೇದ್ಯವನ್ನು ಸೋಮವಾರ ಮಧ್ಯಾಹ್ನ ನೆರವೇರಿಸಲಾಯಿತು.

ಕನ್ನಡಪ್ರಭ ವಾರ್ತೆ ಹಾಸನ

ನಗರದ ಎನ್.ಆರ್‌ ವೃತ್ತದ ಬಳಿ ಇರುವ ಪುನೀತ್ ರಾಜಕುಮಾರ್ ಪ್ರತಿಮ ಆವರಣದಲ್ಲಿ ಶ್ರೀ ಹಾಸನಾಂಬ ಮತ್ತು ಶ್ರೀ ಸಿದ್ದೇಶ್ವರರವರ ಜಾತ್ರಾ ಮಹೋತ್ಸವದ ಅಂಗವಾಗಿ ೨ನೇ ವರ್ಷದ ಅನ್ನದಾನವನ್ನು ನೆರವೇರಿಸಲಾಯಿತು. ಇದೇ ವೇಳೆ ಚಲನಚಿತ್ರ ನಾಯಕ ನಟ ಮತ್ತು ಮೂಳೆ ತಜ್ಞರಾದ ವಸಂತ ಮಾದವ್, ಪುನೀತ್‌ ಅಭಿಮಾನಿ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಎಚ್.ಎಸ್. ರತೀಶ್ ರಾಜ್, ಹಾಸನ ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಕುಮಾರ್, ಮಹಿಳಾ ಘಟಕದ ಪ್ರತಿಮಾ ಮಾಧ್ಯಮದೊಂದಿಗೆ ಮಾತನಾಡಿ, ಪುನೀತ್ ರಾಜಕುಮಾರ್‌ ಅವರನ್ನು ತುಂಬ ಹತ್ತಿರದಿಂದ ನೋಡಿದ್ದೇನೆ. ಅವರು ಇಲ್ಲ ಅಂದರೆ ನಂಬುವುದಕ್ಕೆ ಆಗುತ್ತಿಲ್ಲ. ಅವರ ಒಳ್ಳೆ ಗುಣಗಳನ್ನು ನಾವುಗಳು ಅಳವಡಿಸಿಕೊಳ್ಳಬೇಕು ಎಂದರು. ಅಖಿಲ ಕರ್ನಾಟಕ ಡಾ. ರಾಜಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟ, ಡಾ. ಶಿವರಾಜಕುಮಾರ್‌ ಅಭಿಮಾನಿ ಸಂಘ, ರಾಜರತ್ನ ರಾಜಕುಮಾರ್‌ ಅಭಿಮಾನಿಗಳ ಸಂಘ ಹಾಗೂ ಮಹಿಳಾ ಘಟಕ ಇವರ ಸಂಯುಕ್ತಾಶ್ರಯದಲ್ಲಿ ನಮ್ಮ ಸಂಘಟನೆಯಿಂದ ೨ನೇ ವರ್ಷದ ಶ್ರೀ ಹಾಸನಾಂಭ ಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ನಗರದ ಎನ್.ಆರ್‌. ವೃತ್ತದಲ್ಲಿ ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್‌ರವರ ಪ್ರತಿಮೆ ಬಳಿ ಶ್ರೀ ಹಾಸನಾಂಬೆ ಮತ್ತು ಶ್ರೀಸಿದ್ದೇಶ್ವರರವರ ಆರ್ಶಿವಾದದಲ್ಲಿ ಅಮ್ಮನವರಿಗೆ ನೈವೇದ್ಯವನ್ನು ಸೋಮವಾರ ಮಧ್ಯಾಹ್ನ ನೆರವೇರಿಸಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪುನೀತ್ ರಾಜಕುಮಾರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಅನ್ನಸಂತರ್ಪಣೆಯನ್ನು ನೆರವೇರಿಸಿದರು. ಇದೇ ವೇಳೆ ಪಳನಿ, ಎನ್. ಉಮೇಶ್, ಸುಬ್ರಮಣ್ಯ, ವಾಚು ರಾಜು, ಅಂಬಿಕಾ, ಅನಿತಾ ರಂಗಸ್ವಾಮಿ, ಮಮತಾ, ಮಂಜುಳ, ಸಾವಿತ್ರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.