ರಾಮನಗರ: ಶಿಕ್ಷಕರ ಕ್ಷೇತ್ರದಲ್ಲಿ ಯಾವುದೇ ಜಾತಿ, ಧರ್ಮ ಅಥವಾ ಪಕ್ಷಕ್ಕೆ ಸೀಮಿತವಾಗಿ ಕೆಲಸ ಮಾಡಲು ಆಗುವುದಿಲ್ಲ. ಶಿಕ್ಷಕರೊಂದಿಗೆ ಒಡನಾಟ ಇಟ್ಟುಕೊಂಡು, ಪ್ರತಿ ಹಂತದಲ್ಲೂ ಅವರ ಸಮಸ್ಯೆಗಳ ಪರ ವಿಧಾನ ಪರಿಷತ್ನಲ್ಲಿ ಧ್ವನಿ ಎತ್ತುವ ಕೆಲಸ ಮಾಡಿದ್ದರಿಂದಲೇ ಎಲ್ಲ ಪಕ್ಷಗಳಿಂದಲು ಗೆಲುವು ಸಾಧಿಸಿರುವ ಪುಟ್ಟಣ್ಣ ಪಕ್ಷಾತೀತ ನಾಯಕ ಎನಿಸಿಕೊಂಡಿದ್ದಾರೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿದರು
ರಾಮನಗರ: ಶಿಕ್ಷಕರ ಕ್ಷೇತ್ರದಲ್ಲಿ ಯಾವುದೇ ಜಾತಿ, ಧರ್ಮ ಅಥವಾ ಪಕ್ಷಕ್ಕೆ ಸೀಮಿತವಾಗಿ ಕೆಲಸ ಮಾಡಲು ಆಗುವುದಿಲ್ಲ. ಶಿಕ್ಷಕರೊಂದಿಗೆ ಒಡನಾಟ ಇಟ್ಟುಕೊಂಡು, ಪ್ರತಿ ಹಂತದಲ್ಲೂ ಅವರ ಸಮಸ್ಯೆಗಳ ಪರ ವಿಧಾನ ಪರಿಷತ್ನಲ್ಲಿ ಧ್ವನಿ ಎತ್ತುವ ಕೆಲಸ ಮಾಡಿದ್ದರಿಂದಲೇ ಎಲ್ಲ ಪಕ್ಷಗಳಿಂದಲು ಗೆಲುವು ಸಾಧಿಸಿರುವ ಪುಟ್ಟಣ್ಣ ಪಕ್ಷಾತೀತ ನಾಯಕ ಎನಿಸಿಕೊಂಡಿದ್ದಾರೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿದರು.
ನಗರದಲ್ಲಿ ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ಪ್ರಯುಕ್ತ ಭಾನುವಾರ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಪರ ಮತಯಾಚಿಸುವ ಸಭೆಯಲ್ಲಿ ಮಾತನಾಡಿದ ಅವರು, ಪುಟ್ಟಣ್ಣನವರು ವರ್ಷದ 365 ದಿನವೂ ನಿಮ್ಮ ಕಷ್ಟಗಳಿಗೆ ಸ್ಪಂದಿಸುತ್ತಾರೆ. ಯಾರೇ ಶಿಕ್ಷಕರು ಹೋದರೂ ಅವರಿಗೆ ಸ್ಪಂದಿಸುತ್ತಾರೆ. ಯಾಕೆಂದರೆ ಅವರು ಇಚ್ಛಾಶಕ್ತಿಯ ನಾಯಕ. ಯಾವುದೇ ಚುನಾವಣೆಗಳನ್ನು ಕೇವಲವಾಗಿ ಕಾಣದೆ, ಮತದಾರರ ಮನವೊಲಿಕೆಯ ನಿರಂತರ ಪ್ರಯತ್ನದಿಂದ ಮಾತ್ರ ನಿರೀಕ್ಷಿತ ಜಯವನ್ನು ಕಾಣಲು ಸಾಧ್ಯ. ಚುನಾವಣೆಗಳಲ್ಲಿ ಗೆದ್ದೆ ಬಿಡುತ್ತೇವೆ ಎಂಬ ಅತಿ ಆತ್ಮವಿಶ್ವಾಸ ಬೇಡ. ಮತದಾನದ ಕೊನೆ ಗಳಿಗೆವರೆಗೆ ಮತದಾರರ ಮನವೊಲಿಕೆ ಮಾಡಬೇಕು. ಚುನಾವಣೆಗಳು ನಮ್ಮ ಪರವಾಗಿದೆ ಎಂಬ ವಾತಾವರಣ ಮೇಲ್ನೋಟಕ್ಕೆ ಕಂಡರೂ ವಾಸ್ತವ ಸ್ಥಿತಿ ನಮ್ಮ ಪರವಾಗಿ ಇರಲ್ಲ ಎಂಬುದಕ್ಕೆ ನನ್ನ ಚುನಾವಣೆಯೇ ಸಾಕ್ಷಿ ಎಂದು ಎಚ್ಚರಿಕೆಯ ಸಂದೇಶ ನೀಡಿದರು.ಜೆಡಿಎಸ್, ಬಿಜೆಪಿ ಬಳಿಕ ಕಾಂಗ್ರೆಸ್ ಪಕ್ಷದಿಂದಲೂ ಪುಟ್ಟಣ್ಣ 5 ಬಾಕಿ ಗೆಲುವು ಸಾಧಿಸಿದ್ದಾರೆ ಎಂದರೆ ಅದು ಶಿಕ್ಷಕರು ಮತ್ತು ಅವರ ನಡುವಿನ ಉತ್ತಮ ಬಾಂಧವ್ಯ ತೋರಿಸುತ್ತದೆ. ಹೊಸಬರು ನಿಮ್ಮ ಸಮಸ್ಯೆ ಅರಿತುಕೊಳ್ಳುವಷ್ಟರಲ್ಲಿ ಅವಧಿ ಮುಗಿದು, ಶಿಕ್ಷಕರ ಸಮಸ್ಯೆಗಳು ಉಲ್ಬಣಗೊಂಡಿರುತ್ತವೆ. ಶಿಕ್ಷಕರ ಧ್ವನಿಯಾಗಿ ಸರ್ಕಾರದಲ್ಲಿ ಕೆಲಸ ಮಾಡುವ ಚಾಕಚಕ್ಯತೆ ಪುಟ್ಟಣ್ಣ ಅವರಲ್ಲಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶಿಕ್ಷಕರ ಸಮಸ್ಯೆ ಬಗೆಹರಿಸಲು ಸಿದ್ಧರಾಗಿದ್ದಾರೆ. ಎಲ್ಲ ಶಿಕ್ಷಕರ ಸಮಸ್ಯೆ ಬಗೆಹರಿಸುವ ಇಚ್ಚಾಸಕ್ತಿ ಪುಟ್ಟಣ್ಣ ಅವರಲ್ಲಿದೆ. ದೂರದ ಬೆಟ್ಟ ಯಾವಾಗಲು ನುಣ್ಣಗೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಕರಿ ಕೋಟ್ ಹಾಕಿಕೊಂಡು, ದೊಡ್ಡ ನಾಯಕರ ಜೊತೆ ಓಡಾಡುತ್ತಾರೆಂದು ಭಾವಿಸಿದರೆ ತಪ್ಪು. ಕೆಲಸ ಮಾಡುವವರು ಶೋ ತೋರಿಸಲ್ಲ. ಇದನ್ನು ಅರಿತು ಪುಟ್ಟಣ್ಣ ಅವರಿಗೆ ಮೊದಲ ಪ್ರಾಶಸ್ತ್ಯ ಮತ ಚಲಾಯಿಸಿ ಆಯ್ಕೆ ಮಾಡಿಕೊಳ್ಳುವತ್ತ ಪ್ರಬುದ್ದ ಶಿಕ್ಷಕರು ಚಿಂತಿಸಬೇಕು ಎಂದು ಹೇಳಿದರು.6 ನೇ ಬಾರಿ ಆಯ್ಕೆ ಮಾಡಿ ಇತಿಹಾಸ ಸೃಷ್ಟಿಸಿ:
