ಸಾರಾಂಶ
ಮನುಷ್ಯನಾದವನು ಇತರರ ಮನಸ್ಸಿಗೆ ನೋವಾಗದಂತೆ ನಡೆದುಕೊಳ್ಳುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಎಲ್ಲರೂ ಭಕ್ತಿ ಮೈಗೂಡಿಸಿಕೊಂಡು ಜೀವನ ಸಾಗಿಸಬೇಕು. ಗ್ರಾಮದಲ್ಲಿ ಸದ್ಯ ಹುಚ್ಚಿರೇಶ್ವರರ ಮೂರ್ತಿ ಸ್ಥಾಪಿಸಿದ್ದೀರಿ. ಮುಂದಿನ ವರ್ಷ ಉಚ್ಚಾಯ ಉತ್ಸವ ಜರುಗಲಿ. ಎರಡ್ಮೂರು ವರ್ಷದಲ್ಲಿ ಹುಚ್ಚಿರೇಶ್ವರ ರಥೋತ್ಸವ ಸಾಗಲಿ.
ಯಲಬುರ್ಗಾ: ಪ್ರತಿಯೊಬ್ಬರು ಭಕ್ತಿ ಮಾರ್ಗದಿಂದ ನಡೆದಾಗ ಮಾತ್ರ ಜೀವನ ಪಾವನವಾಗುತ್ತದೆ ಎಂದು ಯಲಬುರ್ಗಾ ಶ್ರೀಧರ ಮುರಡಿ ಹಿರೇಮಠದ ಪೀಠಾಧಿಪತಿ ಬಸವಲಿಂಗೇಶ್ವರ ಸ್ವಾಮೀಜಿ ಹೇಳಿದರು.ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮದ ಹುಚ್ಚಿರೇಶ್ವರರ ಮೂರ್ತಿ ಹಾಗೂ ಪ್ರಾಣ ಪ್ರತಿಷ್ಠಾಪನೆ ಶುಕ್ರವಾರ ನೆರವೇರಿಸಿ ಮಾತನಾಡಿದ ಅವರು, ಎಲ್ಲ ಜೀವಿಗಳಲ್ಲಿ ಮನುಷ್ಯ ಜೀವನ ಶ್ರೇಷ್ಠವಾಗಿದೆ ಎಂದರು.
ಮನುಷ್ಯನಾದವನು ಇತರರ ಮನಸ್ಸಿಗೆ ನೋವಾಗದಂತೆ ನಡೆದುಕೊಳ್ಳುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಎಲ್ಲರೂ ಭಕ್ತಿ ಮೈಗೂಡಿಸಿಕೊಂಡು ಜೀವನ ಸಾಗಿಸಬೇಕು. ಗ್ರಾಮದಲ್ಲಿ ಸದ್ಯ ಹುಚ್ಚಿರೇಶ್ವರರ ಮೂರ್ತಿ ಸ್ಥಾಪಿಸಿದ್ದೀರಿ. ಮುಂದಿನ ವರ್ಷ ಉಚ್ಚಾಯ ಉತ್ಸವ ಜರುಗಲಿ. ಎರಡ್ಮೂರು ವರ್ಷದಲ್ಲಿ ಹುಚ್ಚಿರೇಶ್ವರ ರಥೋತ್ಸವ ಸಾಗಲಿ ಎಂದು ಆಶೀರ್ವದಿಸಿದರು.ಚಿಕ್ಕಮ್ಯಾಗೇರಿ-ಇಟಗಿಯ ಭೂ ಕೈಲಾಸ ಮೇಲುಗದ್ದಿಗೆ ಮಠದ ಡಾ.ಗುರುಶಾಂತವೀರ ಸ್ವಾಮೀಜಿ, ಕೋಡಿಕೊಪ್ಪದ ವೀರಪ್ಪಜ್ಜನ ಮಠದ ವೃಷಭೇಂದ್ರಯ್ಯ ಸ್ವಾಮೀಜಿ ಮಾತನಾಡಿದರು.ಮಕ್ಕಳ್ಳಿ ಶಿವಾನಂದ ಮಠದ ಪ.ಪೂ. ಶಿವಾನಂದ ಸ್ವಾಮೀಜಿ ಹಾಗೂ ಹುಚ್ಚಿರೇಶ್ವರ ದೇವಸ್ಥಾನ ಸೇವಾ ಸಮಿತಿ ಹಾಗೂ ಅಪಾರ ಭಕ್ತರು ಇದ್ದರು.