ಚೆಟ್ಟಳ್ಳಿ ಕೊಡವ ಸಮಾಜದ ವತಿಯಿಂದ ಪುತ್ತರಿ ಊರೊರ್ಮೆ ಕೂಟ ಮಂಗಳ ಸಭಾಂಗಣದಲ್ಲಿ ನಡೆಯಿತು.
ಕನ್ನಡಪ್ರಭ ವಾರ್ತೆ ಚೆಟ್ಟಳ್ಳಿ
ಚೆಟ್ಟಳ್ಳಿ ಕೊಡವ ಸಮಾಜದ ವತಿಯಿಂದ ಪುತ್ತರಿ ಊರೊರ್ಮೆ ಕೂಟ ಮಂಗಳ ಸಭಾಂಗಣದಲ್ಲಿ ನಡೆಯಿತು.ಮೊದಲಿಗೆ ಕೊಡವ ಸಂಪ್ರದಾಯದ ದುಡಿಕೊಟ್ಟ್ ನೊಂದಿಗೆ ಸಭಾಂಗಣಕ್ಕೆ ತೆರಳಲಾಯಿತು. ಪಳಂಗಡ ಗೀತಾ ಸುಬ್ಬಯ್ಯ ಪ್ರಾರ್ಥಿಸಿ ಸಮಾಜದ ಅಧ್ಯಕ್ಷ ಮುಳ್ಳಂಡ ರತ್ತುಚಂಗಪ್ಪ ಸ್ವಾಗತಿಸಿದರು.
ಪುರುಷ, ಮಹಿಳೆಯರಿಗೆ ಹಾಗು ದಂಪತಿಗಳಿಗೆ ವಿವಿಧ ಮನೋರಂಜನಾ ಕ್ರೀಡೆಯನ್ನು ಆಯೋಜಿಸಲಾಗಿತ್ತು. ಮಹಿಳೆಯರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಸಮಾಜದ ಅಧ್ಯಕ್ಷರಾದ ಮುಳ್ಳಂಡ ರತ್ತು ಚಂಗಪ್ಪ ಮಾತನಾಡಿ, ಕೊಡವ ಜನಾಂಗ ಉಳಿವು ಐನ್ ಮನೆಯಿಂದಲೇ ಪ್ರಾರಂಭಗೊಳ್ಳಬೇಕು. ಒಡಹುಟ್ಟಿದ ಸಹೋದರು, ಕುಟುಂಬದವರು ಒಗಟ್ಟಾದಾಗ ಮಾತ್ರವೇ ಕೊಡವರ ಉಳಿವು ಸಾಧ್ಯ ಎಂದರು. ಎಲ್ಲರು ಒಗ್ಗಟ್ಟಿನಿಂದ ಸಮಾಜದ ಅಭಿವೃದ್ಧಿಗೆ ಸಹಕರಿಸಬೇಕು ಎಂದರು. ನಿರ್ದೇಶಕರಾದ ಬಟ್ಟೀರ ರಕ್ಷುಕಾಳಪ್ಪ ಪುತ್ತರಿ ಹಬ್ಬದ ವಿಶೇಷತೆಯ ಬಗ್ಗೆ ವಿವರಿಸಿದರು. ನಂತರ ಕ್ರೀಡಾ ವಿಜೇತರಿಗೆ ಬಹುಮಾನ ವಿತರಿಸಿದರು.
ಸಮಾಜದ ಉಪಾಧ್ಯಕ್ಷ ಬಿದ್ದಂಡ ಮಾದಯ್ಯ, ಕಾರ್ಯದರ್ಶಿ ಪುತ್ತರಿರ ಕಾಳಯ್ಯ, ಜಂಟಿಕಾರ್ಯದರ್ಶಿ ಮುಳ್ಳಂಡ ಶೋಭಾಚಂಗಪ್ಪ, ಖಜಾಂಜಿ ಕೆಚ್ಚೆಟ್ಟೀರ ರತಿ ಕಾರ್ಯಪ್ಪ, ಜಂಟಿ ಕಾರ್ಯದರ್ಶಿ ಐಚೆಟ್ಟೀರ ಮಾಚಯ್ಯ, ಕಾನೂನು ಸಲಹೆಗಾರರಾದ ಕಡೇಮಡ ವಿನ್ಸಿ ಅಪ್ಪಯ್ಯ, ನಿರ್ದೇಶಕರಾದ ಬಟ್ಟೀರ ರಕ್ಷು ಕಾಳಪ್ಪ, ಪುತ್ತರಿರ ಕಾಶಿ ಸುಬ್ಬಯ್ಯ, ಅಡಿಕೇರಿ ಶಾಂತಿ ಮುತ್ತಪ್ಪ, ಬಲ್ಲಾರಂಡ ರಾಜಪ್ಪ, ಮುಳ್ಳಂಡ ಮಾಯಮ್ಮ, ಐಚೆಟ್ಟೀರ ಸುನಿತಾ ಮಾಚಯ್ಯ ಹಾಗೂ ಸಮಾಜದ ಸದಸ್ಯರು ಭಾಗವಹಿಸಿದರು. ಕೊನೆಯಲ್ಲಿ ಮುಳ್ಳಂಡ ಶೋಭಾಚಂಗಪ್ಪ ವಂದಿಸಿದರು.