ಶಾಸಕ ಇಕ್ಬಾಲ್ ಹುಸೇನ್ ಮಾತನಾಡಿ, ಪುಟ್ಟಣ್ಣನವರು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು ಪಕ್ಷಾತೀತವಾಗಿ ಕೆಲಸ ಮಾಡುವ ನಾಯಕ. ಮನೆ ಮಗನ ರೀತಿ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡುತ್ತಿದ್ದಾರೆ. ಶಿಕ್ಷಕರ ಪರವಾಗಿ ಸದಾ ಚಿಂತಿಸುವ ಪುಟ್ಟಣ್ಣ ಅವರನ್ನು ಗೆಲ್ಲಿಸಿ ಮತದಾರರು ಇತಿಹಾಸ ಸೃಷ್ಟಿಸಿ ರಾಜ್ಯಕ್ಕೆ ಸಂದೇಶ ರವಾನಿಸಬೇಕು ಎಂದು ತಿಳಿಸಿದರು.ಕಾಂಗ್ರೆಸ್ ಅಭ್ಯರ್ಥಿ ಆಗಿದ್ದರು ಪುಟ್ಟಣ್ಣ ಅವರಿಗೆ ಬಿಜೆಪಿ, ಜೆಡಿಎಸ್ ಪಕ್ಷದವರು ಅವರನ್ನು ಇಷ್ಟ ಪಡುತ್ತಾರೆ. ಅಷ್ಟೆ ಅಲ್ಲದೆ ಅವರೆಲ್ಲರ ಬೆಂಬಲವೂ ಸಿಗುತ್ತಿದೆ. ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳ ಜೊತೆ ಅವಿನಾಭಾವ ಸಂಬಂಧ ಹೊಂದಿದ್ದಾರೆ. ಪುಟ್ಟಣ್ಣ ಗೆಲುವು ಸಾಧಿಸುವುದರಲ್ಲಿ ಯಾವ ಅನುಮಾನವೂ ಇಲ್ಲ. ಹಾಗೆಂದು ಮತದಾರ ಶಿಕ್ಷಕರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ನಿರ್ಲಕ್ಷ್ಯ ವಹಿಸಬಾರದು ಎಂದು ಕಿವಿಮಾತು ಹೇಳಿದರು.
ಸರ್ಕಾರಿ ನೌಕರರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಆರ್ .ಕೆ.ಭೈರಲಿಂಗಯ್ಯ ಮಾತನಾಡಿ, ಪುಟ್ಟಣ್ಣನವರು ಶಿಕ್ಷಕರು ಮತ್ತು ಉಪನ್ಯಾಸಕರ ವಿಶ್ವಾಸ ಗಳಿಸಿರುವುದಲ್ಲದೆ, ಪಕ್ಷಾತೀತ ನಾಯಕ ಪುಟ್ಟಣ್ಣ ಅವರದು ಶಿಕ್ಷಕ ಮತ್ತು ಉಪನ್ಯಾಸಕರ ಪಕ್ಷ. ಈ ಕಾರಣದಿಂದಲೇ ಚುನಾವಣೆಗಳಲ್ಲಿ ಗೆಲುವು ಸಾಧಿಸುತ್ತಾ ಬಂದಿದ್ದಾರೆ ಎಂದರು.ಸಭೆಯಲ್ಲಿ ಅನುದಾನ ರಹಿತ ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪ್ರದೀಪ್, ಅಲ್ಪ ಸಂಖ್ಯಾತ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಅಜ್ಗರ್ ಮಾತನಾಡಿದರು. ಕೆಎಂಎಫ್ ಮಾಜಿ ಅಧ್ಯಕ್ಷ ಪಿ.