ರಾಮನಗರ: ಪ್ರಸಕ್ತ ಸಾಲಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ ರೈತರಿಂದ ಬರೋಬ್ಬರಿ 132 ಕೋಟಿ ರುಪಾಯಿ ಮೌಲ್ಯದ 2.71 ಲಕ್ಷ ಕ್ವಿಂಟಲ್ ರಾಗಿ ಖರೀದಿಸಲಾಗಿದೆ.
2025-26ನೇ ಸಾಲಿಗೆ ಹೋಲಿಸಿದರೆ ಈ ವರ್ಷ ಶೇಕಡ 20ರಷ್ಟು ರೈತರು ಹೆಚ್ಚುವರಿಯಾಗಿ ರಾಗಿ ಪೂರೈಕೆ ಮಾಡಿದ್ದಾರೆ. ಕಳೆದ ಬಾರಿ 18,082 ರೈತರು 2,74,804 ಕ್ವಿಂಟಲ್ ರಾಗಿ ಮಾರಾಟ ಮಾಡುವುದಾಗಿ ನೋಂದಣಿ ಮಾಡಿಕೊಂಡಿದ್ದರು. ಇದರಲ್ಲಿ 12,773 ರೈತರು 83 ಕೋಟಿ 57 ಲಕ್ಷ ರುಪಾಯಿ ಮೌಲ್ಯದ 1,94,804 ಕ್ವಿಂಟಲ್ ರಾಗಿ ಸರಬರಾಜು ಮಾಡಿದ್ದರು.ಆಹಾರ ಇಲಾಖೆ ಹಾಗೂ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತಕ್ಕೆ ಸರ್ಕಾರ ಇಂತಿಷ್ಟು ಕ್ವಿಂಟಲ್ ರಾಗಿಯನ್ನು ಕನಿಷ್ಠ ಬೆಂಬಲ ಬೆಲೆಯಡಿ ಖರೀದಿ ಮಾಡಲು ಗುರಿ ನೀಡಿತ್ತು. ಅದರಂತೆ
ಪ್ರಸಕ್ತ ಸಾಲಿನಲ್ಲಿ 12,265 ರೈತರು 2,88,284 ಕ್ವಿಂಟಲ್ ರಾಗಿ ಪೂರೈಸಲು ನೋಂದಣಿ ಮಾಡಿಕೊಂಡಿದ್ದರು. ಇದರಲ್ಲಿ 11,693 ರೈತರು 132 ಕೋಟಿ 89 ಲಕ್ಷ ರುಪಾಯಿ ಮೌಲ್ಯದ 2,71,982 ಕ್ವಿಂಟಲ್ ರಾಗಿಯನ್ನು ಸರಬರಾಜು ಮಾಡಿದ್ದಾರೆ. ಇದರಲ್ಲಿ ಶೇಕಡ 90ರಷ್ಟು ರಾಗಿ ಹಣವನ್ನು ರೈತರ ಖಾತೆಗೆ ಪಾವತಿ ಮಾಡಲಾಗಿದೆ.ಜಿಲ್ಲೆಯಲ್ಲಿ ಸುಮಾರು 72,000 ಹೆಕ್ಟೇರ್ ಗುರಿಯಲ್ಲಿ 65,000 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆ ಇತ್ತು. ಈ ಬಾರಿ ನಿರೀಕ್ಷಿತ ಪ್ರಮಾಣದಷ್ಟು ರಾಗಿ ಉತ್ಪಾದನೆಯೂ ಆಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ನಾಲ್ಕನೇ ಮೂರು ಭಾಗದಷ್ಟು ರಾಗಿಯೂ ಖರೀದಿಯಾಗುವ ಸಾಧ್ಯತೆಗಳಿವೆ.
