ಅಪ್ರಾಪ್ತೆ ಅತ್ಯಾಚಾರಿಗೆ ಶಿಕ್ಷೆ: ತೀರ್ಪು

| Published : Dec 17 2024, 12:45 AM IST

ಸಾರಾಂಶ

ಅಪ್ರಾಪ್ತೆಯನ್ನು ಅಪಹರಿಸಿ, ಅತ್ಯಾಚಾರ ಎಸಗಿದ್ದ ಕೊಂಡ್ಲಹಳ್ಳಿ ಗ್ರಾಮದ ಬಿ.ಲೋಕೇಶ (33) ಹೆಸರಿನ ಅಪರಾಧಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಎಫ್‌ಟಿಎಸ್‌ಸಿ-1 ನ್ಯಾಯಾಲಯ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹35 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.

ದಾವಣಗೆರೆ: ಅಪ್ರಾಪ್ತೆಯನ್ನು ಅಪಹರಿಸಿ, ಅತ್ಯಾಚಾರ ಎಸಗಿದ್ದ ಕೊಂಡ್ಲಹಳ್ಳಿ ಗ್ರಾಮದ ಬಿ.ಲೋಕೇಶ (33) ಹೆಸರಿನ ಅಪರಾಧಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಎಫ್‌ಟಿಎಸ್‌ಸಿ-1 ನ್ಯಾಯಾಲಯ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹35 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.

ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಠಾಣೆ ವ್ಯಾಪ್ತಿ ಗ್ರಾಮವೊಂದರಲ್ಲಿ ತಾಯಿ ಮನೆಗೆ 2022ರ ಜುಲೈ 22ರ ರಾತ್ರಿ ಮಲಗಲು ಹೋಗಿದ್ದ ಅಪ್ರಾಪ್ತೆಯು ನಾಪತ್ತೆಯಾಗಿದ್ದಳು. ಅದೇ ಗ್ರಾಮದ ಬಿ.ಲೋಕೇಶ ಅವನ ತಾಯಿ ಶಾರದಮ್ಮ, ತಂದೆ ಭೈರಪ್ಪ, ಅಣ್ಣ ದ್ಯಾಮೇಶ ಎಂಬುವರ ಸಹಕಾರದಿಂದ ಅಪ್ರಾಪ್ತ ಸೊಸೆಯನ್ನು ಪುಸಲಾಯಿಸಿ, ಲೈಂಗಿಕ ದೌರ್ಜನ್ಯ ನಡೆಸಿದ್ದನು. ಆತನ ಮಾವ ಸಂತೇಬೆನ್ನೂರು ಠಾಣೆಗೆ ದೂರು ನೀಡಿದ್ದ ಮೇರೆಗೆ ತನಿಖೆ ನಡೆದು, ಹಾಸನ ಜಿಲ್ಲೆ ಅರಸೀಕೆರೆಗೆಯ ತೋಟದ ಮನೆಯೊಂದರಲ್ಲಿ ಲೈಂಗಿಕ ಸಂಪರ್ಕ ನಡೆಸಿದ್ದು ಬಯಲಾಗಿತ್ತು.

ಪೋಕ್ಸೋ ಕಾಯ್ದೆಯಡಿ ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ನ್ಯಾಯಾಧೀಶರಾದ ಶ್ರೀರಾಮ ನಾರಾಯಣ ಹೆಗಡೆ ಅವರು ಅಪರಾಧಿ ಬಿ.ಲೋಕೇಶಗೆ 20 ವರ್ಷ ಕಾರಾಗೃಹ ಶಿಕ್ಷೆ, ₹35 ಸಾವಿರ ದಂಡ ವಿಧಿಸಿ ತೀರ್ಪು ನೀಡಿದರು. ಅಲ್ಲದೆ, ಅಪರಾಧಿಯಿಂದ ವಸೂಲು ಮಾಡಿದ ದಂಡದ ಒಟ್ಟು ಮೊತ್ತ ₹35 ಸಾವಿರವನ್ನು ಸಂತ್ರಸ್ಥೆಗೆ ನೀಡುವಂತೆ ಹಾಗೂ ಸಂತ್ರಸ್ಥೆಗೆ ಸರ್ಕಾರದಿಂದ ₹4 ಲಕ್ಷ ಪರಿಹಾರ ನೀಡುವಂತೆ ತೀರ್ಪು ಪ್ರಕಟಿಸಿದರು. ಸರ್ಕಾರದ ಪರ ಸರ್ಕಾರಿ ವಕೀಲರಾದ ಸುನಂದಾ ಮಡಿವಾಳರ ನ್ಯಾಯ ಮಂಡಿಸಿದ್ದರು.