ಪುನೀತ್ ರಾಜಕುಮಾರ್‌ ಜನ್ಮದಿನವನ್ನು ಸ್ಫೂರ್ತಿದಿನ ಎಂದು ಆಚರಣೆ: ಶಾಸಕ ಕೆ.ಹರೀಶ್ ಗೌಡ

| Published : Mar 18 2025, 12:30 AM IST

ಸಾರಾಂಶ

ಪುನೀತ್ ಸಾವಿಗೂ ಮೊದಲು ರಾಜ್ಯದ ಬಹಳಷ್ಟು ಜನತೆಗೆ ಅವರು ಮಾಡಿದ್ದ ಸಾಮಾಜಿಕ ಸೇವೆ ಗೊತ್ತಿರಲಿಲ್ಲ. ಬಲಗೈಯಲ್ಲಿ ಮಾಡಿದ ದಾನ ಎಡಗೈಗೆ ತಿಳಿಯಬಾರದು ಎಂಬ ರೀತಿಯಲ್ಲಿ ಅಸಹಾಯಕರ ನೆರವಿಗೆ ನಿಂತಿದ್ದರು. ಚಿತ್ರಗಳು ಹಾಗೂ ಸಾಮಾಜಿಕ ಸೇವೆ ಮೂಲಕ ಮುಗಿಲೆತ್ತ ರಕ್ಕೆ ಬೆಳೆದು ನಿಂತಿದ್ದರು. ಪುನೀತ್ ಜನ್ಮದಿನವನ್ನು ಸ್ಫೂರ್ತಿದಿನ ಎಂದು ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಪವರ್‌ ಸ್ಟಾರ್‌ ಪುನೀತ್ ರಾಜಕುಮಾರ್‌ ಅವರ ಜನ್ಮದಿನವನ್ನು ಸ್ಫೂರ್ತಿದಿನ ಎಂದು ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದು ಶಾಸಕ ಕೆ. ಹರೀಶ್ ಗೌಡ ಹೇಳಿದರು.

ನಗರದ ದೇವರಾಜ ಅರಸು ರಸ್ತೆಯಲ್ಲಿ ಪುನೀತ್ ರಾಜಕುಮಾರ್ 50ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಪುನೀತ್‌ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

ಪುನೀತ್ ಸಾವಿಗೂ ಮೊದಲು ರಾಜ್ಯದ ಬಹಳಷ್ಟು ಜನತೆಗೆ ಅವರು ಮಾಡಿದ್ದ ಸಾಮಾಜಿಕ ಸೇವೆ ಗೊತ್ತಿರಲಿಲ್ಲ. ಬಲಗೈಯಲ್ಲಿ ಮಾಡಿದ ದಾನ ಎಡಗೈಗೆ ತಿಳಿಯಬಾರದು ಎಂಬ ರೀತಿಯಲ್ಲಿ ಅಸಹಾಯಕರ ನೆರವಿಗೆ ನಿಂತಿದ್ದರು. ಚಿತ್ರಗಳು ಹಾಗೂ ಸಾಮಾಜಿಕ ಸೇವೆ ಮೂಲಕ ಮುಗಿಲೆತ್ತ ರಕ್ಕೆ ಬೆಳೆದು ನಿಂತಿದ್ದರು. ಪುನೀತ್ ಜನ್ಮದಿನವನ್ನು ಸ್ಫೂರ್ತಿದಿನ ಎಂದು ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದರು.

ದೇವರಾಜ ಮೊಹಲ್ಲಾ ಯುವಕರ ಬಳಗದ ವತಿಯಿಂದ ಸಾರ್ವಜನಿಕರಿಗೆ ಗೀ ರೈಸ್ ಹಾಗೂ ಚಿಕನ್ ಚಾಪ್ಸ್ ವನ್ನು ಶಾಸಕ ಹರೀಶ್ ಗೌಡ ಸಾರ್ವಜನಿಕರಿಗೆ ವಿತರಿಸಿದರು.

