ಕರ್ನಾಟಕ ಪಬ್ಲಿಕ್ ಸ್ಕೂಲ್, ಪುಂಜಾಲಕಟ್ಟೆ ಪ್ರೌಢಶಾಲೆ 9ನೇ ತರಗತಿ ವಿದ್ಯಾರ್ಥಿ– ವಿದ್ಯಾರ್ಥಿನಿಯರಿಗಾಗಿ ಜ. 27- 28ರಂದು “ಚಿಣ್ಣರ ವನದರ್ಶನ” ಎಂಬ ಶೈಕ್ಷಣಿಕ ಪ್ರವಾಸ ಹಮ್ಮಿಕೊಳ್ಳಲಾಯಿತು.
ಕಾರ್ಕಳ: ಕರ್ನಾಟಕ ಪಬ್ಲಿಕ್ ಸ್ಕೂಲ್, ಪುಂಜಾಲಕಟ್ಟೆ ಪ್ರೌಢಶಾಲೆ 9ನೇ ತರಗತಿ ವಿದ್ಯಾರ್ಥಿ– ವಿದ್ಯಾರ್ಥಿನಿಯರಿಗಾಗಿ ಜ. 27- 28ರಂದು “ಚಿಣ್ಣರ ವನದರ್ಶನ” ಎಂಬ ಶೈಕ್ಷಣಿಕ ಪ್ರವಾಸ ಹಮ್ಮಿಕೊಳ್ಳಲಾಯಿತು.
ಪ್ರವಾಸದ ಅಂಗವಾಗಿ ವಿದ್ಯಾರ್ಥಿಗಳನ್ನು ಮೂಡುಬಿದಿರೆಯ ಕಡಲಕೆರೆ, ಸಾಮಾಜಿಕ ಅರಣ್ಯ ವಿಭಾಗದ ಸಸ್ಯಕ್ಷೇತ್ರ, ಹೆಬ್ರಿ ವಲಯದ ಕೇಂದ್ರ ಮರಮುಟ್ಟು ಸಂಗ್ರಹಾಲಯ, ಸಾಲುಮರದ ತಿಮ್ಮಕ್ಕ ಉದ್ಯಾನವನ (ಹೆಬ್ರಿ) ಹಾಗೂ ಕೂಡ್ಲು ಜಲಪಾತಗಳಿಗೆ ಕರೆದುಕೊಂಡು ಹೋಗಲಾಯಿತು. ಈ ವೇಳೆ ಅರಣ್ಯ ಇಲಾಖೆ ಕಾರ್ಯವಿಧಾನಗಳು, ಅರಣ್ಯ ಸಂರಕ್ಷಣೆ ಹಾಗೂ ನಿಸರ್ಗದ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು.ಪ್ರವಾಸದ ದಿನ ಹೆಬ್ರಿ ಸಮೀಪದ ಸೀತಾನದಿ ನಿಸರ್ಗಧಾಮದಲ್ಲಿ ವಿದ್ಯಾರ್ಥಿಗಳಿಗೆ ವಾಸ್ತವ್ಯ ವ್ಯವಸ್ಥೆ ಮಾಡಲಾಗಿತ್ತು. ಪ್ರವಾಸದಲ್ಲಿ ಶಿಕ್ಷಕರಾದ ಹರಿಪ್ರಸಾದ್, ಸದಾನಂದ ಬಿರಾದಾರ್ ಹಾಗೂ ಶಿಕ್ಷಕಿಯರಾದ ವಿದ್ಯಾ ಹೆಗ್ಡೆ, ಸುಧಾ ಅವರು ವಿದ್ಯಾರ್ಥಿಗಳೊಂದಿಗೆ ಹಾಜರಿದ್ದು ಮಾರ್ಗದರ್ಶನ ಹಾಗೂ ಸಹಕಾರ ನೀಡಿದರು.ಅರಣ್ಯ ಇಲಾಖೆಯ ವತಿಯಿಂದ ಉಪವಲಯ ಅರಣ್ಯಾಧಿಕಾರಿಗಳಾದ ಸಂತೋಷ್, ರಾಘವೇಂದ್ರ ಕೆ., ಗಸ್ತು ಅರಣ್ಯ ಪರಿಪಾಲಕರಾದ ರವಿಕುಮಾರ್ ಹಾಗೂ ಬಸ್ ಚಾಲಕರಾದ ದಯಾನಂದ ಮೂಲ್ಯ ಅವರು ಭಾಗವಹಿಸಿ ಪ್ರವಾಸ ಯಶಸ್ವಿಗೆ ಸಹಕರಿಸಿದರು.ಈ ಶೈಕ್ಷಣಿಕ ಪ್ರವಾಸದಿಂದ ವಿದ್ಯಾರ್ಥಿಗಳಿಗೆ ನಿಸರ್ಗ ಅರಿವು, ಪರಿಸರ ಸಂರಕ್ಷಣೆಯ ಮಹತ್ವ ಹಾಗೂ ಅರಣ್ಯ ಇಲಾಖೆಯ ಕಾರ್ಯವಿಧಾನಗಳ ಬಗ್ಗೆ ಪ್ರಾಯೋಗಿಕ ಜ್ಞಾನ ದೊರೆತಿದೆ ಎಂದು ಶಿಕ್ಷಕರು ಅಭಿಪ್ರಾಯಪಟ್ಟರು.