ನರೇಗಾದಡಿ 133 ಅಭಿವೃದ್ಧಿ ಕಾಮಗಾರಿ

| Published : Aug 25 2024, 01:55 AM IST

ಸಾರಾಂಶ

133 ಕಾಮಗಾರಿಗಳಲ್ಲಿ 43 ಮನೆ ನಿರ್ಮಾಣ, 18 ದನದ ಕೊಟ್ಟಿಗೆ, 31 ಶೌಚಾಲಯ,

ಕನ್ನಡಪ್ರಭ ವಾರ್ತೆ ಟಿ. ನರಸೀಪುರ

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆಯಡಿ ಸಾಮಾಜಿಕ ಅರಣ್ಯ, ಕೃಷಿ ಮತ್ತು ರೇಷ್ಮೆ ಇಲಾಖೆ ಸೇರಿದಂತೆ ಒಟ್ಟಾರೆ 133 ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಟಿ. ದೊಡ್ದಪುರ ಗ್ರಾಪಂ ಅಧ್ಯಕ್ಷ ಪುಟ್ಟಸ್ವಾಮಿ ಹೇಳಿದರು.

ತಾಲೂಕಿನ ಟಿ. ದೊಡ್ಡಪುರ ಗ್ರಾಪಂ ಆವರಣದಲ್ಲಿ ನಡೆದ ಸಾಮಾಜಿಕ ಪರಿಶೋಧನೆ ಗ್ರಾಮ ಸಭೆಯಲ್ಲಿ ಮಾತನಾಡಿದ ಅವರು, 133 ಕಾಮಗಾರಿಗಳಲ್ಲಿ 43 ಮನೆ ನಿರ್ಮಾಣ, 18 ದನದ ಕೊಟ್ಟಿಗೆ, 31 ಶೌಚಾಲಯ, ಎರಕಟ್ಟೆ ಹಾಗೂ ಜಮೀನು ಸಮತಟ್ಟು ಮಾಡಲು ತಲಾ ಒಂದೊಂದು ಕಾಮಗಾರಿ ಆಯ್ಕೆ ಮಾಡಿಕೊಂಡಿದ್ದು, ಅರಣ್ಯೀಕರಣ ನಿರ್ವಹಣೆ 1, ನೀರುಗಾಲುವೆ 30 ಹಾಗೂ ರೇಷ್ಮೆ ಅಭಿವೃದ್ಧಿಗೆ 2 ಕಾಮಗಾರಿಗಳನ್ನು ಕೈಗೊಳ್ಳಲು ಯೋಜನೆ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ನೋಡೆಲ್ ಅಧಿಕಾರಿ ಪುಟ್ಟಸ್ವಾಮಿ ಮಾತನಾಡಿ, ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಮಹಾತ್ಮ ಗಾಂಧಿ ನರೇಗಾ ಯೋಜನೆ ಪೂರ್ಕವಾಗಿದೆ. ಹಳ್ಳಿಗಾಡಿನ ಜನರಿಗೆ ಮೂಲಭೂತ ಸೌಕರ್ಯವನ್ನು ಸಮರ್ಪಕವಾಗಿ ಕಲ್ಪಿಸಲು ಹದಿನೈದನೇ ಹಣಕಾಸನ್ನು ಬಳಸಿಕೊಳ್ಳಬೇಕು. ಈ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರು ಒಮ್ಮತದ ನಿರ್ಣಯ ಕೈಗೊಂಡು ಅಭಿವೃದ್ಧಿ ಯೋಜನೆಗಳನ್ನು ರೂಪಿಸಬೇಕೆಂದು ಸಲಹೆ ನೀಡಿದರು.

ಉಪಾಧ್ಯಕ್ಷೆ ಮಂಜುಳ, ಅಭಿವೃದ್ಧಿ ಅಧಿಕಾರಿ ಕೆ.ಜಿ. ದಯಾನಂದ, ಸದಸ್ಯರಾದ ಜಯಬಸವಣ್ಣ, ಬಸಮ್ಮಣ್ಣಿ, ನಿಜಗುಣ, ಆರ್. ಭಾರತಿ, ಎಸ್. ಗುರುಪ್ರಸಾದ್

ಸುಕನ್ಯ, ರಾಜೇಶ, ಆರ್. ಮಾದೇಶ, ಎಂ. ರಾಜೇಶ, ಚಿಕ್ಕತಾಯಮ್ಮ, ಪ್ರತಾಪ್, ಮಹದೇವಮ್ಮ, ರೇಖಾ, ಕಾರ್ಯದರ್ಶಿ ಎಚ್.ಕೆ. ಶಿವರಾಜು, ಮಾಜಿ ಸದಸ್ಯ ಡಿ.ಎಂ. ಪರಶಿವಮೂರ್ತಿ ಇದ್ದರು.