ಪುರಾಣ ಪ್ರವಚನಗಳು ನಿರಂತರವಾಗಿ ನಡೆಯಬೇಕು: ವಿಶ್ವಾಸ ವೈದ್ಯ

| Published : Jan 20 2024, 02:06 AM IST

ಸಾರಾಂಶ

ಆಧ್ಯಾತ್ಮಿಕ ಪ್ರವಚನದಲ್ಲಿ ಕಾರ್ಯಕ್ರಮದಲ್ಲಿ ಶಾಸಕ ವಿಶ್ವಾಸ ವೈದ್ಯ ಮಾತನಾಡಿ, ಪ್ರತಿಯೊಬ್ಬರು ಪ್ರವಚನವನದಲ್ಲಿ ಭಾಗವಹಿಸಿ ತಮ್ಮ ಜೀವನ ಪಾವನ ಮಾಡಿಕೊಳ್ಳಬೇಕು ಎಂದರು.

ಕನ್ನಡಪ್ರಭ ವಾರ್ತೆ ಸವದತ್ತಿ

ಪಟ್ಟಣದಲ್ಲಿನ ಮಠಗಳಲ್ಲಿ ಪುರಾಣ ಪ್ರವಚನಗಳು ನಿರಂತರವಾಗಿ ನಡೆಯಬೇಕಿದ್ದು, ಪ್ರತಿಯೊಬ್ಬರು ಪ್ರವಚನವನದಲ್ಲಿ ಭಾಗವಹಿಸಿ ತಮ್ಮ ಜೀವನ ಪಾವನ ಮಾಡಿಕೊಳ್ಳಬೇಕು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಪಟ್ಟಣದ ಮೂಲಿಮಠದಲ್ಲಿ ನಡೆಯುತ್ತಿರುವ ಲಿಂ.ಬಸವಲಿಂಗ ಶಿವಾಚಾರ್ಯ ಸ್ವಾಮಿಗಳ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಹಮ್ಮಿಕೊಂಡ ಶಿವಯೋಗಿ ಶಿವಾಚಾರ್ಯ ವರಚಿತ ಸಿದ್ಧಾಂತ ಶಿಖಾಮಣಿ ಗ್ರಂಥದ ಶರಣ ಸ್ಥಲ ಎಂಬ ಆಧ್ಯಾತ್ಮಿಕ ಪ್ರವಚನದಲ್ಲಿ ಅವರು ಮಾತನಾಡಿ, ಮೂಲಿಮಠದಲ್ಲಿನ ಅಡುಗೆ ಕೋಣೆಯನ್ನು ತಮ್ಮ ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಭರವಸೆ ನೀಡಿದರು.

ಮೂಲಿಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮನುಷ್ಯನಲ್ಲಿನ ಕಲ್ಮಶಗಳನ್ನು ಶುದ್ದಿಗೊಳಿಸುವಲ್ಲಿ ಮಠ, ಮಾನ್ಯಗಳು ಪ್ರಮುಖ ಪಾತ್ರವಹಿಸುತ್ತಿದ್ದು, ಮನುಷ್ಯನಲ್ಲಿನ ಭವರೋಗದ ಗುಣಗಳನ್ನು ಹೊರ ಹಾಕುವ ಶಕ್ತಿ ಮಠಾಧೀಶರಿಗೆ ಇರುತ್ತದೆ ಎಂದು ಹೇಳಿದರು.

ಮನೋಹರ ಶೆಟ್ಟರ, ಪ್ರವೀಣ ಪಟ್ಟಣಶೆಟ್ಟಿ, ಸದಾಶಿವ ಕೌಜಲಗಿ, ಮಲ್ಲಿಕಾರ್ಜುನ ಪುರದಗುಡಿ, ಶ್ರೇಯಸ್ ಮಾಮನಿ ಇತರರು ಇದ್ದರು. ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಯವರಿಂದ ಶಾಸಕ ವಿಶ್ವಾಸ ವೈದ್ಯ ಮತ್ತು ಅತಿಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.