ಕಾರ್ಯವನ್ನು ಕರ್ತವ್ಯವಾಗಿ ನಿಭಾಯಿಸಿದರೆ ಪುಣ್ಯ ಪ್ರಾಪ್ತಿ: ಪುತ್ತಿಗೆ ಸ್ವಾಮೀಜಿ

| Published : Jan 09 2024, 02:00 AM IST

ಕಾರ್ಯವನ್ನು ಕರ್ತವ್ಯವಾಗಿ ನಿಭಾಯಿಸಿದರೆ ಪುಣ್ಯ ಪ್ರಾಪ್ತಿ: ಪುತ್ತಿಗೆ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಪರ್ಯಾಯ ಪೂರ್ವ ತೀರ್ಥಕ್ಷೇತ್ರಗಳ ಭೇಟಿ ಸಂದರ್ಭದಲ್ಲಿ ನಗರದ ಉಡುಪಿ ಶ್ರೀ ಕೃಷ್ಣ ಭವನ ಹೊಟೇಲಿಗೆ ಭೇಟಿ ನೀಡಿ, ಪಟ್ಟದ ದೇವರಿಗೆ ಪೂಜೆ ಸಲ್ಲಿಸಿ ಆಶೀರ್ವಚನ ನೀಡಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಭಗವಗ್ಗೀತೆಯಲ್ಲಿ ಹೇಳಿರುವಂತೆ ನಾವು ಕೆಲಸ ಮಾಡಬೇಕು, ಫಲವನ್ನು ನಿರೀಕ್ಷಿಸಬಾರದು. ನಮ್ಮ ಕಾರ್ಯವನ್ನು ಕರ್ತವ್ಯ ಎಂದು ಮಾಡಿದಾಗ ಭಗವಂತ ಮೆಚ್ಚಿ ಫಲ ನೀಡುತ್ತಾನೆ ಎಂದು ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಪೀಠಾರೋಹಣಗೈಯಲಿರುವ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದ್ದಾರೆ.ಪರ್ಯಾಯ ಪೂರ್ವ ತೀರ್ಥಕ್ಷೇತ್ರಗಳ ಭೇಟಿ ಸಂದರ್ಭದಲ್ಲಿ ನಗರದ ಉಡುಪಿ ಶ್ರೀ ಕೃಷ್ಣ ಭವನ ಹೊಟೇಲಿಗೆ ಭೇಟಿ ನೀಡಿ, ಪಟ್ಟದ ದೇವರಿಗೆ ಪೂಜೆ ಸಲ್ಲಿಸಿ ಆಶೀರ್ವಚನ ನೀಡಿದರು.ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಸಿ.ಎ. ರಾಘವೇಂದ್ರ ರಾವ್‌ ಮಾತನಾಡಿ, ಮಧ್ವ ತತ್ವವನ್ನು ದೇಶದ ಹೊರಗೂ ಸಾರಿದ ಕೀರ್ತಿ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರಿಗೆ ಸಲ್ಲುತ್ತದೆ ಎಂದರು. ಪುತ್ತಿಗೆ ಶ್ರೀಗಳ ಶಿಷ್ಯರಾದ ಶ್ರೀ ಸುಶೀಂದ್ರತೀರ್ಥ ಶ್ರೀಪಾದರು ಆಶೀರ್ವಚಿಸಿದರು. ಶ್ರೀನಿವಾಸ ವಿವಿ ಸಹ ಕುಲಾಧಿಪತಿ ಡಾ.ಎ. ಶ್ರೀನಿವಾಸ ರಾವ್‌, ಶ್ರೀನಿವಾಸ ವಿವಿ ವಿಶ್ವಸ್ಥ ಮಂಡಳಿ ಸದಸ್ಯರಾದ ಎ. ವಿಜಯಲಕ್ಷ್ಮೀ ಆರ್‌. ರಾವ್‌, ಪ್ರೊ.ಇ.ಆರ್‌. ಮಿತ್ರಾ ಎಸ್‌. ರಾವ್‌, ಶ್ರೀನಿವಾಸ ವಿವಿ ರಿಜಿಸ್ಟಾರ್‌ ಡಾ. ಅನಿಲ್‌ ಕುಮಾರ್‌, ಅಭಿವೃದ್ಧಿ ರಿಜಿಸ್ಟಾರ್‌ ಡಾ. ಅಜಯ್ ಕುಮಾರ್‌ ಹಾಗೂ ಶ್ರೀನಿವಾಸ ವಿವಿಯ ವಿವಿಧ ಸಂಸ್ಥೆಗಳ ಡೀನ್‌ಗಳು ಇದ್ದರು.