ಪುಂಜಾಲಕಟ್ಟೆ: ಉಚಿತ ಸಾಮೂಹಿಕ ವಿವಾಹ, ಸ್ವಸ್ತಿ ಸಿರಿ ಪ್ರಶಸ್ತಿ ಪ್ರದಾನ

| Published : Mar 18 2025, 12:30 AM IST

ಸಾರಾಂಶ

ಪುಂಜಾಲಕಟ್ಟೆಯ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‌ನ ೪೧ನೇ ಸಂಭ್ರಮಾಚರಣೆ ಪ್ರಯುಕ್ತ ಪುಂಜಾಲಕಟ್ಟೆ ಬಂಗ್ಲೆ ಮೈದಾನದ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ೧೭ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಎಂಟು ಜೋಡಿ ವಧು-ವರರು ಗ್ರಹಸ್ಥಾಶ್ರಮಕ್ಕೆ ಪದಾರ್ಪಣೆಗೈದರು.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಪುಂಜಾಲಕಟ್ಟೆಯ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‌ನ ೪೧ನೇ ಸಂಭ್ರಮಾಚರಣೆ ಪ್ರಯುಕ್ತ ಪುಂಜಾಲಕಟ್ಟೆ ಬಂಗ್ಲೆ ಮೈದಾನದ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ೧೭ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಎಂಟು ಜೋಡಿ ವಧು-ವರರು ಗ್ರಹಸ್ಥಾಶ್ರಮಕ್ಕೆ ಪದಾರ್ಪಣೆಗೈದರು.

ಅರ್ಚಕ ಕೃಷ್ಣಭಟ್ ಕಾರ್ಕಳ ಮತ್ತವರ ತಂಡದ ಪೌರೋಹಿತ್ಯದಲ್ಲಿ ಮಧ್ಯಾಹ್ನ ೧೨.೦೪ರ ಶುಭ ಮುಹೂರ್ತದಲ್ಲಿ ೭ ಜೋಡಿ ವಧು-ವರರು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಬೆಳಗ್ಗೆ ನಯನಾಡು ಶ್ರೀರಾಮ ಭಜನಾ ಮಂದಿರದಿಂದ ಮದುವೆ ಮಂಟಪದ ವರೆಗೆ ವೈಭವಪೂರ್ಣವಾದ ದಿಬ್ಬಣ ಮೆರವಣಿಗೆ ನಡೆಯಿತು.

ಬಳಿಕ ನಡೆದ ಸಭಾಕಾರ್ಯಕ್ರಮವನ್ನು ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ ಉದ್ಘಾಟಿಸಿ ಮಾತನಾಡಿ, ಅಶಕ್ತರ, ನೊಂದವರ ಬಾಳಿಗೆ ಬೆಳಕಾಗುವುದು ನಿಜವಾದ ಸಮಾಜ ಸೇವೆಯಾಗಿದ್ದು, ತುಂಗಪ್ಪ ಬಂಗೇರ ಮತ್ತವರ ತಂಡದ ಕಾರ್ಯ ಮುಂದಿನ ಪೀಳಿಗೆಗೆ ಪ್ರರೇಣೆ ಮತ್ತು ಇತರರಿಗೆ ಮಾದರಿಯಾಗಿದೆ ಎಂದರು.

ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪಾಡಿಗುತ್ತು ಮಾತನಾಡಿ, ಭವಿಷ್ಯದ ದಿನಗಳಲ್ಲಿಯೂ ಈ ಕಾರ್ಯಕ್ರಮ ನಿರಂತರವಾಗಿ ನಡೆಯಲಿ ಎಂದು ಹಾರೈಸಿದರು.ಬಂಟ್ವಾಳ ತಾಲೂಕು ಸಂಸ್ಕಾರ ಭಾರತಿ ಅಧ್ಯಕ್ಷರು, ಖ್ಯಾತ ಜ್ಯೋತಿಷಿ ಅನಿಲ್ ಪಂಡಿತ್, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಅದಾನಿ ಗ್ರೂಪ್ ಮಂಗಳೂರು ಅಧ್ಯಕ್ಷ ಕಿಶೋರ್ ಆಳ್ವ, ಮಾಜಿ ಮುಖ್ಯಮಂತ್ರಿ ಆಪ್ತಸಹಾಯಕ ಜಗನ್ನಾಥ ಬಂಗೇರ, ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘ ಉಪಾಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಬಂಟ್ವಾಳ ವ್ಯ.ಸೇ.ಸ.ಸಂಘದ ಅಧ್ಯಕ್ಷ ಕರುಣೇಂದ್ರ ಪೂಜಾರಿ, ಪಿಲಾತಬೆಟ್ಟು ಕೃ.ಪ.ಸ.ಸಂಘ ಉಪಾಧ್ಯಕ್ಷ ರವಿಶಂಕರ್ ಹೊಳ್ಳ, ಗುತ್ತಿಗೆದಾರ ಮೋಹನ್ ಶೆಟ್ಟಿ ನರ್ವಲ್ದಡ್ಕ, ವಾಮದಪದವು ಕೃ.ಪ.ಸ.ಸಂಘ ಅಧ್ಯಕ್ಷ ಸಂಜೀವ ಪೂಜಾರಿ ಪಿಲಿಂಗಾಲು, ಶ್ರೀ ಕ್ಷೇ.ಧ.ಗ್ರಾ.ಯೋ.ಯ ತಾಲೂಕು ಯೋಜನಾಕಾರಿ ಜಯಾನಂದ ಪಿ., ಉದ್ಯಮಿಗಳಾದ ಹರೀಂದ್ರ ಪೈ, ಜಯಚಂದ್ರ ಬೊಳ್ಮಾರ್, ಪಿಲಾತಬೆಟ್ಟು ಗ್ರಾ.ಪಂ. ಮಾಜಿ ಅಧ್ಯಕ್ಷೆ ಹರ್ಷಿಣಿ ಪುಪ್ಪಾನಂದ, ಬಡಗಕಜೆಕಾರು ಕೃ.ಪ.ಸ. ಸಂಘ ಅಧ್ಯಕ್ಷ ಸತೀಶ್ ಪೂಜಾರಿ, ಉದ್ಯಮಿ ಕರುಣಾಕರ ಪೂಜಾರಿ ಮಾಳಿಗೆ ಮನೆ, ಬಿಜೆಪಿ ಬೆಳ್ತಂಗಡಿ ಮಂಡಲದ ಪ್ರ.ಕಾರ್ಯದರ್ಶಿ ಪ್ರಶಾಂತ್, ಕುತ್ತಿಲ ಗರಡಿ ಸಮಿತಿ ಅಧ್ಯಕ್ಷ ಸುಶಾಂತ್ ಕರ್ಕೇರ, ಉದ್ಯಮಿ ಸುರೇಶ್ ಕರ್ಕೇರ, ಸಿದ್ದಕಟ್ಟೆ ಕೃ.ಪ.ಸ. ಸಂಘದ ಅಧ್ಯಕ್ಷೆ ಪ್ರಭಾಕರ ಪ್ರಭು, ನ್ಯಾಯವಾದಿ ಅನಿಲ್ ಕುಮಾರ್, ತುಂಬೆ ಗ್ರಾ.ಪಂ. ಉಪಾಧ್ಯಕ್ಷ ಗಣೇಶ್ ಸಾಲಿಯಾನ್, ಸುನೀಲ್ ಗಾಯಕ್ ವಾಡ್ ಮುಂಬೈ, ಕೊರಂಟಬೆಟ್ಟ ಗರಡಿ ಸಮಿತಿ ಅಧ್ಯಕ್ಷ ಸದಾನಂದ ಪೂಜಾರಿ ಕೊರಂಟಬೆಟ್ಟು ಅತಿಥಿಗಳಾಗಿ ಭಾಗವಹಿಸಿದ್ದರು.

ಕ್ಲಬ್‌ನ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಸಂಚಾಲಕ ರಾಜೇಶ್ ಪಿ. ಪುಂಜಾಲಕಟ್ಟೆ, ಪದಾಧಿಕಾರಿಗಳಾದ ಮಾಧವ ಬಂಗೇರ, ಜಯರಾಜ್ ಅತ್ತಾಜೆ ಮೊದಲಾದವರಿದ್ದರು.ಕ್ಲಬ್ ಮಾಜಿ ಅಧ್ಯಕ್ಷ ಪ್ರಭಾಕರ ಪಿ.ಎಂ. ಸ್ವಾಗತಿಸಿದರು. ಕ್ಲಬ್‌ನ ಸ್ಥಾಪಕಾಧ್ಯಕ್ಷ ಎಂ. ತುಂಗಪ್ಪ ಬಂಗೇರ ಪ್ರಸ್ತಾವಿಸಿ ಇದುವರೆಗೆ ೪೯೮ ಜೋಡಿಗಳಿಗೆ ವಿವಾಹ ಮಾಡಲಾಗಿದೆ.ಸಾಮೂಹಿಕ ವಿವಾಹಗಳಿಗೆ ಕೇಂದ್ರ ಸರಕಾರ ಒತ್ತು ನೀಡುವ ನಿಟ್ಟಿನಲ್ಲಿ ಪ್ರಯತ್ನಿಸುವಂತೆ ಸಂಸದರಲ್ಲಿ ಮನವಿ ಮಾಡಿದರು. ರಂಗಕಲಾವಿದ ಎಚ್.ಕೆ.ನಯನಾಡು ಕಾರ್ಯಕ್ರಮ ನಿರೂಪಿಸಿದರು.

ಸ್ವಸ್ತಿಸಿರಿ ರಾಜ್ಯ ಪ್ರಶಸ್ತಿ ಪ್ರದಾನ:

ಇದೇ ವೇಳೆ ಹರೀಶ್ ಪೂಜಾರಿ (ಉದ್ಯಮ ), ಅಬ್ದುಲ್ ಕುಂಞಿ (ಸಮಾಜ ಸೇವೆ), ಸಾಯಿ ಸುಮಾ ನಾವಡ (ಯಕ್ಷಗಾನ), ಶಶಿಧರ ಆಚಾರ್ಯ (ಶಿಲ್ಪಕಲೆ), ಸಂದೇಶ್ ಮದ್ದಡ್ಕ (ಧಾರ್ಮಿಕ) ಅವರಿಗೆ ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹಾಗೂ ಐ.ಬಿ.ಸಂದೀಪ್ ಕುಮಾರ್, ಹರೀಶ ಮಾಂಬಾಡಿ, ರಮೇಶ್ ನಾಯಕ್, ಚಂದ್ರಹಾಸ ಕಡೆಗೋಳಿ (ಕುಸ್ತಿ), ಆದರ್ಶ ಶೆಟ್ಟಿ, ಡಿ.ಎಸ್.ಬೋಳೂರು, ರಮೇಶ್ ಶೆಟ್ಟಿ ಅವರಿಗೆ ಸ್ವಸ್ತಿಕ್ ಸಂಭ್ರಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.