ದೂರದರ್ಶನ ಕೇಂದ್ರ ಮುಚ್ಚದಂತೆ ಕೇಂದ್ರದ ಮೇಲೆ ಒತ್ತಡ ತನ್ನಿ: ಕಮಕನೂರ್‌ ಆಗ್ರಹ

| Published : Aug 13 2025, 12:30 AM IST

ದೂರದರ್ಶನ ಕೇಂದ್ರ ಮುಚ್ಚದಂತೆ ಕೇಂದ್ರದ ಮೇಲೆ ಒತ್ತಡ ತನ್ನಿ: ಕಮಕನೂರ್‌ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ದಕ್ಷಿಣ ಭಾರತದ ಮೊಟ್ಟಮೊದಲ ದೂರದರ್ಶನ ಕೇಂದ್ರವೆಂಬ ಹೆಗ್ಗಳಿಕೆಯ ಕಲಬುರಗಿ ದೂರದರ್ಶನ ಕೇಂದ್ರದ ಪ್ರಸಾರ ಸ್ಥಗಿತಗೊಳಿಸಿ ಮುಚ್ಚಲು ಹೊರಟಿರುವ ಕೇಂದ್ರದ ನಡೆ ಖಂಡನೀಯ. ತಕ್ಷಣ ರಾಜ್ಯ ಸರ್ಕಾರ, ಮುಖ್ಯಮಂತ್ರಿಗಳು ಈ ಬೆಳವಣಿಗೆ ತಡೆ ಹಿಡಿಯಬೇಕು, ಕೇಂದ್ರದ ಜೊತೆ ಮಾತುಕತೆ ನಡೆಸಬೇಕು ಎಂದು ಮೇಲ್ಮನೆಯಲ್ಲಿಂದು ಶೂನ್ಯ ವೇಳೆಯಲ್ಲಿ ಎಂಎಲ್‌ಸಿ ತಿಪ್ಪಣ್ಣ ಕಮಕನೂರ್‌ ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

1977ರ ಸೆ. 3ರಂದು ಕಲಬುರಗಿಯಲ್ಲಿ ದೂರದರ್ಶನ ಕೇಂದ್ರ ಆರಂಭವಾಗಿತ್ತು. ಇದೀಗ ಒಂದೊಂದೇ ಕಾರ್ಯಕ್ರಮ ನಿಲ್ಲಿಸಿ ಇದನ್ನು ಮುಚ್ಚುವ ಹುನ್ನಾರ ನಡೆಸುತ್ತಿದ್ದಾರೆ. ಕಲಂ 371 (ಜೆ) ಅಡಿಯಲ್ಲಿರುವ ಕಲಬುರಗಿ ಹಂದುಳಿದ ಪ್ರದೇಶ, ದೂರದರ್ಶನ ಕೇಂದ್ರ ಇಲ್ಲಿನ ಹೆಗ್ಗಳಿಕೆಯಾಗಬೇಕೇ ವಿನಹಃ ಮುಚ್ಚಬಾರದು ಎಂದು ಕಮಕನೂರ್‌ ಸರ್ಕಾರದ ಗಮನ ಸೆಳೆದಿದ್ದಾರೆ.

ಸಾಂಸ್ಕೃತಿಕವಾಗಿ ತುಬಂ ಸಿರಿವಂತವಾಗಿರುವ ಕಲಬುರಗಿ ಸೇರಿದಂತೆ ಕಲ್ಯಾಣ ನಾಡಲ್ಲಿ ಇಂತಹ ಕೇಂದ್ರ ಅಗತ್ಯವಾಗಿದೆ. ದೂರದರ್ಶನ ಕೇಂದ್ರ ಮುಚ್ಚದಂತೆ ಕೇಂದ್ರದ ಮೇಲೆ ಒತ್ತಡ ತರುವ ಕೆಲಸವಾಗಬೇಕು ಎಂದೂ ತಿಪ್ಪಣ್ಣ ಕಮಕನೂರ್‌ ಸದನದ ಗಮನ ಸೆಳೆದಿದ್ದಾರೆ.