ಸಾರಾಂಶ
ಪೂರ್ಣಪ್ರಜ್ಞ ಕಾಲೇಜಿನ ಮಿನಿ ಆಡಿಟೋರಿಯಂನಲ್ಲಿ ಶಿಕ್ಷಕೇತರ ನೌಕರರಿಗೆ ತರಬೇತಿ ಶಿಬಿರ ಸಂಪನ್ನಗೊಂಡಿತು.
ಕನ್ನಡಪ್ರಭ ವಾರ್ತೆ ಉಡುಪಿ
ಪ್ರಾಮಾಣಿಕತೆ, ವೃತ್ತಿ ಬದ್ಧತೆ ಮತ್ತು ಸಂಸ್ಥೆಯ ಮೇಲಿರುವ ಆಗಾಧ ಪ್ರೀತಿ ನೌಕರರ ಅಭಿವೃದ್ಧಿಗೆ ದಾರಿ ದೀಪವಾಗುವುದು ನಿಸ್ಸಂದೇಹ. ಸಂಸ್ಥೆಯ ಅಭಿವೃದ್ಧಿ ಎಲ್ಲಾ ನೌಕರರ ಪ್ರಾಮಾಣಿಕ ಸೇವೆಯ ಬುನಾದಿಯ ಮೇಲೆ ಅವಲಂಬಿತವಾಗಿರುವುದು. ಈ ದಿಸೆಯಲ್ಲಿ ಉಡುಪಿ ಮತ್ತು ಅದಮಾರು ಪೂರ್ಣಪ್ರಜ್ಞ ಸಂಸ್ಥೆಗಳ ಎಲ್ಲಾ ಶಿಕ್ಷಕೇತರ ನೌಕರರಿಗೆ ಆಯೋಜಿಸಲಾದ ಒಂದು ದಿನದ ವಿಶೇಷ ತರಬೇತಿ ಶಿಬಿರವು ಅತ್ಯಂತ ಪ್ರಸ್ತುತವಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಡಾ.ಶ್ರೀರಮಣ ಐತಾಳ್ ಹೇಳಿದ್ದಾರೆ.ಪೂರ್ಣಪ್ರಜ್ಞ ಕಾಲೇಜಿನ ಮಿನಿ ಆಡಿಟೋರಿಯಂನಲ್ಲಿ ಆಯೋಜಿಸಲಾದ ಈ ಶಿಬಿರವನ್ನು ಉದ್ಘಾಟನೆ ನೇರವೇರಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾದ ಡಾ. ಅಶೋಕ್ ಕಾಮತ್, ಸಂಸ್ಥೆಯ ಪ್ರಾಂಶುಪಾಲರಾದ ಡಾ.ರಾಮು ಎಲ್. ಹಾಗೂ ಡಾ.ಸುಕನ್ಯಾ ಮೇರಿ ವೇದಿಕೆಯಲ್ಲಿ ಇದ್ದರು.ಎ. ಪಿ. ಕೊಡಂಚ ಕಾರ್ಯಕ್ರಮದ ನಿರೂಪಕರಾಗಿ ಅತಿಥಿಗಳನ್ನು ಸ್ವಾಗತಿಸಿದರು. ಕಾಲೇಜಿನ ಕಛೇರಿ ವ್ಯವಸ್ಥಾಪಕ ಬಿ. ಬಾಲಚಂದ್ರ ಸಾಮಗ ವಂದಿಸಿದರು. ಕಚೇರಿ ಸಹಾಯಕರಾದ ಶ್ವೇತಾ ಮತ್ತು ದೀಪಿಕಾ ಪ್ರಾರ್ಥಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ಡಾ. ಅಶೋಕ್ ಕಾಮತ್, ಡಾ. ತೇಜಸ್ವಿನಿ ಪಾಟೀಲ್, ಶೈಲಾ ಶ್ಯಾಮನೂರ್, ಸಿಎ ಲಕ್ಷ್ಮೀಶ ರಾವ್ ಹಾಗೂ ಎ . ಪಿ. ಕೊಡಂಚ ಸುಮಾರು ೯೦ ಶಿಕ್ಷಕೇತರ ನೌಕರರಿಗೆ ವಿವಿಧ ವಿಷಯಗಳ ಮೇಲೆ ಮಾಹಿತಿ ನೀಡಿ ಸಹಕರಿಸಿದರು.