ಡಿವೈಎಸ್ಪಿ ಮಲ್ಲೇಶ್, ಎಂಡಿಎ ಮಾಜಿ ಸದಸ್ಯ ನವೀನ್ ಕುಮಾರ್, ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್, ವೀರಭದ್ರಪ್ಪ, ನಿತಿನ್ ಗುರುರಾಜ್, ಪ್ರಮೋದ ರವಿಚಂದ್ರನ್, ಹರ್ಷ ನವೀನ್ ,ನಂಜುಂಡಿ, ಮಂಜುನಾಥ್, ರಾಜು, ರಾಹುಲ್, ಕುಮಾರ್ ಶ್ರೀನಿವಾಸ್ ಇದ್ದರು.

ಪುನೀತ್ ರಾಜ್‌ಕುಮಾರ್ ಜನ್ಮದಿನೋತ್ಸವ: ಮಜ್ಜಿಗೆ, ಸಿಹಿ ವಿತರಣೆ

ಕನ್ನಡಪ್ರಭ ವಾರ್ತೆ ಮೈಸೂರು

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನೋತ್ಸವದ ನೆನಪಿಗಾಗಿ ಶ್ರೀರಾಮ ಗೆಳಯರ ಬಳಗದ ವತಿಯಿಂದ ಚಾಮುಂಡಿಪುರಂ ವೃತ್ತದಲ್ಲಿ ಸಾರ್ವಜನಿಕರಿಗೆ ಮಜ್ಜಿಗೆ ಮತ್ತು ಸಿಹಿ ಕೊಡುವ ಮುಖಾಂತರ ಅರ್ಥಪೂರ್ಣವಾಗಿ ಆಚರಿಸಿತು.

ಶ್ರೀರಾಮ ಗೆಳೆಯರ ಬಳಗದ ಅಧ್ಯಕ್ಷ ಸಿ. ಸಂದೀಪ್ ಮಾತನಾಡಿ, ಪುನೀತ್ ರಾಜ್‌ಕುಮಾರ್ ಅವರು ಮಾಡಿರುವ ಸೇವಾ ಕಾರ್ಯವು ಪ್ರತಿಯೊಬ್ಬರಿಗೂ ಪ್ರೇರಣೆಯಾಗಿರಲಿ ಎಂದು ಸ್ಪೂರ್ತಿ ದಿನವಾಗಿ ಆಚರಿಸಲಾಗುತ್ತಿದೆ,

ಸೇವಾಮನೋಭಾವದ ದೃಷ್ಟಿಯಲ್ಲಿ ಆರೋಗ್ಯ ಶಿಬಿರ, ರಕ್ತದಾನ, ನೇತ್ರದಾನ, ಸಾಮೂಹಿಕ ವಿವಾಹ ಸೇರಿದಂತೆ ಸಾಂಸ್ಕೃತಿಕ, ಧಾರ್ಮಿಕ, ಕ್ರೀಡೆ, ಅನ್ನ ದಾಸೋಹ ಕಾರ್ಯಕ್ರಮಗಳನ್ನ ಆಯೋಜಿಸುತ್ತಾ ಬಂದಿದ್ದಾರೆ. ಪರಿಸರ ಕಾಳಜಿ ಮತ್ತು ಕನ್ನಡ ಭಾಷೆಗಾಗಿ ಅವರ ಸೇವೆ ಅವಿಸ್ಮರಣೀಯ ಎಂದರು.

ಶಿವಣ್ಣ, ಉಮಾಶಂಕರ್, ಧರ್ಮೇಂದ್ರ, ಬಸವರಾಜು, ಮಹೇಶ್ ಅರಸ್, ಯೋಗೀಶ್, ರಾಕೇಶ್, ಧನುಷ್, ಕಿರಣ್, ರಾಮು, ಸಿದ್ದಣ್ಣ, ವೆಂಕಟೇಶ್, ರಾಜೇಂದ್ರ, ಪುರುಷೋತ್ತಮ್, ಮಧುಸೂಧನ್, ದೀಪಕ್, ಭಾನುಪ್ರಕಾಶ್, ವಿನಯ್ ಇದ್ದರು.