ಸಾರಾಂಶ
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ರಸಋಷಿ, ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನಾಚರಣೆಯ ಪ್ರಯುಕ್ತ ಕುವೆಂಪು ಪುತ್ಥಳಿಗೆ ಗೌರವ ಅರ್ಪಿಸಲಾಯಿತು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ರಸಋಷಿ, ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನಾಚರಣೆಯ ಪ್ರಯುಕ್ತ ಮಡಿಕೇರಿ ತಾಲೂಕು ಒಕ್ಕಲಿಗರ ಸಂಘ ನಗರದಲ್ಲಿ ಕುವೆಂಪು ಪುತ್ಥಳಿಗೆ ಗೌರವ ಅರ್ಪಿಸಿತು.ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ಮೋಹನ್ ವಿ.ಜಿ. ನೇತೃತ್ವದಲ್ಲಿ ಸಂಘದ ಪ್ರಮುಖರು ನಗರದ ರಾಜಾಸೀಟು ರಸ್ತೆಯಲ್ಲಿರುವ ವಿಶ್ವ ಮಾನವ ಕುವೆಂಪು ಉದ್ಯಾನವನದಲ್ಲಿರುವ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದರು.
ನಂತರ ಮಾತನಾಡಿದ ಮೋಹನ್ ವಿ.ಜಿ ರಾಷ್ಟ್ರದ ಸಾಹಿತ್ಯ ಕ್ಷೇತ್ರಕ್ಕೆ ಕುವೆಂಪು ಅವರು ನೀಡಿದ ಕೊಡುಗೆಯನ್ನು ಬಣ್ಣಿಸಿದರು. ನಿರ್ದೇಶಕ ಹಾಗೂ ವಕೀಲ ಎಂ.ಎ. ನಿರಂಜನ್ ಮಾತನಾಡಿ ಕನ್ನಡ ಸಾಹಿತ್ಯ ಲೋಕದಲ್ಲಿ ಜ್ಞಾನಪೀಠ ಗಳಿಸಿದ ಅಗ್ರಗಣ್ಯ ಕುವೆಂಪು ಅವರ ಕೃತಿಗಳನ್ನು ಪ್ರತಿಯೊಬ್ಬರು ಓದಿ ಮನನ ಮಾಡಿಕೊಳ್ಳಬೇಕು. ಮುಂದಿನ ಪೀಳಿಗೆ ಕುವೆಂಪು ಅವರ ಆದರ್ಶಗಳನ್ನು ಮತ್ತು ಕವಿ ಮನಸ್ಸನ್ನು ನಿತ್ಯ ಸ್ಮರಿಸಿಕೊಂಡು ಸಾಧನೆಯ ಹಾದಿಯಲ್ಲಿ ಸಾಗಬೇಕು ಎಂದು ರಾಷ್ಟçಕವಿಯ ಬದುಕಿನ ಕುರಿತು ವಿವರಿಸಿದರು.ಸಂಘದ ಪದಾಧಿಕಾರಿಗಳಾದ ರಮೇಶ್ ಕೆ., ಮಂಜುನಾಥ ವಿ.ಎ., ಶಿವಕುಮಾರ್ ಜಿ.ಎಂ., ರಾಜೇಶ್ ವಿ.ಸಿ., ವಿನಾಯಕ ಕೆರೆಮನೆ, ಬೆಳ್ಳಿಯಪ್ಪ ಹಾಗೂ ಧನಂಜಯ ಎಂ. ಹಾಜರಿದ್ದು ಗೌರವ ಅರ್ಪಿಸಿದರು.