ಪುರಾಣ ಪುಣ್ಯಕತೆಗಳು ಬದುಕಿಗೆ ದಾರಿದೀಪ

| Published : Aug 10 2024, 01:30 AM IST

ಪುರಾಣ ಪುಣ್ಯಕತೆಗಳು ಬದುಕಿಗೆ ದಾರಿದೀಪ
Share this Article
  • FB
  • TW
  • Linkdin
  • Email

ಸಾರಾಂಶ

ಬದುಕಿಗೆ ನಿಜ ದಾರಿ ತೋರುವಲ್ಲಿ ಪುರಾಣ ಪುಣ್ಯ ಕತೆಗಳು ಸಹಾಯಕ

ಗದಗ: ಶ್ರಾವಣ ಮಾಸ ಬಹು ವಿಶೇಷತೆ ಪಡೆದಿದ್ದು, ನಾಡಿನಾದ್ಯಂತ ಸಂಭ್ರಮ ಸಡಗರ ಕಂಡು ಬರುತ್ತಿದ್ದು. ಗುರುಗಳು ಧರ್ಮ ಪ್ರಚಾರ, ಭಕ್ತರ ಮನಸ್ಸು ಸಾತ್ವಿಕ ಬದುಕಿಗೆ ಬರಲಿಕ್ಕಾಗಿಯೇ ಪುರಾಣ ಪುಣ್ಯಕತೆ, ಶಿವಾನುಭವಗಳು ಜನತೆಗೆ ದಾರಿದೀಪವಾಗಿವೆ ಎಂದು ಅಡವೀಂದ್ರ ಮಠದ ಧರ್ಮದರ್ಶಿ ಮಹೇಶ್ವರ ಸ್ವಾಮಿಗಳು ಹೊಸಳ್ಳಿಮಠ ಹೇಳಿದರು.

ಅವರು ನಗರದ ಅಡವೀಂದ್ರ ಮಠದದಲ್ಲಿ ಜರುಗಿದ ಶಿವಾನುಭವ ಕಾರ್ಯಕ್ರಮದ ಸಮ್ಮುಖ ವಹಿಸಿ ಮಾತನಾಡಿ, ಭಕ್ತರ ಮನಸ್ಸನ್ನು ಆಧ್ಯಾತ್ಮದತ್ತ ಕೊಂಡೊಯ್ದು ಅವರ ಬದುಕಿಗೆ ನಿಜ ದಾರಿ ತೋರುವಲ್ಲಿ ಪುರಾಣ ಪುಣ್ಯ ಕತೆಗಳು ಸಹಾಯಕ ಎಂದರು.

ಸುಧಾ ಹುಚ್ಚಣ್ಣವರ ಉಪನ್ಯಾಸ ನೀಡಿ, ಶ್ರಾವಣ ಮಾಸದಲ್ಲಿ ಸಾಲು ಸಾಲಾಗಿ ಹಬ್ಬಗಳ ಕಂಪನವಾಗುತ್ತದೆ. ಸಮಗ್ರ ಮನುಕುಲಕ್ಕೆ ಈ ಮಾಸವು ಶ್ರೇಷ್ಠ ಮಾಸವಾಗಿದೆ. ಧ್ಯಾನ, ಪೂಜೆ, ವೃತಪಾಲನೆ ಮುಂತಾದವು ಪಾಲಿಸಿ ಪುನೀತರಾಗುವ ಕಾಲವಿದು ಎಂದರು.

ಈ ವೇಳೆ ಅ.ಭಾ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಶರಣಬಸಪ್ಪ ಗುಡಿಮನಿ, ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಿವೇದಿತಾ ಭೂಸನೂರಮಠ ಹಾಗೂ ನಾಗರಾಜ ಸಂಪಗಾವಿ ಅವರನ್ನು ಸನ್ಮಾನಿಸಲಾಯಿತು.

ಪ್ರಸಾದ ಸೇವೆಯನ್ನು ನಿವೃತ್ತ ಕೃಷಿ ಅಧಿಕಾರಿ ಪಿ.ಸಿ. ಪುರಾಣಿಕಮಠ, ನಿವೃತ್ತ ಪ್ರಾ.ಸಿ.ಲಿಂಗಾರೆಡ್ಡಿ, ನಿವೃತ್ತ ಶಿಕ್ಷಕ ಎಸ್.ಎಂ. ಮಾಶಾಳ, ರವೀಂದ್ರ ಮಾಶಾಳ ವಹಿಸಿದ್ದರು.

ಡಾ. ಎಸ್.ಕೆ.ನಾಲತ್ವಾಡಮಠ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಕೆ.ಎಚ್.ಬೇಲೂರ, ಬಿ.ಎಂ. ಬಿಳೇಯಲಿ, ಜಿ.ಎಂ. ಯಾಮನಶೆಟ್ಟಿ, ಡಾ. ಎಂ.ವಿ.ಐಹೊಳಿ, ಪುರಾಣಿಕಮಠ ಮುಂತಾದವರಿದ್ದರು. ಸಿದ್ಧಣ್ಣ ಜವಳಿ ಪ್ರಾರ್ಥಿಸಿದರು. ಬಿ.ಬಿ.ತೋಟಗೇರ ಸ್ವಾಗತಿಸಿದರು. ಸಾಂಸ್ಕೃತಿ ಕಾರ್ಯದರ್ಶಿ ವಿನಾಯಕ ಸಜ್ಜನ ಪರಿಚಯಿಸಿದರು. ಉಮಾಪತಿ ಭೂಸನೂರಮಠ ನಿರೂಪಿಸಿದರು. ಜಿ.ಎಫ್. ಬಿದರಿ ವಂದಿಸಿದರು.