ನಾಗರಾಜ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿಎನ್ ಆರ್ ವೆಂಕಟೇಶ್, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ಜಿಪಂ ಮಾಜಿ ಅಧ್ಯಕ್ಷ ಬಸಪ್ಪ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಚ್.ರಾಜು, ಮಾಜಿ ಅಧ್ಯಕ್ಷ ಜಯಣ್ಣ, ಬಮೂಲ್ ನಿರ್ದೇಶಕ ಲಿಂಗೇಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಕೋಟ್ ...ಶಿಕ್ಷಕರ ಸ್ಥಾನ ಪವಿತ್ರವಾದದ್ದು. ಆ ಕ್ಷೇತ್ರ ಪ್ರತಿನಿಧಿಸಿರುವ ಪುಟ್ಟಣ್ಣ ಅವರಲ್ಲಿ ಸರಳತೆ, ಸಂಯಮ, ಉತ್ತಮ ಬಾಂಧವ್ಯ ಗುಣಗಳಿದ್ದು, ಜೊತೆಗೆ ಶಿಕ್ಷಕರ ಬಗ್ಗೆ ಹಗಲಿರುಳು ಚಿಂತನೆ ಮಾಡುತ್ತಾರೆ. ಅವರಿಗೆ ಮತ್ತೊಮ್ಮೆ 6ನೇ ಬಾರಿಗೆ ಶಕ್ತಿ ತುಂಬಿ. ಚುನಾಣೆಗಳಲ್ಲಿ ಒಂದೊಂದು ಮತವೂ ಬಹಳ ಮುಖ್ಯ.
-ಇಕ್ಬಾಲ್ ಹುಸೇನ್, ಶಾಸಕರುಕೋಟ್............
ಗ್ರಾಮಾಂತರ ಪ್ರದೇಶದ ಸಹಕಾರಿ ಚುನಾವಣೆಗಳಲ್ಲಿ ಅವಿದ್ಯಾವಂತ ರೈತರು ಸರಿಯಾಗಿ ಮತ ಹಾಕುತ್ತಾರೆ. ಆದರೆ, ಶಿಕ್ಷಕರ ಕ್ಷೇತ್ರ ಚುನಾವಣೆಯಲ್ಲಿ ಶಿಕ್ಷಕರ ಮತಗಳೇ ತಿರಸ್ಕೖತವಾಗುತ್ತಿವೆ. ಚುನಾವಣೆಗಳಲ್ಲಿ ಮತ ಎಣಿಕೆ, ಮತ ತಿರಸ್ಕೃತ ಮಾಡುವವರೇ ಶಿಕ್ಷಕರು. ಆದರೀಗ ಶಿಕ್ಷಕರ ಮತಗಳೇ ಪುರಸ್ಕೃತ ಆಗುತ್ತಿಲ್ಲ. ಶಿಕ್ಷಕ ವರ್ಗ ಮತದಾನ ಮಾಡುವಾಗ ಅತಿ ಬುದ್ಧಿವಂತಿಕೆ ಪ್ರದರ್ಶನ ಮಾಡದೆ ಮೊದಲ ಪ್ರಾಶಸ್ತ್ಯ ಮತ ನೀಡಿ ಪುಟ್ಟಣ್ಣ ಅವರನ್ನು ಆಯ್ಕೆ ಮಾಡಿ.- ಡಿ.ಕೆ.ಸುರೇಶ್, ಅಧ್ಯಕ್ಷರು, ಬಮೂಲ್
18ಕೆಆರ್ ಎಂಎನ್ 1.ಜೆಪಿಜಿರಾಮನಗರದಲ್ಲಿ ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ಪ್ರಯುಕ್ತ ಭಾನುವಾರ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಪರ ಪ್ರಚಾರ ಸಭೆಯಲ್ಲಿ ಡಿ.ಕೆ.ಸುರೇಶ್ ಮಾತನಾಡಿದರು.