ಸಾರಾಂಶ
ಯಡ್ರಾಮಿ ತಾಂಡಾದಲ್ಲಿ ಇರುವ ಶುದ್ಧ ನೀರಿನ ಘಟಕ ಕಾರ್ಯನಿರ್ವಹಿಸುತ್ತಿಲ್ಲ ಎಂಬುವುದನ್ನು ಯಾವುದೇ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಗಮನಕ್ಕೆ ತರದೇ ಇರುವುದು ವಿಪರ್ಯಾಸ.
ಕನ್ನಡಪ್ರಭ ವಾರ್ತೆ ಯಡ್ರಾಮಿ
ಯಡ್ರಾಮಿ ತಾಂಡಾದಲ್ಲಿ ಹೆಸರಿಗೆ ಮಾತ್ರ ಶುದ್ಧ ಕುಡಿವ ನೀರಿನ ಘಟಕವಾಗಿದೆ. ಈ ಕಾಮಗಾರಿ ತಾಲೂಕು ಬಸ್ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರು, ತಾಂಡಾದ ಜನರಿಗೆ ಮಾತ್ರ ನಿರುಪಯುಕ್ತವಾಗಿದೆ.ಯಾವುದೇ ಅಧಿಕಾರಿಗಳ ಸಭೆ ಹಾಗೂ ಸಚಿವರ ಸಭೆಗಳಲ್ಲಿ ಜನರಿಗೆ ಶುದ್ಧ ಕುಡಿವ ನೀರಿನ ಸಮಸ್ಯೆಯಾಗದಂತೆ ಗಮನಹರಿಸಬೇಕು ಎಂಬುವುದು ಸಭೆಗಳಲ್ಲಿ ಕೆಳ ಹಂತದ ಅಧಿಕಾರಿಗಳಿಗೆ ಸೂಚನೆ.
ನಿರ್ಲಕ್ಷ್ಯವಹಿಸಿದ ಅಧಿಕಾರಿಗಳಿಗೆ ತರಾಟೆ ತೆಗೆದುಕೊಳ್ಳುವುದಕ್ಕೆ ಮಾತ್ರ ಸೀಮಿತವಾಗಿದೆ. ಯಡ್ರಾಮಿ ತಾಂಡಾದಲ್ಲಿ ಇರುವ ಶುದ್ಧ ನೀರಿನ ಘಟಕ ಕಾರ್ಯನಿರ್ವಹಿಸುತ್ತಿಲ್ಲ ಎಂಬುವುದನ್ನು ಯಾವುದೇ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಗಮನಕ್ಕೆ ತರದೇ ಇರುವುದು ವಿಪರ್ಯಾಸವಾಗಿದೆ ಎಂಬುವುದು ಜನರ ಆರೋಪವಾಗಿದೆ.ಯಡ್ರಾಮಿ ತಾಂಡಾದಲ್ಲಿ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ವ್ಯಾಪ್ತಿಯಡಿಯಲ್ಲಿ ಶುದ್ಧ ಕುಡಿವ ನೀರಿನ ಘಟಕವನ್ನು 2019ರಲ್ಲಿ ಸ್ಥಾಪನೆ ಮಾಡಿ ಕೈತೊಳೆದುಕೊಂಡಿದ್ದಾರೆ. ಆದರೆ ಈ ಘಟಕವನ್ನು ಸ್ಥಾಪನೆಗೊಂಡು ಐದು ವರ್ಷವಾದರೂ ಇದುವರೆಗೂ ಉದ್ಘಾಟಿಸಿಲ್ಲ. ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಎಂಬುವುದು ಸರ್ಕಾರದ ದಾಖಲೆಗಳಲ್ಲಿಯೇ ಸೀಮಿವಾಗಿದೆ ಎಂಬುವುದು ಜನರಲ್ಲಿ ಮೂಡಿರುವ ಅಸಮಾಧಾನವಾಗಿದೆ.
ತಾಂಡಾದ ಜನರಿಗೆ ಶುದ್ಧ ಕುಡಿಯುವ ನೀರು ಘಟಕ ಇಲ್ಲದೇ ಇರುವುದರಿಂದ ಪಟ್ಟಣದಲ್ಲಿ ಇರುವ ಖಾಸಗಿ ಶುದ್ಧ ಕುಡಿಯುವ ನೀರಿನ ಘಟಕದಿಂದ ಹೆಚ್ಚಿನ ಹಣ ನೀಡಿ ತಾಂಡಾದ ಜನರು ಶುದ್ದ ಕುಡಿಯುವ ನೀರು ತಂದು ಕುಡಿಯುವ ಪರಿಸ್ಥಿತಿ ಜನರಿಗೆ ಎದುರಾಗಿದೆ.ಶುದ್ದ ಕುಡಿಯುವ ನೀರಿನ (ಆರ್.ಒ) ಘಟಕ ಸ್ಥಾಪನೆ ಅದಕ್ಕೆ ಆಗತ್ಯ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಘಟಕಕ್ಕೆ ನೀರಿನ ಸಂಪರ್ಕ ಇಲ್ಲದ ಕಾರಣದಿಂದ ಘಟಕ ಆರಂಭಗೊಂಡಿಲ್ಲ ಎಂಬ ಆರೋಪವು ಜನರಿಂದ ಕೇಳಿಬರುತ್ತಿದೆ.
ಈ ನೀರಿನ ಘಟಕ ನಿರ್ಮಿಸಲು ನಿಗಮ ಕನಿಷ್ಠ 5-6ಲಕ್ಷ ರೂ ಅನುದಾನ ವೆಚ್ಚ ಮಾಡಿದರೂ ತಾಂಡಾಕ್ಕೆ ಶುದ್ಧ ಕುಡಿಯುವ ನೀರಿನ ಪೂರೈಕೆ ಎಂಬ ಉದ್ದೇಶಕ್ಕೆ ಆದರೆ ವ್ಯರ್ಥವಾಗಿದೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸುವುದೇ ಎಂಬುವುದು ಕಾದು ನೋಡಬೇಕು.