ಕ್ವಿಂಟಲ್ ರಾಗಿಗೆ 4,886 ರು. ದರ ನಿಗದಿ :
ಸರ್ಕಾರ ಕಳೆದ ವರ್ಷ ರಾಗಿಯ ದರವನ್ನು ಪ್ರತಿ ಕ್ವಿಂಟಲ್‌ಗೆ 4290 ರುಪಾಯಿ ನಿಗದಿ ಮಾಡಿತ್ತು. ಆದರೆ, ಈ ವರ್ಷ 596 ರುಪಾಯಿ ಹೆಚ್ಚುವರಿಯಾಗಿ ಅಂದರೆ 4,886 ರುಪಾಯಿ ದರ ನಿಗದಿ ಪಡಿಸಿತು. ಪ್ರತಿ ರೈತರಿಂದ ಒಂದು ಎಕರೆಗೆ 10 ಕ್ವಿಂಟಲ್ ನಂತೆ ಎಲ್ಲ ರೈತರಿಂದ ಅವರು ಹೊಂದಿರುವ ಜಮೀನಿಗೆ ಅನುಗುಣವಾಗಿ ರಾಗಿ ಖರೀದಿಸಲು ಉದ್ದೇಶಿಸಿತ್ತು. ರಾಗಿ ಖರೀದಿ ದರ ಹೆಚ್ಚಾಗಿರುವ ಜೊತೆಗೆ ಬೆಳೆ ಇಳುವರಿಯೂ ಚೆನ್ನಾಗಿರುವುದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಕಳೆದ ಎರಡು ಮೂರು ವರ್ಷಗಳಿಂದ ಸತತವಾಗಿ ಏರಿಕೆ ಕಾಣುತ್ತಿದ್ದ ಬೆಲೆಯಲ್ಲಿ ಈ ಬಾರಿ ಪ್ರತಿ ಕೆಜಿಗೆ 5.96 ರು.ಗಳಷ್ಟು ಹೆಚ್ಚಳವಾಗಿತ್ತು. ಸಿರಿಧಾನ್ಯಗಳ ಬಗ್ಗೆ ಜಾಗೃತಿ ಹೆಚ್ಚಾದಂತೆ ರಾಗಿ ಬಳಕೆದಾರರು ಮತ್ತು ಬೆಳೆಗಾರರ ಸಂಖ್ಯೆಯಲ್ಲೂ ಗಣನೀಯ ಏರಿಕೆ ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ರೈತರಿಗೆ ಅನುಕೂಲ ಮಾಡಿಕೊಡಲು ಸರ್ಕಾರವು ಖರೀದಿ ನೋಂದಣಿ ಪ್ರಕ್ರಿಯೆಯನ್ನು ಶೀಘ್ರವಾಗಿ ಆರಂಭಿಸಿತ್ತು.ಬ್ರೋಕರ್‌ಗಳಿಗೆ ಕಡಿವಾಣ:
ಜಿಲ್ಲೆಯಲ್ಲಿ 5 ತಾಲೂಕುಗಳಿಗೆ ಒಂದರಂತೆ ಒಟ್ಟು 5 ಖರೀದಿ ಕೇಂದ್ರ ಮತ್ತು ಸಂಗ್ರಹಣ ಕೇಂದ್ರಗಳನ್ನು 2026ರ ಜನವರಿ ಅಂತ್ಯದೊಳಗೆ ತೆರೆಯಲಾಗಿತ್ತು. ಖರೀದಿ ಕೇಂದ್ರಗಳಲ್ಲಿ ರೈತರು ಮಾತ್ರ ಹಾಜರಿ ಕಡ್ಡಾಯ ಮಾಡಲಾಗಿತ್ತು. ಮಧ್ಯವರ್ತಿಗಳಿಗೆ ಕಡಿವಾಣ ಹಾಕಿದ್ದರಿಂದ ರಾಗಿ ಸರಬರಾಜು ಮಾಡಿದ ರೈತರಿಗೆ ನಿಗದಿತ ದಿನಾಂಕದೊಳಗೆ ಹಣ ಪಾವತಿಯಾಗಿದೆ.ಬಾಕ್ಸ್ ...
ಮೇ 5ರವರೆಗೆ ರಾಗಿ ಮಾರಾಟದ ನೋಂದಣಿ ವಿವರಖರೀದಿ ಕೇಂದ್ರನೋಂದಣಿ ರೈತರುರಾಗಿ ಪ್ರಮಾಣ (ಕ್ವಿ)
ಕನಕಪುರ3,32594,353.00ಮಾಗಡಿ5,1021,09,338.50
ರಾಮನಗರ47211,029.50ಮಾಗಡಿ1 2,05640,879.50
ಚನ್ನಪಟ್ಟಣ37310,248.50ಹಾರೋಹಳ್ಳಿ93722,435.00
ಒಟ್ಟು12,2652,88,284.00ಬಾಕ್ಸ್ ...............
ಮೇ 5ರವರೆಗೆ ರಾಗಿ ಸರಬರಾಜಿನ ವಿವರಖರೀದಿ ಕೇಂದ್ರರಾಗಿ ಪೂರೈಸಿದ ರೈತರುರಾಗಿ ಪ್ರಮಾಣ (ಕ್ವಿ)ರಾಗಿ ಒಟ್ಟು ಮೌಲ್ಯ (ರು.)
ಕನಕಪುರ3,10486,779.0042,40,02,194ಮಾಗಡಿ4,9071,04,616.5051,11,56,219
ರಾಮನಗರ45210,478.505,11,97,951ಮಾಗಡಿ1 1,96638,881.5018,99,75,009
ಚನ್ನಪಟ್ಟಣ3579,727.004,75,26,122ಹಾರೋಹಳ್ಳಿ907 21,500.0010,50,49,000 ಒಟ್ಟು11,6932,71,982.50132,89,06,495
6ಕೆಆರ್ ಎಂಎನ್ 5.ಜೆಪಿಜಿಸಾಂದರ್ಭಿಕ ಚಿತ್ರ)