ಪುನುಗು ಬೆಕ್ಕು ಬೇಟೆಯಾಡಿದವನ ಬಂಧನ

| Published : Aug 30 2025, 01:00 AM IST

ಪುನುಗು ಬೆಕ್ಕು ಬೇಟೆಯಾಡಿದವನ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು: ತಾಲೂಕಿನ ಉದ್ದೆಬೋರನಹಳ್ಳಿ ವ್ಯಾಪ್ತಿಯ ಪಾದುಮನೆ ಗ್ರಾಮದಲ್ಲಿ ಪುನುಗು ಬೆಕ್ಕು ಬೇಟೆಯಾಡಿದ್ದ ವ್ಯಕ್ತಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.

ಚಿಕ್ಕಮಗಳೂರು: ತಾಲೂಕಿನ ಉದ್ದೆಬೋರನಹಳ್ಳಿ ವ್ಯಾಪ್ತಿಯ ಪಾದುಮನೆ ಗ್ರಾಮದಲ್ಲಿ ಪುನುಗು ಬೆಕ್ಕು ಬೇಟೆಯಾಡಿದ್ದ ವ್ಯಕ್ತಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.

ಪುನುಗು ಬೆಕ್ಕು ಬೇಟೆಯಾಡಿ ಅದರ ಚರ್ಮ ಸುಲಿದು ಮಾಂಸ ತೆಗೆಯುವ ವೇಳೆಗೆ ಉಪ ವಲಯ ಅರಣ್ಯಾಧಿಕಾರಿ ನಾರಾಯಣ್ ಮತ್ತು ಸಿಬ್ಬಂದಿ ದಾಳಿ ಮಾಡಿ ರವಿ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.

ರವಿ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯಿದೆ ಅನ್ವಯ ಪ್ರಕರಣ ದಾಖಲು ಮಾಡಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಬಾಬು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್, ವಲಯ ಅರಣ್ಯಾಧಿಕಾರಿ ತನುಜ್ ಕುಮಾರ್ ಮಾರ್ಗದರ್ಶನದಲ್ಲಿ ಸಿಬ್ಬಂದಿ ಗೀತ , ಮಧು, ಗಣೇಶ್, ಅಶೋಕ್, ನವೀನ್ ಕಾರ್ಯಾಚರಣೆ ನಡೆಸಿದ್ದರು.ಪೋಟೋ ಫೈಲ್‌ ನೇಮ್‌ 29 ಕೆಸಿಕೆಎಂ 4ಚಿಕ್ಕಮಗಳೂರು ತಾಲೂಕು ಉದ್ದೇಬೋರನಹಳ್ಳಿ ಗ್ರಾಮದಲ್ಲಿ ಪುನುಗು ಬೆಕ್ಕು ಬೇಟೆಯಾಡಿದ್ದ ರವಿ ಎಂಬಾತನನ್ನು ವಶಕ್ಕೆ ಪಡೆದಿರುವ ಅರಣ್ಯ ಇಲಾಖೆ ಸಿಬ್ಬಂದಿ.-------------------------------------