ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಅಂಬೇಡ್ಕರ್ ಅವರು ನಿಪ್ಪಾಣಿ ನಗರಕ್ಕೆ ಬಂದ ಸಮಯದಲ್ಲಿ ವಾಯು ವಿವಾಹರಕ್ಕೆ ಹೋದ ಸ್ಥವನಿಧಿ ಬಳಿ ಇರುವ ಗುಡ್ಡದ ಮೇಲೆ 10 ಎಕರೆ ಸ್ಥಳ ಖರೀದಿ ಮಾಡಿದ್ದು, ಇಲ್ಲಿ ಅಶ್ವರೂಢ ಅಂಬೇಡ್ಕರ್ ಮೂರ್ತಿಪ್ರತಿಷ್ಠಾಪನೆ, ಕ್ರಾಂತಿಸ್ಥಂಭ, ಬೌದ್ಧ, ಮ್ಯೂಜಿಯಂ, ಬಡವರಿಗೆ ಈ ಲೈಬ್ರರಿ ಹಾಗೂ ಸಭಾಭವನ ನಿರ್ಮಾಣ ಮಾಡುವ ಗುರಿ ಹೊಂದಿದ್ದು, ₹1.20 ಕೋಟಿಗಳ ಅನುದಾನ ಈಗಾಗಲೇ ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಡುಗಡೆಯಾಗಿದೆ. ನಾನು ನನ್ನ ಶಾಸಕರ ಅನುದಾನದಲ್ಲಿ ₹1 ಕೋಟಿಗಳ ಅನುದಾನ ನೀಡಿ ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದೆ ಎಂದು ಮಾಜಿ ಸಚಿವೆ, ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.ಇಲ್ಲಿನ ಜಿಲ್ಲಾ ಬಿಜೆಪಿ ಕಚೇರಿಯ ಸಭಾಗೃಹದಲ್ಲಿ ಶನಿವಾರ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಅವರ ಧರ್ಮಪತ್ನಿ ರಮಾಬಾಯಿಯವರು 1925ರ ಏ.11 ರಂದು ನಿಪ್ಪಾಣಿಗೆ ನಗರಕ್ಕೆ ಬಂದು 100 ವರ್ಷ ಪೂರೈಸಿದ ಸವಿನೆನಪಿಗಾಗಿ ನಿಪ್ಪಾಣಿಯಲ್ಲಿ ಏ.15 ರಂದು ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಕೇಂದ್ರ ಸಚಿವ ಚಿರಾಗ ಪಾಸ್ವಾನ್ ಆಗಮಿಸಲಿದ್ದಾರೆ ಎಂದರು.ಡಾ.ಅಂಬೇಡ್ಕರವರಿಗೆ ಆದ ಅನ್ಯಾಯ, ಮೋಸ, ಗೌರವ ಕೊಟ್ಟವರ ಬಗ್ಗೆ ತಿಳಿಹೇಳುವ ಉದ್ದೇಶದಿಂದ ನಿಪ್ಪಾಣಿಯಲ್ಲಿ ಬೃಹತ್ ಸಮಾವೇಶವನ್ನು ಮಾಡುವಂತೆ ಕೇಂದ್ರ ಸಮಿತಿ ಹಸಿರು ನಿಶಾನೆ ನೀಡಿದ ಬಳಿಕ ರಾಜ್ಯ ಬಿಜೆಪಿ ಪದಾಧಿಕಾರಿಗಳು ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆಯವರ ಹಾಗೂ ಮಾಜಿ ಸಚಿವ ಎನ್.ಮಹೇಶ ಮಾರ್ಗದರ್ಶನದಲ್ಲಿ ಸಮಾವೇಶ ಆಯೋಜಿಸಲಾಗಿದೆ.
ಮಾಜಿ ಸಚಿವ ಎನ್.ಮಹೇಶ, ಮಾಜಿ ಸಂಸದರಾದ ಮುನಿಸ್ವಾಮಿ ನೇತೃತ್ವದಲ್ಲಿ ಏ.11 ರಿಂದ 15 ವರೆಗೆ ಬೆಂಗಳೂರಿನಿಂದ ನಿಪ್ಪಾಣಿವರೆಗೆ ಭೀಮಯಾತ್ರೆ ಈಗಾಗಲೇ ಹೊರಟಿದ್ದು, 14 ಸಂಜೆ ಸಂಕೇಶ್ವರಕ್ಕೆ ಆಗಮಿಸಿ 15ಕ್ಕೆ ನಿಪ್ಪಾಣಿ ಆಗಮಿಸಲಿದ್ದು ಭವ್ಯ ಸ್ವಾಗತ ಸಮಾರಂಭ ಆಯೋಜಿಸಲಾಗಿದೆ. ಬೆಂಗಳೂರಿನಿಂದ ಹೊರಟ ಭೀಮಯಾತ್ರೆಯ ಉದ್ದಕ್ಕೂ ಆಯ್ದ ಸ್ಥಳಗಳಲ್ಲಿ ಜಾಗೃತಿ ಸಭೆಗಳನ್ನು ಮಾಡಿಕೊಂಡು ಬರುತ್ತಿದ್ದಾರೆ ಎಂದರು.ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ ಅಪ್ಪಾಜಿಗೋಳ, ಶಾಂಭವಿ ಅಶ್ವಥಪುರ, ಬಾಬಾಸಾಹೇಬ ಕೆಂಚನ್ನವರ, ಮಹೇಶ ಭಾತೆ,ದುಂಡಪ್ಪ ಬೆಂಡವಾಡೆ ಉಪಸ್ಥಿತರಿದ್ದರು.